Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಮುಂಬ್ರಾದಲ್ಲಿ ಬೈಕ್‌ ಕಳ್ಳತನ: 9 ಬಾಲಕರ ಬಂಧನ, 27 ಬೈಕ್‌ ವಶ

ಥಾಣೆ : ಜಿಲ್ಲೆಯ ಮುಂಬ್ರಾ ಟೌನ್‌ಶಿಪ್‌ನಲ್ಲಿ ಬೈಕುಗಳನ್ನು ಕದಿಯುತ್ತಿದ್ದ 10ರಿಂದ 15 ವರ್ಷ ಪ್ರಾಯದೊಳಗಿನ ಒಂಬತ್ತು ಹುಡುಗರನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.

ಮುಂಬ್ರಾ ಪಟ್ಟಣದಲ್ಲಿ ಈಚೆಗೆ ಬೈಕುಗಳ ಕಳವು ಒಂದೇ ಸಮನೆ ಏರುತ್ತಿದ್ದುದರ ಬಗ್ಗೆ ಬೈಕ್‌ ಕಳೆದುಕೊಂಡ ಜನರು ಪೊಲೀಸರಿಗೆ ದೂರು ನೀಡಿದ್ದರು. ಅಂತೆಯೇ ಪೊಲೀಸರು ವಾಹನ ಕಳ್ಳರನ್ನು ಪತ್ತೆ ಹಚ್ಚಿ ಹಿಡಿಯಲು ವಿಶೇಷ ತಂಡಗಳನ್ನು ನೇಮಿಸಿದ್ದರು. ಪರಿಣಾಮವಾಗಿ 9 ಬಾಲಕರನ್ನು ಈ ತಂಡದವರು ಬಂಧಿಸಿದರು ಎಂದು ಒಂದನೇ ವಲಯದ ಪೊಲೀಸ್‌ ಉಪ ಆಯುಕ್ತ ಡಾ. ಡಿ ಎಸ್‌ ಸ್ವಾಮಿ ಹೇಳಿದರು.

ಪೊಲೀಸರು ಬೈಕ್‌ ಕದಿಯುವ ಬಾಲಕರಿಂದ 27 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಾಗಿರುವ 9 ಹುಡುಗರಲ್ಲಿ 7 ಮಂದಿ ಎಂದೂ ಶಾಲೆಗೆ ಹೋಗದವರಾಗಿದ್ದಾರೆ ಎಂದು ಸ್ವಾಮಿ ಹೇಳಿದರು.

ಬಂಧಿತ 9 ಬಾಲಕರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು ಅವರನ್ನು ರಿಮಾಂಡ್‌ ಹೋಮ್‌ಗೆ ಕಳುಹಿಸಲಾಗಿದೆ.

No Comments

Leave A Comment