Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ದಕ್ಷಿಣದ ಕೋಟೆ ಭದ್ರಪಡಿಸಿದ ಬಿಜೆಪಿ ಬಹುನಿರೀಕ್ಷಿತ ವಿಧಾನಸಭಾ ಚುನಾವಣೆ

ಬಹುನಿರೀಕ್ಷಿತ ವಿಧಾನಸಭಾ ಚುನಾವಣೆ ಫ‌ಲಿತಾಂಶದ ಪ್ರಾಂತ್ಯವಾರು ಸೀಟು ಗಳಿಕೆಯ ಚಿತ್ರಣ ಇಲ್ಲಿದೆ. ಈ ಬಾರಿ ಬಿಜೆಪಿಯ ಸಾಂಪ್ರದಾಯಿಕ ಮತಗಳ ಪ್ರದೇಶವಾದ ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕ ಪ್ರಾಂತ್ಯದಲ್ಲಿ ಕೇಸರಿಯ ಅಲೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಹೈದ್ರಾಬಾದ್‌ ಕರ್ನಾಟಕದಲ್ಲಿ ಮತ್ತೂಮ್ಮೆ ಕಾಂಗ್ರೆಸ್‌ ಪ್ರಾಬಲ್ಯ ಮೆರೆದಿದೆ. ಹಳೇ ಮೈಸೂರಿನಲ್ಲಿ ಜೆಡಿಎಸ್‌ ಬೇರು ಭದ್ರವಾಗಿಯೇ ಉಳಿದಿದೆ, ಇಲ್ಲಿ ಕಾಂಗ್ರೆಸ್‌ ಸಮಬಲದ ಹೋರಾಟ ನಡೆಸಿದೆ. ಜೆಡಿಎಸ್‌ ಕೋಟೆಯಲ್ಲಿ ಕಮಲ ಪ್ರವೇಶ ಎದ್ದುಕಾಣುತ್ತಿದೆ.

ಮಲೆನಾಡಲ್ಲಿ ಪುಟಿದೆದ್ದ ಬಿಜೆಪಿ
ಕಳೆದ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಸಾಧಿಸಿದ್ದ ಬಿಜೆಪಿ ಈ ಬಾರಿ ಒಟ್ಟು 12 ಕ್ಷೇತ್ರಗಳ ಪೈಕಿ 10ನ್ನು ಗೆದ್ದುಕೊಂಡಿದೆ. ಈ ಬಾರಿ ಭದ್ರಾವತಿ, ಶೃಂಗೇರಿ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಆ ಮೂಲಕ ಯಡಿಯೂರಪ್ಪ ಜಿಲ್ಲೆಯಲ್ಲಿ ತಾವೇ ಶಕ್ತಿವಂತ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಭದ್ರಾವತಿಯಲ್ಲಿ ಕಾಂಗ್ರೆಸ್‌ನ ಬಿ.ಕೆ.ಸಂಗಮೇಶ್‌ ಗೆದ್ದಿದ್ದಾರೆ. ಉಳಿದಂತೆ ಸಚಿವ ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಸೇರಿದಂತೆ ಎಲ್ಲಾ ಕಡೆ ಕಾಂಗ್ರೆಸ್‌ ಸೋತಿದ್ದು, ಅಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ಆಯ್ಕೆಯಾಗಿದ್ದಾರೆ. ಸೊರಬ ಕ್ಷೇತ್ರದಲ್ಲಿ ಸಹೋದರರ ಸವಾಲಿನಲ್ಲಿ ಜೆ.ಡಿ.ಎಸ್‌.ನ ಮಧು ಬಂಗಾರಪ್ಪ ಅವರನ್ನು ಸೋಲಿಸಿ ಬಿಜೆಪಿಯ ಕುಮಾರ್‌ ಬಂಗಾರಪ್ಪ ಗೆದ್ದಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿಯ ಕೆ.ಎಸ್‌.ಈಶ್ವರಪ್ಪ, ಶಿವಮೊಗ್ಗ ಗ್ರಾಮಾಂತರದಲ್ಲಿ ಬಿಜೆಪಿಯ ಅಶೋಕ್‌ ನಾಯಕ್‌ ಗೆದ್ದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಬಿಜೆಪಿ ಶಕ್ತಿ ಹೆಚ್ಚಿಸಿಕೊಂಡಿದೆ. ಬಿಜೆಪಿಯ ಸಿ.ಟಿ.ರವಿ ಪುನರಾಯ್ಕೆಯಾಗಿದ್ದರೆ, ಕಮೂಡಿಗೆರೆ ಕ್ಷೇತ್ರವನ್ನು ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಜೆ.ಡಿ.ಎಸ್‌.ನಿಂದ ಕಿತ್ತುಕೊಂಡಿದ್ದಾರೆ. ಕಡೂರಿನಲ್ಲಿ ಜೆ.ಡಿ.ಎಸ್‌.ನ ವೈ.ಎಸ್‌. ವಿ.ದತ್ತರನ್ನು ಬಿಜೆಪಿಯ ಕೆ.ಎಸ್‌.ಪ್ರಕಾಶ್‌, ತರೀಕೆರೆಯಲ್ಲಿ ಕಾಂಗ್ರೆಸ್‌ ನ ಜಿ.ಎಚ್‌.ಶ್ರೀನಿವಾಸ್‌ ರನ್ನು ಬಿಜೆಪಿಯ ಡಿ.ಎಸ್‌. ಸುರೇಶ್‌ ಸೋಲಿಸಿದ್ದಾರೆ. ಆ ಮೂಲಕ ಮಲೆನಾಡು ಬಿಜೆಪಿಯ ಭದ್ರಕೋಟೆಯೆಂಬುದನ್ನು ಪಕ್ಷ ಸಾಬೀತುಪಡಿಸಿದೆ.

ಮಧ್ಯ ಕರ್ನಾಟಕ ಮೂರಕ್ಕೂ ಜಾಗ
ಮಧ್ಯಕರ್ನಾಟಕ ಭಾಗದಲ್ಲಿ 36 ಕ್ಷೇತ್ರಗಳಿದ್ದು, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆ.ಡಿ.ಎಸ್‌. ತಮ್ಮ ಅಸ್ತಿತ್ವ ಸಾಬೀತುಪಡಿಸಿವೆ. ಚಿತ್ರದುರ್ಗದ ಒಟ್ಟು ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿದೆ. ದಾವಣಗೆರೆಯ ಎಂಟು ಕ್ಷೇತ್ರಗಳಲ್ಲಿ ಏಳು ಸ್ಥಾನಗಳು ಬಿಜೆಪಿಯ ಪಾಲಾದರೆ, ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ದಾವಣಗೆರೆಯಲ್ಲಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಸೋಲು ಅನುಭವಿಸಿದ್ದಾರೆ. ಚಿತ್ರದುರ್ಗದಲ್ಲಿ ಸಚಿವ ಎಚ್‌.ಆಂಜನೇಯ ಸೋಲು ಅನುಭವಿಸಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. ಕೋಲಾರದ ಆರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಜೆ.ಡಿ.ಎಸ್‌., ನಾಲ್ಕು ಕ್ಷೇತ್ರ ಕಾಂಗ್ರೆಸ್‌ ಹಾಗೂ ಮತ್ತೂಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಚಿಕ್ಕಬಳ್ಳಾಪುರದ ಐದು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್‌ ಹಾಗೂ ಒಂದು ಕ್ಷೇತ್ರದಲ್ಲಿ ಜೆ.ಡಿ.ಎಸ್‌. ಗೆಲುವು ಸಾಧಿಸಿದೆ. 2013ರ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಜೆಡಿಎಸ್‌ ಒಂದು ಸ್ಥಾನದಲ್ಲಿ, ಕಾಂಗ್ರೆಸ್‌ ಏಳರಲ್ಲಿ ಗೆಲುವು ಸಾಧಿಸಿತ್ತು. ಚಿತ್ರದುರ್ಗದಲ್ಲಿ ಆರು ಕ್ಷೇತ್ರಗಳಲ್ಲಿ ಒಂದು ಬಿ.ಎಸ್‌.ಆರ್‌. ಪಕ್ಷ, ಒಂದು ಭಾರತೀಯ ಜನತಾ ಪಾರ್ಟಿ ಮತ್ತು ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು.

ಕರಾವಳಿಯಲ್ಲಿ ಕೇಸರಿ ಪ್ರಬಲ
ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದೆ. ಒಟ್ಟು 19 ಕ್ಷೇತ್ರಗಳ ಪೈಕಿ 16 ಸ್ಥಾನಗಳನ್ನು ಗೆದ್ದಿದೆ. ಈ ಬಾರಿ ಹಿಂದುತ್ವ ಅಜೆಂಡಾವನ್ನೇ ಪ್ರಧಾನ ಅಸ್ತ್ರವಾಗಿಸಿಕೊಂಡು ಚುನಾವಣೆಯಲ್ಲಿ ಹೋರಾಡಿದ ಬಿಜೆಪಿ, ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ಮುಂದಿಟ್ಟುಕೊಂಡು ಕೊಡಗಿನಿಂದ ಕರಾವಳಿ ಭಾಗದಲ್ಲಿ ಪಾದಯಾತ್ರೆ ನಡೆಸಿತ್ತು. ಇದರ ಪ್ರಭಾವ ಬಹುತೇಕ ಪರಿಣಾಮ ಬೀರಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಏಳು ಮತ್ತು ಕಾಂಗ್ರೆಸ್‌ ಒಂದು ಸ್ಥಾನ ಗಳಿಸಿದೆ. ಸಚಿವ ರಮಾನಾಥ ರೈ
ಬಂಟ್ವಾಳದಲ್ಲಿ 15971 ಮತಗಳಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ. ಮಂಗಳೂರಿನಲ್ಲಿ ಯು.ಟಿ.ಖಾದರ್‌ ಒಬ್ಬರೇ ಕಾಂಗ್ರೆಸ್‌ನ ಗೌರವ ಉಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಆಗಿದೆ. ಒಟ್ಟು ಆರು ಸ್ಥಾನಗಳ ಪೈಕಿ 2013ರಲ್ಲಿ ಕಾಂಗ್ರೆಸ್‌ ಮೂರು ಸ್ಥಾನ ಗೆದ್ದಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿಯಾಗಿತ್ತು. ಎರಡು ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದರು. ಈ ಬಾರಿ ಕರಾವಳಿಗೆ ಹೊಂದಿಕೊಂಡಿರುವ ಕ್ಷೇತ್ರಗಳಾದ ಭಟ್ಕಳ, ಕುಮಟ ಮತ್ತು ಕಾರವಾರಗಳಲ್ಲಿ ಬಿಜೆಪಿ ಗೆದ್ದಿದೆ. ಶಿರಸಿಯಲ್ಲಿ ಮತ್ತೆ ಗೆದ್ದು ಬೀಗಿದೆ. ಕುಮಟಾ ಕ್ಷೇತ್ರ ಕಳೆದುಕೊಂಡರೂ ಹಳಿಯಾಳ ಮತ್ತು ಯಲ್ಲಾಪುರಗಳನ್ನು ಉಳಿಸಿಕೊಂಡಿದ್ದೇ ಕಾಂಗ್ರೆಸ್‌ನ ಹೆಗ್ಗಳಿಕೆ.

6 ಕ್ಷೇತ್ರಗಳಲ್ಲಿ ನೋಟಾ ಆಟ
ಈ ಚುನಾವಣೆಯಲ್ಲಿ ಬರೋಬ್ಬರಿ 6 ಕ್ಷೇತ್ರಗಳಲ್ಲಿ ನೋಟಾ ಆಟವಾಡಿದ್ದು ಸ್ಪಷ್ಟವಾಗಿ ಗೋಚರಿಸಿದೆ. ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ನಡುವಿನ ಮತಗಳ ಅಂತರಕ್ಕಿಂತ ಈ ಕ್ಷೇತ್ರಗಳಲ್ಲಿ ನೋಟಾ (ಮೇಲಿನ ಯಾರೂ ಅಲ್ಲ) ಗುಂಡಿಯನ್ನು ಒತ್ತಿದವರ ಸಂಖ್ಯೆಯೇ ಹೆಚ್ಚಿದೆ. ಒಟ್ಟಿನಲ್ಲಿ ಇಲ್ಲಿ ನೋಟಾದ ಮತಗಳೇ ಅಭ್ಯರ್ಥಿಗಳ ಸೋಲು ಹಾಗೂ ಗೆಲುವನ್ನು ನಿರ್ಧರಿಸಿವೆ. ಈ ಕ್ಷೇತ್ರಗಳು, ಅಭ್ಯರ್ಥಿಗಳ ಗೆಲುವಿನ ಅಂತರ ಹಾಗೂ ಚಲಾವಣೆಯಾದ ನೋಟಾ ಮತಗಳ ವಿವರ ಇಲ್ಲಿದೆ.

1. ಅಳಂದ:
ಗೆಲುವಿನ ಅಂತರ -697
ನೋಟಾ- 1445

2. ಮಸ್ಕಿ
ಗೆಲುವಿನ ಅಂತರ -213
ನೋಟಾ- 2049

3. ಗದಗ
ಗೆಲುವಿನ ಅಂತರ -1868
ನೋಟಾ- 2007

4. ಕುಂದಗೋಳ
ಗೆಲುವಿನ ಅಂತರ -634
ನೋಟಾ- 1032

5. ಹಿರೇಕೆರೂರು
ಗೆಲುವಿನ ಅಂತರ -555
ನೋಟಾ- 972

6. ಪಾವಗಡ
ಗೆಲುವಿನ ಅಂತರ -409
ನೋಟಾ- 794

ಕಮಲ ಹಿಡಿದ ಮುಂಬೈ ಕರ್ನಾಟಕ
ಮುಂಬೈ ಕರ್ನಾಟಕ ಬಿಜೆಪಿ ಪರವಾಗಿದ್ದು, ಕಾಂಗ್ರೆಸ್‌ ಗೆ ಹಿನ್ನಡೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ
ಸಹೋದರರು ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಎರಡು ಬಾರಿ ಸೋಲುಂಡಿದ್ದ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀಹೆಬ್ಟಾಳ್ಕರ್‌ ಈ ಬಾರಿ ಬಿಜೆಪಿ ಸಂಜಯ್‌ ಪಾಟೀಲ್‌ ವಿರುದ್ಧ ಗೆಲುವಿನ ಸಾಧಿಸುವ ಮೂಲಕ ಸಂಭ್ರಮಿಸಿದ್ದಾರೆ. ಇದುವರೆಗೂ ಮರಾಠಿ ಮತದಾರರನ್ನೇ ನಂಬಿ ರಾಜಕಾರಣ ಮಾಡುತ್ತಿದ್ದ ಎಂ.ಇ.ಎಸ್‌.ಗೆ ತೀವ್ರ ಮುಖಭಂಗವಾಗಿದೆ. ಖಾನಾಪುರದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಬಿ. ಪಾಟೀಲ್‌ ಗೆಲುವು ಪಡೆದಿದಿದ್ದು, ಕೊನೆ ಗಳಿಗೆಯಲ್ಲಿ ಬಿಜೆಪಿ ಟಿಕೆಟ್‌ ಪಡೆದಿದ್ದ ಎ.ಎಸ್‌. ಪಾಟೀಲ್‌ ನಡಹಳ್ಳಿ ಮುದ್ದೆಬಿಹಾಳದಲ್ಲಿ ಸಿ.ಎಸ್‌. ನಾಡಗೌಡರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್‌ ಎರಡು ಕ್ಷೇತ್ರ ಗೆಲ್ಲುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಶಾಕ್‌ ನೀಡಿದೆ. ಬಾಗಲಕೋಟೆಯಲ್ಲಿ ಸಚಿವ ಎಚ್‌.ವೈ ಮೇಟಿ ಸೋಲುಂಡಿದ್ದಾರೆ. ಧಾರವಾಡದಲ್ಲಿ ಸಚಿವರಾದ ವಿನಯ್‌ ಕುಲಕರ್ಣಿ, ಸಂತೋಷ್‌ ಲಾಡ್‌ ಇಬ್ಬರಿಗೂ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಹಾವೇರಿಯಲ್ಲಿ ಕೆ.ಬಿ.ಕೋಳಿವಾಡ್‌ ಪಕ್ಷೇತರ ಅಭ್ಯರ್ಥಿ ಆರ್‌. ಶಂಕರ್‌ ಸೋಲಿ ಸಿದ್ದು, ಹಾವೇರಿಯಲ್ಲಿ ಬಿಜೆಪಿಯ ನೆಹರೂ ಓಲೇಕಾರ ಗೆಲುವು ಪಡೆದಿದ್ದಾರೆ. ಗದಗ್‌ ನಲ್ಲಿ ಎಚ್‌.ಕೆ. ಪಾಟೀಲ್‌ ಗೆದ್ದಿದ್ದಾರೆ.

ಹೈಕದಲ್ಲಿ ಉಳಿದ ಕಾಂಗ್ರೆಸ್‌ ಪ್ರಾಬಲ್ಯ
ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ 40 ರಲ್ಲಿ 21 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಮುಂಚೂಣಿ ಕಾಯ್ದುಕೊಂಡಿದ್ದರೂ, ಕಳೆದ ಬಾರಿಗಿಂತ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ಮೂಲಕ ಪ್ರಾಬಲ್ಯ ಹೆಚ್ಚಿಸಿಕೊಂಡಿದ್ದು, ಜೆ.ಡಿ.ಎಸ್‌.ನ ನಾಲ್ವರು ಅಭ್ಯರ್ಥಿಗಳು ಗೆಲುವು ಸಾಧಿಸಿ ಪಕ್ಷದ ಗೌರವ ಕಾಪಾಡಿದ್ದಾರೆ.

ಸಚಿವರಾಗಿದ್ದ ಈಶ್ವರ್‌ ಖಂಡ್ರೆ, ಪ್ರಿಯಾಂಕ್‌ ಖರ್ಗೆ ಗೆಲುವು ಪಡೆದು ಮರ್ಯಾದೆ ಉಳಿಸಿಕೊಂಡಿದ್ದರೆ, ಲಿಂಗಾಯತ ಧರ್ಮದ ಮೂಂಚೂಣಿ ಹೋರಾಟಗಾರರಾಗಿದ್ದ ಡಾ. ಶರಣ ಪ್ರಕಾಶ್‌ ಪಾಟೀಲ್‌ಗೆ ಸೇಡಂ ಜನತೆ ಸೋಲುಣಿಸಿದ್ದಾರೆ. ಇನ್ನು ಸಚಿವ ಸ್ಥಾನ ವಂಚಿತರಾಗಿ ಕಡೆ ಗಳಿಗೆಯಲ್ಲಿ ಬಿಜೆಪಿ ಸೇರಿದ್ದ ಅಫ‌ಜಲ್‌ಪುರ ಶಾಸಕ ಮಾಲಿಕಯ್ಯ ಗುತ್ತೆದಾರ್‌ ಅವರಿಗೆ ಸೋಲುಣಿಸಿದ್ದಾರೆ. ಯಾದಗಿರಿಯಲ್ಲಿ ಮಾಜಿ ಸಚಿವ ಬಾಬು ರಾವ್‌ ಚಿಂಚನಸೂರ್‌ ಗೆ ಸೋಲುಂಟಾಗಿದ್ದು, ಜೆ.ಡಿ.ಎಸ್‌.ನ ನಾಗನಗೌಡ ಕಂದಕೂರ್‌ ಗೆಲುವಿನ ನಗೆ ಬೀರಿದ್ದಾರೆ. ರಾಯಚೂರಲ್ಲಿ ಡಾ. ಶಿವರಾಜ್‌ ಪಾಟೀಲ್‌ ಗೆದ್ದರೆ, ಕೊಪ್ಪಳದ ಕನಕಗಿರಿಯಲ್ಲಿ ಶಿವರಾಜ್‌ ತಂಗಡಗಿ ಹಾಗೂ ಯಲಬುರ್ಗ ಕ್ಷೇತ್ರದ ಹಾಲಿ ಸಚಿವ ಬಸವರಾಜ್‌ ರಾಯರೆಡ್ಡಿ ಸೋಲುಂಡಿದ್ದು, ಬಿಜೆಪಿ ಗೆದ್ದಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್‌ ನ ಅನಿಲ್‌ ಲಾಡ್‌ ವಿರುದ್ಧ ಸೋಮಶೇಖರ್‌ ರೆಡ್ಡಿ, ಹರಪನಹಳ್ಳಿಯಲ್ಲಿ ಎಂ.ಪಿ. ರವೀಂದ್ರ ವಿರುದ್ಧ ಕರುಣಾಕರ ರೆಡ್ಡಿ ಗೆಲುವು ಪಡೆದಿದ್ದಾರೆ.

ಹಳೇ ಮೈಸೂರಲ್ಲಿ ಕೈ-ದಳ ಸಮಬಲ
ಹಳೇ ಮೈಸೂರು ಭಾಗದಲ್ಲಿ ನಿರೀಕ್ಷೆಯಂತೆ ಜೆ.ಡಿ.ಎಸ್‌. – ಕಾಂಗ್ರೆಸ್‌ ಗುದ್ದಾಡಿ ಗೆದ್ದಿದ್ದು, ಬಿಜೆಪಿ ಸಹ ಅಸ್ತಿತ್ವ ಪ್ರದರ್ಶನ ಮಾಡಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೆ.ಡಿ.ಎಸ್‌. ಹಾಗೂ ಕಾಂಗ್ರೆಸ್‌ ಸಮಬಲದ ಹೋರಾಟ ಮಾಡಿದರೆ, ಬೆಂಗಳೂರು, ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಮೂರೂ ಪಕ್ಷಗಳು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿವೆ. ಮಂಡ್ಯ ಹಾಗೂ ಹಾಸನದಲ್ಲಿ ಕಾಂಗ್ರೆಸ್‌ ಗೆ ಒಂದೂ ಸ್ಥಾನ ಬರದಂತೆ ನೋಡಿಕೊಳ್ಳುವಲ್ಲಿ ಜೆ.ಡಿ.ಎಸ್‌. ಯಶಸ್ವಿಯಾಗಿದೆ. ಆದರೆ, ಹಾಸನ ಭದ್ರಕೋಟೆಗೆ ಬಿಜೆಪಿ ಪ್ರವೇಶ ಪಡೆದಿರುವುದು ವಿಶೇಷ. ಒಟ್ಟು ಹಳೇ ಮೈಸೂರು ಭಾಗದಲ್ಲಿ 19 ಜೆಡಿಎಸ್‌, 27 ಕಾಂಗ್ರೆಸ್‌, ಬಿಜೆಪಿ 18 ಹಾಗೂ ಬಿಎಸ್‌ಪಿ 1 ಸ್ಥಾನ ಗಳಿಸಿದೆ. ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆ.ಡಿ.ಎಸ್‌. ಗೆಲುವು ಸಾಧಿಸಿದೆ. ಇಲ್ಲಿ ದೇವೇಗೌಡರ ವಿರುದ್ಧ ಬಂಡೆದ್ದು ಕಾಂಗ್ರೆಸ್‌ ಸೇರಿ ನಾಗಮಂಗಲದಿಂದ ಸ್ಪರ್ಧಿಸಿದ್ದ ಚೆಲುವರಾಯಸ್ವಾಮಿ ಸೋಲು ಅನುಭವಿಸಿದ್ದಾರೆ. ಹಾಸನದ 7 ಕ್ಷೇತ್ರಗಳಲ್ಲಿ ಆರು ಜೆ.ಡಿ.ಎಸ್‌., ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇಲ್ಲಿ ಅರಕಲಗೂಡಿನಿಂದ ಸ್ಪರ್ಧೆ ಮಾಡಿದ್ದ ಸಚಿವ ಎಂ.ಮಂಜು ಸೋತಿದ್ದಾರೆ. ಬೆಂಗಳೂರು ಗ್ರಾಮಾಂತರ ನಾಲ್ಕು ಕ್ಷೇತ್ರಗಳಲ್ಲಿ ಎರಡು ಜೆ.ಡಿ.ಎಸ್‌., ಎರಡು ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಮೈಸೂರಿನಲ್ಲಿ 11 ಕ್ಷೇತ್ರಗಳಲ್ಲಿ ಜೆ.ಡಿ.ಎಸ್‌. 5, ಬಿಜೆಪಿ 3, ಕಾಂಗ್ರೆಸ್‌ 3 ಸ್ಥಾನ ಗಳಿಸಿದೆ.

44 ಚೊಚ್ಚಲ ಶಾಸಕರು ಇವರು
ಬಿಜೆಪಿ-27
1. ಹರೀಶ್‌ ಪೂಂಜಾ-ಬೆಳ್ತಂಗಡಿ
2. ವೇದವ್ಯಾಸ -ಮಂಗಳೂರು ದಕ್ಷಿಣ
3. ಭರತ್‌ ಶೆಟ್ಟಿ -ಮಂಗಳೂರು ಉತ್ತರ
4. ಸಂಜೀವ ಮಠಂದೂರು-ಪುತ್ತೂರು
5. ಉಮಾನಾಥ ಕೋಟ್ಯಾನ್‌-ಮೂಡಬಿದರೆ
6. ರಾಜೇಶ್‌ ನಾೖಕ್‌ ಉಳಿಪಾಡಿ-ಬಂಟ್ವಾಳ
7. ಸುಕುಮಾರ ಶೆಟ್ಟಿ- ಬೈಂದೂರು
8. ನಿರಂಜನ್‌ ಕುಮಾರ್‌ – ಗುಂಡ್ಲುಪೇಟೆ
9. ಹರ್ಷವರ್ಧನ್‌ – ನಂಜನಗೂಡು
10. ಮಸಾಲೆ ಜಯರಾಂ – ತುರುವೇಕೆರೆ
11. ಬೆಳ್ಳಿಪ್ರಕಾಶ್‌- ಕಡೂರು
12. ರಾಜಕುಮಾರ್‌ ಪಾಟೀಲ್‌ ತೆಲ್ಕೂರ್‌- ಸೇಡಂ
13. ಅಮೃತ್‌ ದೇಸಾಯಿ- ಧಾರವಾಡ
14. ಜ್ಯೋತಿ ಗಣೇಶ್‌- ತುಮಕೂರು
15. ಪೂರ್ಣಿಮಾ ಶ್ರೀನಿವಾಸ- ಹಿರಿಯೂರು
16. ಪ್ರೀತಂ ಗೌಡ – ಹಾಸನ
17. ರೂಪಾಲಿ ನಾಯ್ಕ- ಕಾರವಾರ
18. ಸುನೀಲ ನಾಯ್ಕ- ಭಟ್ಕಳ
19. ಮಹಾಂತೇಶ ದೊಡಗೌಡರ- ಕಿತ್ತೂರು
20. ಅನೀಲ ಬೆನಕೆ- ಬೆಳಗಾವಿ ಉತ್ತರ
21. ಅಶೋಕ ನಾಯ್ಕ- ಶಿವಮೊಗ್ಗ ಗ್ರಾ.
22. ಬಸವರಾಜ- ಕಲಬುರಗಿ ಗ್ರಾ.
23. ಸಿ.ಎಂ.ನಿಂಬಣ್ಣವರ್‌- ಕಲಘಟಗಿ

ಕಾಂಗ್ರೆಸ್‌- 11
1. ಡಾ.ಯತೀಂದ್ರ- ವರುಣಾ
2. ಕೆ.ವೈ. ನಂಜೇಗೌಡ- ಮಾಲೂರು
3. ರೂಪಕಲಾ ಶಶಿಧರ್‌ – ಕೆಜಿಎಫ್
4. ಅನಿಲ್‌ ಚಿಕ್ಕಮಾದು- ಎಚ್‌.ಡಿ.ಕೋಟೆ
5. ಬಸನಗೌಡ- ರಾಯಚೂರು ಗ್ರಾಮೀಣ
6. ಖನೀಜಾ ಫಾತಿಮಾ- ಕಲಬುರ್ಗಿ ಉತ್ತರ
7. ಅಂಜಲಿ ನಿಂಬಾಳ್ಕರ್‌- ಖಾನಾಪುರ
8. ಲಕ್ಷ್ಮೀ ಹೆಬ್ಟಾಳ್ಕರ್‌- ಬೆಳಗಾವಿ ಗ್ರಾಮೀಣ
9. ಶ್ರೀಮಂತ ಪಾಟೀಲ್‌- ಕಾಗವಾಡ
10. ಟಿ.ಡಿ.ರಾಜೇಗೌಡ- ಶೃಂಗೇರಿ
11. ಜೆ.ಎನ್‌.ಗಣೇಶ್‌ – ಕಂಪ್ಲಿ

ಜೆಡಿಎಸ್‌- 7
1. ನಾರಾಯಣ ಸ್ವಾಮಿ – ದೇವನಹಳ್ಳಿ
2. ರವೀಂದ್ರ ಶ್ರೀಕಂಠಯ್ಯ – ಶ್ರೀರಂಗಪಟ್ಟಣ
3. ಎ.ಮಂಜು- ಮಾಗಡಿ
4. ಅಶ್ವಿ‌ನ್‌ ಕುಮಾರ್‌- ತಿ.ನರಸೀಪುರ
5. ವೀರಭದ್ರಯ್ಯ – ಮಧುಗಿರಿ
6. ಮಂಜುನಾಥ್‌- ದಾಸರಹಳ್ಳಿ
7. ಕೆ.ಎಸ್‌.ಲಿಂಗೇಶ್‌ – ಬೇಲೂರು

ಪಕ್ಷೇತರ – 2
1. ಎಚ್‌.ನಾಗೇಶ್‌ – ಮುಳಬಾಗಿಲು
2. ಆರ್‌.ಶಂಕರ್‌-ರಾಣಿಬೆನ್ನೂರು

ಬಿಎಸ್ಪಿ- 1
1. ಎನ್‌.ಮಹೇಶ್‌ – ಕೊಳ್ಳೆಗಾಲ

ಕುಟುಂಬ ರಾಜಕಾರಣದ ಗೆಲುವು- ಸೋಲು
ಅಪ್ಪ- ಮಗ ಗೆಲುವು:
– ಸಿದ್ದರಾಮಯ್ಯ (ಚಾಮುಂಡೇಶ್ವರಿ)
– ಯತೀಂದ್ರ ಸಿದ್ದರಾಮಯ್ಯ (ವರುಣಾ)

ಅಪ್ಪ- ಮಗ ಸೋಲು:
– ಟಿ.ಬಿ.ಜಯಚಂದ್ರ (ಶಿರಾ)
– ಸಂತೋಷ್‌ (ಚಿಕ್ಕನಾಯಕನಹಳ್ಳಿ)

ಅಪ್ಪ ಗೆಲುವು- ಮಗ ಸೋಲು:
– ಶಾಮನೂರು ಶಿವಶಂಕರಪ್ಪ (ದಾವಣಗೆರೆ ದಕ್ಷಿಣ)
– ಎಸ್‌.ಎಸ್‌.ಮಲ್ಲಿಕಾರ್ಜುನ್‌ (ದಾವಣಗೆರೆ ಉತ್ತರ)

ಅಪ್ಪ ಗೆಲುವು- ಮಗ ಸೋಲು:
– ಎಂ.ಕೃಷ್ಣಪ್ಪ (ವಿಜಯನಗರ)
– ಪ್ರಿಯಕೃಷ್ಣ (ಗೋವಿಂದರಾಜನಗರ)

ಅಪ್ಪ ಗೆಲುವು- ಮಗ ಸೋಲು:
– ಗೋವಿಂದ ಕಾರಜೋಳ (ಮುಧೋಳ)
– ಡಾ.ಗೋಪಾಲ್‌ ಗೋವಿಂದ ಕಾರಜೋಳ (ನಾಗಠಾಣಾ )

ಸಹೋದರರ ಗೆಲುವು:
– ಸತೀಶ್‌ ಜಾರಕಿಹೊಳಿ (ಯಮಕನಮರಡಿ),
– ರಮೇಶ್‌ ಜಾರಕಿಹೊಳಿ (ಗೋಕಾಕ್‌),
– ಬಾಲಚಂದ್ರ ಜಾರಕಿಹೊಳಿ (ಅರಭಾವಿ)

ಸಹೋದರರ ಗೆಲುವು:
– ಎಚ್‌.ಡಿ.ಕುಮಾರಸ್ವಾಮಿ (ರಾಮನಗರ/ ಚನ್ನಪಟ್ಟಣ)
– ಎಚ್‌.ಡಿ.ರೇವಣ್ಣ (ಹೊಳೆನರಸೀಪುರ)

ಸಹೋದರರ ಗೆಲುವು:
– ಜಿ. ಕರುಣಾಕರರೆಡ್ಡಿ (ಹರಪನಹಳ್ಳಿ)
– ಜಿ.ಸೋಮಶೇಖರ ರೆಡ್ಡಿ (ಬಳ್ಳಾರಿ ನಗರ)

ಪತಿ ಸೋಲು- ಪತ್ನಿ ಗೆಲುವು:
– ಅಣ್ಣಾ ಸಾಹೇಬ ಜೊಲ್ಲೆ (ಚಿಕ್ಕೋಡಿ )
– ಶಶಿಕಲಾ ಜೊಲ್ಲೆ (ನಿಪ್ಪಾಣಿ)

ಸಹೋದರರ ಗೆಲುವು- ಸೋಲು:
– ಕುಮಾರ್‌ ಬಂಗಾರಪ್ಪ ಗೆಲುವು (ಸೊರಬ)
– ಮಧು ಬಂಗಾರಪ್ಪ ಸೋಲು (ಸೊರಬ)

No Comments

Leave A Comment