Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಸುಪ್ರೀಂ’ ವಿಚಾರಣೆ ನಾಳೆ ಸಂಜೆ 4ಕ್ಕೆ ಬಹುಮತ ಸಾಬೀತಿಗೆ ಸಮಯ ನಿಗದಿ ಮಾಡಿ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ:ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಎಸ್ ಯಡಿಯೂರಪ್ಪ ನಾಳೆಯೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು. ನಾವು ಯಾರಿಗೂ ಸಮಯಾವಕಾಶ ಕೊಡೋದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಗುರುವಾರ ರಾತ್ರಿ ಕರ್ನಾಟಕ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿತ್ತು. ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಮೂರು ಕಾಲು ಗಂಟೆಗಳ ಕಾಲ ಬಾರೀ ವಾದ, ಪ್ರತಿವಾದ ಆಲಿಸಿತ್ತು. ಬಳಿಕ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಮ್ಮತಿ ಸೂಚಿಸಿ, ಶುಕ್ರವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

ಸುಪ್ರೀಂಕೋರ್ಟ್ ಕಟಕಟೆಯ ಹೈಲೈಟ್ಸ್:

*ಜನಾದೇಶವೇ ಮುಖ್ಯ:ನ್ಯಾ.ಎ.ಸಿಕ್ರಿ

*ಖಂಡಿತವಾಗಿಯೂ ಇದು ನಂಬರ್ ಗೇಮ್:ನ್ಯಾಯಾಧೀಶರು

*ನಾಳೆಯೇ ವಿಶ್ವಾಸಮತ ಯಾಚನೆ ಮಾಡಬೇಕು

*ಯಾರಿಗೂ ಸಮಯಾವಕಾಶ ಕೊಡೋದಿಲ್ಲ

ಬಿಜೆಪಿ ವಾದವೇನು?

ಬಿಜೆಪಿ ಪರ ವಕೀಲರಾದ ಮುಕುಲ್ ರೋಹ್ಟಗಿ ಅವರು, ಬಿಜೆಪಿಗೆ ಬಹುಮತ ಇರುವ ಪತ್ರವನ್ನು ಸುಪ್ರೀಂ ತ್ರಿಸದಸ್ಯ ಪೀಠಕ್ಕೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ರೆಸಾರ್ಟ್ ರಾಜಕೀಯದಲ್ಲಿ ತೊಡಗಿವೆ ಎಂದು ವಾದಿಸಿದ್ದಾರೆ.

ಮೇ 15ರಂದು ರಾಜ್ಯಪಾಲರಿಗೆ ಸಲ್ಲಿಸಿದ್ದ ಬೆಂಬಲದ ಪ್ರತಿಯನ್ನು ಮುಕುಲ್ ರೋಹ್ಟಗಿ ತ್ರಿಸದಸ್ಯ ಪೀಠದ ಮುಂದಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಕಾಂಗ್ರೆಸ್, ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಹೀಗಾಗಿ ಚುನಾವಣೆಯಲ್ಲಿ ನಾವೇ ಅತೀ ಹೆಚ್ಚು (104) ಸ್ಥಾನ ಗಳಿಸಿದ್ದೇವೆ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ರಚಿಸಿದೆ ಎಂದು ರೋಹ್ಟಗಿ ಪೀಠದ ಮುಂದೆ ವಾದ ಮಂಡಿಸಿದ್ದಾರೆ.

ನಾವು ಕರ್ನಾಟಕದಲ್ಲಿ ಬಹುಮತ ಸಾಬೀತಿಗೆ ಸಿದ್ಧರಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದಾಗಿ ಹೇಳಿದರು.

ಬೆಂಬಲ ನೀಡೋ ಶಾಸಕರ ಹೆಸರನ್ನು ಬಹಿರಂಗಪಡಿಸುವುದಿಲ್ಲ, ಅವರ ಜೀವಕ್ಕೆ ಬೆದರಿಕೆ ಇರುವುದರಿಂದ ಹೆಸರು ಬಹಿರಂಗಪಡಿಸುತ್ತಿಲ್ಲ ಎಂದು ರೋಹ್ಟಗಿ ವಾದ ಮಂಡಿಸುತ್ತಾ ಬಹುಮತ ಇರುವ ಬಗ್ಗೆ ವಾದಿಸಿದ್ದಾರೆ.

ನೀವೂ ಬಹುಮತ ಇದೆ ಅಂತ ಹೇಳ್ತಿದ್ದೀರಿ, ಕಾಂಗ್ರೆಸ್ ನವರೂ ಕೂಡಾ ಬಹುಮತ ಇದೆ ಅಂತ ವಾದಿಸ್ತಿದೆ ಎಂದು ಬಿಜೆಪಿ ವಾದಕ್ಕೆ ಜಡ್ಜ್ ಪ್ರಶ್ನಿಸಿದ್ದಾರೆ. ಬಿಜೆಪಿ ಸಲ್ಲಿಸಿರೋ ಪತ್ರದಲ್ಲಿ ಶಾಸಕರ ಹೆಸರೇ ಇಲ್ಲ.

ಕಾಂಗ್ರೆಸ್ ವಾದವೇನು?

ಕಾಂಗ್ರೆಸ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ಯಾರು ಮೊದಲು ಅವಕಾಶ ಪಡೆಯಬೇಕೆಂಬುದನ್ನು ಕೋರ್ಟ್ ಮೊದಲು ತೀರ್ಮಾನಿಸಲಿ ಎಂದು ಪ್ರತಿವಾದ ಮಂಡಿಸಿದ್ದಾರೆ.

No Comments

Leave A Comment