Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ದಂತ ವೈದ್ಯೆಯ ನಟನಾ ಪ್ರೀತಿ; ಸ್ಯಾಂಡಲ್’ವುಡ್’ಗೆ ಹೊಸ ನಟಿ ಎಂಟ್ರಿ

ಬಣ್ಣಗಳ ಮೇಲಿನ ಆಕರ್ಷನೆ, ನಟನೆ ಮೇಲಿದ್ದ ಪ್ರೀತಿ ದಂತ ವೈದ್ಯೆಯಾಗಿದ್ದ ನೀತು ಗೌಡ ಅವರನ್ನು ಚಿತ್ರರಂಗದತ್ತ ಆಕರ್ಷಿತರಾಗುವಂತೆ ಮಾಡಿತು.
ಚಿಕ್ಕಂದಿನಿಂದಲೂ ಮೇಕಪ್ ಹಾಗೂ ಫ್ಯಾಷನ್ ಬಗ್ಗೆ ಅತೀಯಾದ ಪ್ರೀತಿ ಬೆಳೆಸಿಕೊಂಡಿದ್ದ ನೀತುರ ಅವರಿಗೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅವರ ಅಮ್ಮ ಸ್ಪೂರ್ತಿಯಾಗಿದ್ದಾರೆ. ಅಪ್ಪನ ಬಯಕೆಯಂತೆಯೇ ದಂತ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ್ದ ನೀತು ಅವರ ಮಾಡೆಲಿಂಗ್ ಹಾಗೂ ಸಿನಿಮಾ ಕನಸಿಗೆ ಕೆಲ ವರ್ಷಗಳ ಹಿಂದಷ್ಟೇ ಮನೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟಿದ್ದ ನೀತು ಅವರು ಇದೀಗ ವಿ.ಸಮುದ್ರ ನಿರ್ದೇಶದನ ರಣಂ ಚಿತ್ರದ ಮೂಲಕ ಸ್ಯಾಂಡಲ್ ವುಡ್’ಗೆ ಎಂಟ್ರಿ ಕೊಟ್ಟಿದ್ದಾರೆ.
ನನ್ನ ತಾಯಿ ನಾಯಕಗಳಲ್ಲಿ ಪಾತ್ರ ಮಾಡುತ್ತಿದ್ದರು. ನಟನೆಗೆ ನನ್ನ ತಾಯಿಯೇ ನನಗೆ ಸ್ಫೂರ್ತಿಯಾಗಿದ್ದಾರೆ. ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿದ್ದೇನೆ. ಚಿತ್ರದ ಹಾಡುಗಳ ಚಿತ್ರೀಕರಣದಲ್ಲಿ ನಟಿಸಿದ್ದೆ. ಮುಂದಿನ ಚಿತ್ರೀಕರಣ ಜೂನ್ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ನೀತು ಗೌಡ ಅವರು ಹೇಳಿದ್ದಾರೆ.
ದಂತ ವೈದ್ಯೆಯಾಗಬೇಕೆಂದು ನನ್ನ ತಂದೆ ಬಯಸಿದ್ದರು. ಕನಿಷ್ಟ ಪಕ್ಷ ಪದವಿಯನ್ನಾದರೂ ಪಡೆದುಕೊಳ್ಳಬೇಕೆಂದು ಬಯಸಿದ್ದರು. ನಟನಾ ಭವಿಷ್ಯ ಕೂಡ ನನ್ನ ಯೋಜನೆಯಂತೆ ನಡೆಯಲಿಲ್ಲ. ಹೀಗಾಗಿ ಶಿಕ್ಷಣವನ್ನು ಮೊದಲು ಪೂರ್ಣಗೊಳಿಸುವಂತೆ ತಂದೆ ಸೂಚಿಸಿದ್ದರು. ನಟನಾ ಭವಿಷ್ಯದ ಕುರಿತು ದೊಡ್ಡ ದೊಡ್ಡ ಮುಂದಾಲೋಚನೆಗಳಾವುದನ್ನೂ ಮಾಡಿಲ್ಲ. ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದೇನೆ. ಉತ್ತಮ ಚಿತ್ರಗಳು ದೊರಕಲಿ ಎಂದು ಬಯಸುತ್ತೇನೆ. ದೊಡ್ಡ ಪರದೆಯಲ್ಲಿ ನನ್ನನ್ನು ನಾನು ನೋಡಿಕೊಂಡ ಬಳಿಕ ಮುಂದಿನ ಹೆಜ್ಜೆ ಬಗ್ಗೆ ಸ್ಪಷ್ಟತೆಗಳು ಸಿಗಲಿದೆ ಎಂದು ತಿಳಿಸಿದ್ದಾರೆ.
No Comments

Leave A Comment