Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ರಾಶಿ ರಾಶಿ ವೋಟರ್​ಐಡಿ ಬಂಧನ ಭೀತಿ: ತಲೆಮರೆಸಿಕೊಂಡ ಶಾಸಕ ಮುನಿರತ್ನ?

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಶಿ ರಾಶಿ ವೋಟರ್​ಐಡಿ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಪಿ ಪಟ್ಟಿಯಲ್ಲಿರುವ ಕಾಂಗ್ರೆಸ್​ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಬಂಧನ ಭೀತಿ ಎದುರಿಸುತ್ತಿರುವ ಮುನಿರತ್ನ ಅವರು ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದೀಗ ಮುನಿರತ್ನ ಅವರು ತಲೆಮರೆಸಿಕೊಂಡಿದ್ದು ಯಾರಾ ಕರೆಗೆ ಸಿಗುತ್ತಿಲ್ಲ. ಮನೆಯಲ್ಲಿಯೂ ಇಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಬಂಧನ ಭೀತಿಯಲ್ಲಿರುವ ಮುನಿರತ್ನ ಅವರು ತೆರೆಮರೆಯಲ್ಲಿ ಜಾಮೀನಿಗಾಗಿ ಹೊಡಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುನಿರತ್ನ ಸೇರಿ ಎಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420, 468, 471ರಡಿ ಪ್ರಕರಣ ದಾಖಲಿಸುವಂತೆ ನಗರದ  24ನೇ ಎಸಿಎಂಎಂ ಕೋರ್ಟ್ ನಲ್ಲಿ ಜಾಲಹಳ್ಳಿ ಪೊಲೀಸರಿಗೆ​ ಆದೇಶಿಸಿತ್ತು.
ಗುರುತಿನ ಚೀಟಿ ಯನ್ನು ರೇಡ್ ಮಾಡಲು ಹೋಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಲಾಗಿದೆ. ರಾಕೇಶ್ ಎಂಬುವವರು ಖಾಸಗಿ ದೂರು ಸಲ್ಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
No Comments

Leave A Comment