Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಛತ್ತೀಸ್ಗಢ; ದಂತೇವಾಡದಲ್ಲಿ ಐಇಡಿ ಸ್ಫೋಟ; 6 ಯೋಧರು ಹುತಾತ್ಮ, 2 ಯೋಧರಿಗೆ ಗಾಯ

ದಂತೇವಾಡ; ಛತ್ತೀಸ್ಗಢ ದಂತೇವಾಡದ ಛೋಲ್ನಾರ್ ಎಂಬ ಗ್ರಾಮದಲ್ಲಿ ಐಇಡಿ ಸ್ಫೋಟಗೊಂಡ ಪರಿಣಾಮ 6 ಯೋಧರು ಹುತಾತ್ಮರಾಗಿದ್ದು, ಇಬ್ಬರು ಯೋಧರಿಗೆ ಗಾಯವಾಗಿರುವುದಾಗಿ ಭಾನುವಾರ ತಿಳಿದುಬಂದಿದೆ.

ಪೊಲೀಸರ ವಾಹನದಲ್ಲಿ ಐಇಡಿ ಸ್ಫೋಟಗೊಂಡಿದ್ದು ಪರಿಣಾಮ, ಸ್ಫೋಟದಲ್ಲಿ ಛತ್ತೀಸ್ಗಢ ಸೇನಾ ಪಡೆಯ ನಾಲ್ವರು ಯೋಧರು, 2 ಜಿಲ್ಲಾ ಸೇನಾ ಪಡೆಯ ಯೋಧರು ಹುತಾತ್ಮರಗಾಗಿದ್ದು, ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಗಳು ಚೋಲ್ನೂರ್ ನಿಂದ ಕಿರಾನ್ದುಲ್’ಗೆ ತೆರಳುತ್ತಿದ್ದ ವೇಳೆ ನಕ್ಸಲರು ಬಾಂಬ್ ಸ್ಫೋಟಿಸಿದ್ದಾರೆಂದು ತಿಳಿದುಬಂದಿದೆ.

No Comments

Leave A Comment