Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ದೆಹಲಿ: ಕಾರು ಚರಂಡಿಗೆ ಬಿದ್ದು ರೇಡಿಯೋ ಮಿರ್ಚಿ ಉದ್ಯೋಗಸ್ಥೆ ಸಾವು

ನವದೆಹಲಿ: ಕಾರು ಚರಂಡಿಯಲ್ಲಿ ಮುಳುಗಿ 26 ವರ್ಷದ ರೇಡಿಯೊ ಮಿರ್ಚಿಯಲ್ಲಿ ನೌಕರರಾಗಿದ್ದ 26 ವರ್ಷದ ಮಹಿಳೆ ಮೃತಪಟ್ಟಿರುವ ಘಟನೆ ದೆಹಲಿ ಸಮೀಪ ನೊಯ್ಡಾದಲ್ಲಿ ಕಳೆದ ರಾತ್ರಿ ನಡೆದಿದೆ.

ದೆಹಲಿಯಲ್ಲಿ ರೇಡಿಯೋ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ತನಿಯಾ ಖನ್ನಾ ಮಧ್ಯರಾತ್ರಿ ಹೊತ್ತಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಕಾರು ಚಲಾಯಿಸಿಕೊಂಡು ಹಿಂತಿರುಗುತ್ತಿದ್ದಾಗ ತೆರೆದ ಚರಂಡಿ ಸಿಲುಕಿ ಕಾರಿನ ನಿಯಂತ್ರಣ ಕಳೆದುಕೊಂಡರು. ಇದರಿಂದ ಕಾರು ಅಪಘಾತಕ್ಕೀಡಾಗಿ ತನಿಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ದುರ್ಘಟನೆ ನೊಯ್ಡಾ ವಲಯ 94ರಲ್ಲಿ ನಡೆದಿದೆ.ತನಿಯಾ ಖನ್ನಾ ರೇಡಿಯೊ ಮಿರ್ಚಿಯ ಮಾರ್ಕೆಟಿಂಗ್ ತಂಡದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ವೇಗವಾಗಿ ಬರುತ್ತಿದ್ದ ಕಾರು ತೆರೆದ ಚರಂಡಿಗೆ ಹೋಗಿ ಢಿಕ್ಕಿ ಹೊಡೆದಾಗ ದಾರಿಹೋಕರು ತಕ್ಷಣವೇ ಪೊಲೀಸರಿಗೆ ಸುದ್ದಿ ತಲುಪಿಸಿದರು. ತನಿಯಾ ಮೃತದೇಹವನ್ನು ಇಂದು ಬೆಳಗ್ಗೆ ಹೊರತೆಗೆಯಲಾಗಿದ್ದು ಹತ್ತಿರದ ಆಸ್ಪತ್ರೆಗೆ ಶವಪರೀಕ್ಷೆಗೆ ಕೊಂಡೊಯ್ಯಲಾಯಿತು.ಪೊಲೀಸರು ತನಿಯಾ ಕುಟುಂಬಸ್ಥರಿಗೆ ವಿಷಯ ತಲುಪಿಸಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment