Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಸಚಿವ ರಮನಾಥ್ ರೈ ಆಪ್ತನ ಮೇಲೆ ಹಲ್ಲೆ: ಇತರ ನಾಲ್ವರಿಗೆ ಗಾಯ, ಎರಡು ಕಾರು ಜಖಂ

ಮಂಗಳೂರು: ಸಚಿವ ರಮಾನಾಥ ರೈ ಆಪ್ತನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಳೆದ ಮಧ್ಯರಾತ್ರಿ ದಾಳಿ ನಡೆಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾಗಿರುವ  ಕಾಚಿಗುಡ್ಡ ಸಂಜೀವ ಪೂಜಾರಿ ಬಂಟ್ವಾಳ ತಾಲೂಕಿನ ಸಜೀಪ ಮೂಡದಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ ವೇಳೆ ಮನೆ ಬಳಿ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ‌ಕಾರಿಗೆ ಕಲ್ಲು ಹೊಡೆದು ಹಾನಿ‌ ಮಾಡಿದ್ದಾರೆ.

ಇದರಿಂದ ಭಯಗೊಂಡು ಮನೆಗೆ ಹೋದ ಸಂಜೀವ ಪೂಜಾರಿ ಅವರನ್ನು ಹಿಂಬಾಲಿಸಿದ ಸುಮಾರು 20 ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿ ಸಾಮಾಗ್ರಿಗಳು ಮತ್ತು ಬಿಎಂಡಬ್ಲ್ಯೂ ಕಾರನ್ನು ಧ್ವಂಸಗೊಳಿಸಿದ್ದಾರೆ.ಘಟನೆಯಲ್ಲಿ ಸಂಜೀವ ಪೂಜಾರಿ ಅವರ ಪತ್ನಿ ವಸಂತಿ ಪೂಜಾರಿ ಸೇರಿದಂತೆ ತಡೆಯಲು ಬಂದ ಇತರ ಮೂವರ ಮೇಲೆಯೂ ಹಲ್ಲೆ ನಡೆಸಲಾಗಿದೆ.

ಎರಡು ಕಾರುಗಳಿಗೆ ಹಾನಿಯುಂಟಾಗಿದೆ. ಬಂಟ್ವಾಳ ತಾಲೂಕಿನ ತುಂಬೆಯ ಖಾಸಗಿ ಆಸ್ಪತ್ರೆಗೆ ಗಾಯಗೊಂಡವರನ್ನು ದಾಖಲಿಸಲಾಗಿದೆ. ಸಂಜೀವ್ ಪೂಜಾರಿ ಬಂಟ್ವಾಳದಲ್ಲಿ ಬಾರ್ ಹೊಂದಿದ್ದಾರೆ.ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment