Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ವಿಶ್ವದಾಖಲೆಯ ಪರ್ಯಟನೆ ಮುಕ್ತಾಯ, ಗೋವಾಗೆ ಮರಳಿದ ನೌಕಾಪಡೆ ವೀರ ಮಹಿಳೆಯರು

ಪಣಜಿ: ಎಂಟು ತಿಂಗಳ ವಿಶ್ವ ಪರ್ಯಟಣೆ ಬಳಿಕ  ಐಎನ್‍ಎಸ್‍ವಿ ತಾರಿಣಿ ನೌಕೆಯಲ್ಲಿ ವಿಶ್ವ ಪರ್ಯಟನೆ ಕೈಗೊಂಡಿದ್ದ  ಭಾರತೀಯ ನೌಕಾಪಡೆಯ ಎಲ್ಲಾ ಮಹಿಳಾ ಸಿಬ್ಬಂದಿಗೋವಾಗೆ ಮರಳಿದ್ದಾರೆ.
ಭಾರತೀಯ ನೌಕಾಪಡೆಯ ಮಹಿಳಾ ಸಿಬ್ಬಂದಿಗಳು ತಾವು ವಿಶ್ವ ಪರ್ಯಟನೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮಹಿಳೆಯರೇ ಪಾಲ್ಗೊಂಡಿದ್ದ ಪ್ರಪ್ರಥಮ ವಿಶ್ವ ಪರ್ಯಟನೆ ಯಶಸ್ವಿಗೊಳಿಸಿದ  ಕೀರ್ತಿಗೆ ಪಾತ್ರರಾಗಿದ್ದಾರೆ.
ಮಹಿಳಾ ಸಿಬ್ಬಂದಿಗಳ ಈ ಸಾಧನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಅನೇಕರು ಅಭಿನಂದನೆ ಸೂಚಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 10ರಂದು ಸ್ವದೇಶಿ ನಿರ್ಮಿತ ತಾರಣಿ ನೌಕೆಯಲ್ಲಿ ಸಾಹಸಯಾತ್ರೆ ಕೈಗೊಂಡಿದ್ದ ಈ ತಂಡದ ನೇತೃತ್ವವನ್ನು ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ವಾರ್ಟಿಕಾ ಜೋಷ  ವಹಿಸಿಕೊಂಡಿದ್ದರು.
ತಂಡವು ಒಟ್ಟಾರೆ  21,600 ನಾಟಿಕಲ್ ಮೈಲಿ ದೂರ ಪ್ರವಾಸ ಮಾಡಿ ಹಿಂತಿರುಗಿದ್ದು ತಮ್ಮ ಪ್ರವಾಸದ ನಡುವೆ ಅವರು ಐದು ದೇಶಗಳಿಗೆ ಭೇಟಿ ನೀಡಿದ್ದರು.
ಯಾತ್ರೆಯ ವೇಳೆ ಎರಡು ಬಾರಿ ಸಮಭಾಜಕ ವೃತ್ತವನ್ನು ದಾಟಿದ್ದ ಈ ಸಾಹಸಿ ತಂಡ ನಾಲ್ಕು ಖಂಡಗಳು ಮತ್ತು ಮೂರು ಮಹಾಸಾಗರಗಳನ್ನು ಸುತ್ತಿದೆ.
ನೌಕಾಯಾನದಲ್ಲಿ ಪಾಲ್ಗೊಂಡ ಎಲ್ಲಾ ಮಹಿಳಾ ಸಿಬ್ಬಂದಿಗಳು ಮೇ 23 ರಂದು ದೆಹಲಿಗೆ ಆಗಮಿಸಲಿದ್ದು ಪ್ರಧಾನಮಂತ್ರಿಯಿಂದ ಸನ್ಮಾನಿತರಾಗಲಿದ್ದಾರೆ ಎಂದು ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಡಿ.ಕೆ. ಶರ್ಮಾ ಹೇಳಿದ್ದಾರೆ.
No Comments

Leave A Comment