Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಆಗ್ರಾ: ಸೆಪ್ಟಿಕ್‌ ಟ್ಯಾಂಕ್‌ ವಿಷಾನಿಲಕ್ಕೆ ಒಂದೇ ಕುಟುಂಬದ ಮೂವರ ಸಾವು

ಆಗ್ರಾ : ನಗರಕ್ಕೆ ಸಮೀಪದ ಬರ್‌ಹಾನ್‌ ಪಟ್ಟಣದಲ್ಲಿ ಸೆಪ್ಟಿಕ್‌ ಟ್ಯಾಂಕ್‌ನಿಂದ ವಿಷಾನಿಲ ಸೋರಿದ ಕಾರಣ ಒಂದೇ ಕುಟುಂಬದ ಮೂವರು ಮೃತಪಟ್ಟು ಇತರ 8 ಮಂದಿ ತೀವ್ರವಾಗಿ ಅಸ್ವಸ್ಥರಾದ ಘಟನೆ ವರದಿಯಾಗಿದೆ.

ತರಕಾರಿ ವ್ಯಾಪಾರಿ ಹೀರಾ ಸಿಂಗ್‌ ಅವರಿಗೆ ಸೇರಿದ ಸೆಪ್ಟಿಕ್‌ ಟ್ಯಾಂಕ್‌ ಕ್ಲೀನ್‌ ಮಾಡುತ್ತಿದ್ದ ವೇಳೆ ಅದರಿಂದ ಹೊರಹೊಮ್ಮಿದ ವಿಷಾನಿಲ ಅವರ  ಕುಟುಂಬದ ಮೂವರನ್ನು ಬಲಿ ಪಡೆಯಿತು ಎಂದು ಸರ್ಕಲ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಅತುಲ್‌ ಸೋನ್‌ಕಾರ್‌ ಮಾಹಿತಿ ನೀಡಿದರು.

ವಿಷಾನಿಲ ಸೇವಿಸಿ ತೀವ್ರವಾಗಿ ಅಸ್ವಸ್ಥರಾಗಿರುವ ಎಂಟು ಮಂದಿಯನ್ನು ನಿನ್ನೆ ಮಂಗಳವಾರ ತಡ ರಾತ್ರಿ ಎಸ್‌ ಎನ್‌ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ ಸೇರಿಸಲಾಯಿತು. ಮೃತಪಟ್ಟ ಮೂವರೆಂದರ ಹೀರಾ ಸಿಂಗ್‌, ಆತನ ಇಬ್ಬರು ಪುತ್ರರಾದ ಯಶ್‌ಪಾಲ್‌ ಮತ್ತು ಹೇಮಂತ್‌.

ದುರ್ಘ‌ಟನೆ ನಡೆದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಯುವಲ್ಲಿ ವಿಳಂಬವಾಯಿತೆಂದು ನೆರೆಕರೆಯವರು ಮತ್ತು ಮೃತರ ಕುಟುಂಬ ಸದಸ್ಯರು ದೂರಿದ್ದಾರೆ. ಆಕ್ಸಿಜನ್‌ ವ್ಯವಸ್ಥೆ ಇರುವ ಅಂಬುಲೆನ್ಸ್‌  ವ್ಯಾನ್‌ ಒಂದೊಮ್ಮೆ ಸಕಾಲದಲ್ಲಿ ರಕ್ಷಣೆಗೆ ಬರುತ್ತಿದ್ದರೆ ಕೆಲವು ಜೀವಗಳಾದರೂ ಉಳಿಯುತ್ತಿದ್ದವು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

No Comments

Leave A Comment