Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬಿಜೆಪಿಯ 42, ಕಾಂಗ್ರೆಸ್ ನ 23 ಶಾಸಕರು ಕ್ರಿಮಿನಲ್ ಹಿನ್ನೆಲೆಯವರು: ಎನ್ ಜಿಒ ವರದಿ

ಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಭಾರತೀಯ ಜನತಾ ಪಾರ್ಟಿಯಲ್ಲಿ ಅಪರಾಧ ಹಿನ್ನಲೆಯ 42 ಶಾಸಕರಿದ್ದು ಕಾಂಗ್ರೆಸ್ ನಲ್ಲಿ 23 ಮಂದಿಯಿದ್ದಾರೆ.

ಇನ್ನು ಜೆಡಿಎಸ್ ನಲ್ಲಿ 11 ಮಂದಿ ಶಾಸಕರ ಮೇಲೆ ವಿವಿಧ ಅಪರಾಧಗಳ ಕೇಸುಗಳು ದಾಖಲಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್(ಎಡಿಆರ್) ಮತ್ತು ಕರ್ನಾಟಕ ಎಲೆಕ್ಷನ್ ವಾಚ್(ಕೆಇಡಬ್ಲ್ಯು) ಎಂಬ ಸರ್ಕಾರೇತರ ಸಂಘಟನೆ ಬಿಡುಗಡೆ ಮಾಡಿರುವ ಅಂಕಿಅಂಶಗಳು ಹೇಳುತ್ತವೆ.ಕರ್ನಾಟಕ ಸರ್ಕಾರದ ನೂತನ 221 ಶಾಸಕರಲ್ಲಿ 76 ಶಾಸಕರ ವಿರುದ್ಧ ವಿವಿಧ ಕೇಸುಗಳು ದಾಖಲಾಗಿವೆ.

ಇವರಲ್ಲಿ 54 ಮಂದಿ ಗಂಭೀರ ಆಪಾದನೆಗಳಾದ ಕೊಲೆಯತ್ನ, ವಂಚನೆ, ನಕಲು, ಅಪಹರಣ ಇತ್ಯಾದಿಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ನಾಲ್ವರು ಶಾಸಕರು ತಮ್ಮ ವಿರುದ್ಧ ಕೊಲೆಯತ್ನ ಕೇಸು ವಿಚಾರಣೆ ನಡೆಯುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಸಂಸ್ಥೆಗಳ ಸಮೀಕ್ಷೆಗಳು ಹೇಳುತ್ತವೆ.ಕೇಸರಿ ಪಕ್ಷ ಬಿಜೆಪಿಯಲ್ಲಿ ಅಪರಾಧ ಹಿನ್ನಲೆಯ ಶಾಸಕರು ಮುಂಚೂಣಿಯಲ್ಲಿದ್ದಾರೆ.

29 ಮಂದಿ ಬಿಜೆಪಿ ಶಾಸಕರು ಗಂಭೀರ ಆರೋಪಗಳನ್ನು ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ನ 12 ಮತ್ತು 8 ಮಂದಿ ಶಾಸಕರು ಕೂಡ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.ಆಸ್ತಿ, ಸಂಪತ್ತು ಗಳಿಕೆಯಲ್ಲಿ 221 ಮಂದಿ ಶಾಸಕರಲ್ಲಿ 215 ಶಾಸಕರು ಕೋಟ್ಯಧಿಪತಿಗಳಾಗಿದ್ದಾರೆ.

ಕಳೆದ ವಿಧಾನಸಭೆಯಲ್ಲಿ 203 ಶಾಸಕರು ಕೋಟ್ಯಧಿಪತಿಗಳಾಗಿದ್ದರು. ಪಕ್ಷದಿಂದ ನೋಡುವುದಾದರೆ ಬಿಜೆಪಿಯಲ್ಲಿ ಕೋಟ್ಯಧಿಪತಿ ಶಾಸಕರ ಸಂಖ್ಯೆ ಹೆಚ್ಚಾಗಿದ್ದು ಕಾಂಗ್ರೆಸ್ ನಲ್ಲಿ 77 ಮತ್ತು ಜೆಡಿಎಸ್ ನಲ್ಲಿ 35 ಶಾಸಕರು ಕೋಟ್ಯಧಿಪತಿಗಳಾಗಿದ್ದಾರೆ.

No Comments

Leave A Comment