Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಸರಕಾರ ರಚನೆಗೆ ಬಿ.ಎಸ್‌.ವೈ. ಹಕ್ಕು ಮಂಡನೆ

ಬೆಂಗಳೂರು: ಬಹುನಿರೀಕ್ಷಿತ ವಿಧಾನಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾಗಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿ ಸ್ಪಷ್ಟ ಬಹುಮತದ ಪಕ್ಷ ಸರಕಾರ ರಚಿಸುವ ಭರವಸೆ ಹುಸಿಯಾಗಿದೆ. ಬೆನ್ನಲ್ಲೇ, ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯು ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಿದೆ. ಇನ್ನೊಂದೆಡೆ ಈ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಆಡಳಿತಾರೂಢ ಕಾಂಗ್ರೆಸ್‌ ಮೂರನೇ ಸ್ಥಾನ ಪಡೆದಿರುವ ಜೆಡಿಎಸ್‌ ಸರಕಾರ ರಚಿಸುವುದಕ್ಕೆ ಬೇಷರತ್‌ ಬೆಂಬಲ ಘೋಷಿಸಿದೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ನೀಡಿದೆ. ಇದರ ಆಧಾರದ ಮೇಲೆ ಕಾಂಗ್ರೆಸ್‌ ಜತೆ ಮೈತ್ರಿ ಸರಕಾರ ರಚಿಸಲು ಅವಕಾಶ ಕೋರಿ ಜೆಡಿಎಸ್‌ ಕೂಡ ರಾಜ್ಯಪಾಲರ ಮುಂದೆ ಹಕ್ಕು ಪ್ರತಿಪಾದಿಸಿದೆ. ಇದರಿಂದಾಗಿ ಹೊಸ ಸರಕಾರ ರಚನೆ ನಾಟಕೀಯ ಬೆಳವಣಿಗೆಗಳನ್ನು ಕಾಣುವಂತಾಗಿದೆ.

222 ಸ್ಥಾನಗಳ ಪೈಕಿ 221 ಸ್ಥಾನಗಳ ಫ‌ಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, 103 ಸ್ಥಾನದೊಂದಿಗೆ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹುಬ್ಬಳ್ಳಿ -ಧಾರವಾಡ ಕೇಂದ್ರ ಕ್ಷೇತ್ರದ ಫ‌ಲಿತಾಂಶ ಇವಿಎಂ ಸಮಸ್ಯೆ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದೆ. ಇಲ್ಲಿ ಜಗದೀಶ್‌ ಶೆಟ್ಟರ್‌ 20000 ಮತಗಳ ಮುನ್ನಡೆ ಗಳಿಸಿದ್ದರು. ಆಡಳಿತಾರೂಢ ಕಾಂಗ್ರೆಸ್‌ 78 ಸ್ಥಾನಗಳಿಗೆ ತೃಪ್ತಿ ಪಡೆದಿದೆ. ಜೆಡಿಎಸ್‌ 38 ಸ್ಥಾನ ಪಡೆದಿದ್ದರೆ, ಅದರೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ ಒಂದು ಸ್ಥಾನ, ಕೆಪಿಜೆಪಿ ಮತ್ತು ಪಕ್ಷೇತರರು ತಲಾ ಒಂದು ಸ್ಥಾನ ಗಳಿಸಿದ್ದಾರೆ. ಇದರಿಂದಾಗಿ ಸರಕಾರ ರಚಿಸಲು ಬೇಕಾದ ಮ್ಯಾಜಿಕ್‌ ಸಂಖ್ಯೆ 112 ತಲುಪಲು ಮೂರೂ ಪಕ್ಷಗಳು ವಿಫ‌ಲವಾದಂತಾಗಿವೆ.

ಮತ ಎಣಿಕೆ ಆರಂಭವಾಗಿ ಸ್ವಲ್ಪ ಹೊತ್ತಿಗೆ ಬಿಜೆಪಿ ಮುನ್ನಡೆ ಸಾಧಿಸುವ ಸೂಚನೆ ಕಾಣಿಸಿತ್ತು. 10.30ರ ವೇಳೆಗೆ ಮ್ಯಾಜಿಕ್‌ ಸಂಖ್ಯೆ 112 ದಾಟುವ ಲಕ್ಷಣ ಕಂಡುಬಂತು. ಆದರೆ, ಸಮಯ ಕಳೆದಂತೆ ಸಂಖ್ಯೆ ಕುಸಿತಗೊಂಡು ಅಂತಿಮವಾಗಿ 103 ಸ್ಥಾನ ಪಡೆಯುವಲ್ಲಿ ಮಾತ್ರ ಯಶಸ್ವಿಯಾಯಿತು. ಇತ್ತ ಬಿಜೆಪಿ ಸರಳ ಬಹುಮತ ಗಳಿಸಲು ಸಾಧ್ಯವಾಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಕಾಂಗ್ರೆಸ್‌ ಸರಕಾರ ರಚನೆಯ ಆಸೆ ಕೈಬಿಟ್ಟು ಜೆಡಿಎಸ್‌ ಸರಕಾರ ರಚಿಸಲು ಬೇಷರತ್‌ ಬೆಂಬಲ ನೀಡುವುದಾಗಿ ಘೋಷಿಸಿತು. ಅಲ್ಲದೆ, ಈ ಕುರಿತು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರಿಗೆ ಪತ್ರವನ್ನೂ ಕಳುಹಿಸಿತು. ಇದಾದ ಬಳಿಕ ಎಚ್‌.ಡಿ. ಕುಮಾರಸ್ವಾಮಿ ಅವರು ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚಿಸಿದರು. ಕಾಂಗ್ರೆಸ್‌ ಮುಂದಿಟ್ಟ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿ ಸರಕಾರ ರಚಿಸುವ ಕುರಿತು ರಾಜ್ಯಪಾಲರ ಮುಂದೆ ಹಕ್ಕು ಮಂಡನೆಗೆ ನಿರ್ಧರಿಸಿದರು. ಈ ಕುರಿತ ಮಾಹಿತಿಯನ್ನು ಕಾಂಗ್ರೆಸ್‌ ನಾಯಕರಿಗೆ ಕಳುಹಿಸಿದರು.

ಬಿಎಸ್‌ವೈ ರಾಜ್ಯಪಾಲರ ಭೇಟಿ
ಸಂಜೆ 5 ಗಂಟೆ ವೇಳೆಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ನಿಯೋಗ, ಸರಕಾರ ರಚನೆಯ ಹಕ್ಕು ಮಂಡಿಸಿತು. ಅನಂತರ ಪತ್ರಕರ್ತರ ಜತೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಹುಮತ ಸಾಬೀತಿಗೆ ಅವಕಾಶ ಕಲ್ಪಿಸುವಂತೆ ಕೋರಿದ್ದೇವೆ. ಮುಂದಿನ ತೀರ್ಮಾನ ರಾಜ್ಯಪಾಲರಿಗೆ ಬಿಟ್ಟಿದ್ದು ಎಂದರು. ಇದರ ಬೆನ್ನಲ್ಲೇ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ನಿಯೋಗ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌, ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಮುಖಂಡರಾದ ಗುಲಾಂ ನಬಿ ಆಜಾದ್‌, ಮಲ್ಲಿಕಾರ್ಜುನ ಖರ್ಗೆ, ಅಶೋಕ್‌ ಗೆಹಲೋಟ್ ಮತ್ತಿತರರು ರಾಜ್ಯಪಾಲರನ್ನು ಭೇಟಿಯಾದರು.

No Comments

Leave A Comment