Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಕಟಪಾಡಿ ರಾ.ಹೆ.: ಟ್ರಾಫಿಕ್‌ ಜಾಮ್‌ ಕಿರಿಕ್‌

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ ಬಳಿ ಹೆದ್ದಾರಿ ಇಕ್ಕೆಲಗಳಲ್ಲಿಯೂ, ಕಟಪಾಡಿ ಪೇಟೆ ಮತ್ತು ಶಿರ್ವ ಸಂಪರ್ಕ ರಸ್ತೆಯಲ್ಲಿಯೂ  ವಾಹನ ದಟ್ಟಣೆಯಿಂದಾಗಿ ಕೆಲಕಾಲ ಟ್ರಾಫಿಕ್‌ ಜಾಮ್‌ ಆಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

ರವಿವಾರ ರಜಾ ದಿನ ಮತ್ತು ಹಲವು ಕಡೆಗಳಲ್ಲಿ ಶುಭ ಕಾರ್ಯಗಳ  ನಿಮಿತ್ತ ವಾಹನ ದಟ್ಟಣೆ ಎಂದಿಗಿಂತ ಹೆಚ್ಚಿತ್ತು. ಸುಮಾರು 11  ಗಂಟೆಯ ಅನಂತರ 12-30ರ ವರೆಗೆ ಹೆದ್ದಾರಿಯಲ್ಲಿ ಆಗಾಗ್ಗೆ ಸಾಲುದ್ದ ವಾಹನಗಳಿಂದಾಗಿ ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿತ್ತು ಎನ್ನಲಾಗುತ್ತಿದೆ.

ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್‌ ಜಾಮ್‌
ಮಧ್ಯಾಹ್ನದ ಅನಂತರದ ವೇಳೆಯಲ್ಲಿ ಕಟಪಾಡಿಯ ಹಳೆ ಎಂ.ಬಿ.ಸಿ. ರಸ್ತೆಯೂ ವಾಹನ ದಟ್ಟಣೆಯಿಂದ ಬೈಕ್‌ ಸವಾರರ ಸಹಿತ, ರಿಕ್ಷಾ, ಕಾರು, ಇತರೇ  ಸಾಲು ಸಾಲು ವಾಹನಗಳು ಅರ್ಧ ಗಂಟೆಗೂ ಮಿಕ್ಕಿದ ಕಾಲ ಟ್ರಾಫಿಕ್‌ ಜಾಮ್‌ ಆನುಭವಿಸುವಂತಾಯಿತು.

ಒಳ ರಸ್ತೆಯಲ್ಲೂ ಟ್ರಾಫಿಕ್‌ ಜಾಮ್‌ ಬಿಸಿ
ಕಟಪಾಡಿಯ ಹೆಚ್ಚಿನ ಎಲ್ಲ ಸಭಾಭವನಗಳಲ್ಲಿ ಶುಭ ಕಾರ್ಯಗಳು ನಡೆಯುತ್ತಿದ್ದರಿಂದ ಒಳ ರಸ್ತೆಯಲ್ಲಿ ವಾಹನಗಳು ಹೆಚ್ಚು ಸಂಚರಿಸಿದ ಪರಿಣಾಮ ಈ ಟ್ರಾಫಿಕ್‌ ಜಾಮ್‌ ಬಿಸಿ ಒಳ ರಸ್ತೆಯಲ್ಲಿಯೂ ಕಂಡು ಬಂದಿತ್ತು.

ಕೆಲವು ರಿಕ್ಷಾ ಚಾಲಕರು, ಸ್ಥಳೀಯರು ಟ್ರಾಫಿಕ್‌ ಜಾಮ್‌ ತಿಳಿಗೊಳಿಸುವಲ್ಲಿ ಸಫಲರಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಆನುವು ಮಾಡಿಕೊಟ್ಟರು.

No Comments

Leave A Comment