Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಸಿಗಂಧೂರಿನಿಂದ ಮರಳುತ್ತಿದ್ದ ಬಸ್‌ ಶಿರಾ: ನಿಂತಿದ್ದ ಲಾರಿಗೆ ಯಾತ್ರಿಕರಿದ್ದ ಬಸ್ ಡಿಕ್ಕಿ, 8 ಜನರ ಸಾವು

ಶಿರಾ(ತುಮಕೂರು): ಶಿರಾ ನಗರದಿಂದ ಮೂರು ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 48 ರ ಜೈ ಹಿಂದ್ ಡಾಬಾ ಬಳಿ ನಿಂತಿದ್ದ ಲಾರಿಗೆ ಯಾತ್ರಿಗಳಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದು 8 ಮಂದಿ ಮೃತಪಟ್ಟಿದ್ದಾರೆ.

ಹೆದ್ದಾರಿ ಎಡ ಭಾಗದಲ್ಲಿ ನಿಂತಿದ್ದ ಲಾರಿಗೆ ಇಂಡಿಕೇಟರ್ ಹಾಕಿರಲಿಲ್ಲ. ಅತೀ ವೇಗದಲ್ಲಿ ಬಂದ ಹನುಮಾನ್ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಇದಕ್ಕೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಸವಿತಾ ಸೋಮಶೇಖರ್(21), ಅನುಷಾ(7), ರತ್ನಮ್ಮ ಕುಮಾರ್ (39), ಸುಮಲತಾ ಲಿಂಗರಾಜು(21), ಗಿರಿಜಮ್ಮ ದೇವರಾಜು(55), ಶಿರಾ ಜ್ಯೋತಿನಗರದ ಶಂಕರ್ ಈಶ್ವರಪ್ಪ(38) ,ಅಶ್ವತ್ಥ್ ನಾರಾಯಣ (40) ಮೃತಪಟ್ಟಿದ್ದಾರೆ. 16 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಜಿಲ್ಲಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲರೂ ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನಕ್ಕೆ ಮೇ 19ರಂದು ತೆರಳಿದ್ದರು. ಮೇ 20 ರಂದು ರಾತ್ರಿ ಹಿಂದಿರುಗಿ ಬರುತ್ತಿದ್ದರು. ಶಿರಾ ನಗರ ತಲುಪಲು 3 ಕಿ.ಮೀ  ದೂರ ಇದ್ದಾಗ ಅಪಘಾತ ಸಂಭವಿಸಿದೆ.

ಗಾಯಾಳುಗಳು : 1) ಭೂತಣ್ಣ, 2)ರಂಗಪ್ಪ 3)ಶಾಂತಮ್ಮ, 4)ಭಾರತಿ, 5) ಯಶೋಧರ, 6) ಅನ್ನಪೂಣೇ೯ಶ್ವರಿ, 7) ಜ್ಯೋತಿ, 8) ವೀರಭದ್ರಯ್ಯ, 9) ನಂಜಮ್ಮ, 10) ಪದ್ಮಮ್ಮ, 11) ಕೆಂಚಮ್ಮ 12) ಅಜೇಯ 13) ತಿಪ್ಪೇಸ್ವಾಮಿ 14) ನಾಗಮಣಿ 15) ರಂಗನಾಥ 16) ಸೋಮಶೇಖರ್.

No Comments

Leave A Comment