Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಚುನಾವಣಾ ಪ್ರಚಾರಕ್ಕೆ ಧುಮುಕಿದ ಯಶ್‌!;ಪಕ್ಷವಿಲ್ಲ, ಸ್ನೇಹ ಮಾತ್ರ

ಮೈಸೂರು : ನನಗೆ ರಾಜಕಾರಣಿಯಾಗಲು ಇಷ್ಟವಿಲ್ಲ ಎಂದಿದ್ದ  ರಾಕಿಂಗ್‌ ಸ್ಟಾರ್‌ ಯಶ್‌ ಅವರು ಮೈಸೂರಿನಲ್ಲಿ ಪಕ್ಷಾತೀತವಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಮೈಸೂರಿನ ಕೆ.ಆರ್‌.ನಗರ ಕ್ಷೇತ್ರದಲ್ಲಿ  ಜೆಡಿಸ್‌ ಅಭ್ಯರ್ಥಿ ಸಾ.ರಾ.ಮಹೇಶ್‌ ಅವರ ಪರ ಬೆಳಗ್ಗೆ  ರೋಡ್‌ ಶೋ ನಡೆಸಲಿದ್ದಾರೆ.

ಸಂಜೆ ಕೃಷ್ಣ ರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎಸ್‌.ಎ.ರಾಮ್‌ದಾಸ್‌ ಪರ ರೋಡ್‌ ಶೋ ನಡೆಸಲಿದ್ದಾರೆ.

ಇಬ್ಬರು  ನನ್ನ ಆಪ್ತರಾಗಿರುವ ಕಾರಣ ಪ್ರಚಾರಕ್ಕೆ ಮುಂದಾಗಿದ್ದು ಯಾವುದೇ ಪಕ್ಷದ ಪರ ಅಲ್ಲ ಎಂದು ಯಶ್‌ ತಿಳಿಸಿದ್ದಾರೆ.

ಮೂಲತಃ ಮೈಸೂರಿನವರೆ ಆದ ಯಶ್‌ ಯಶೋಮಾರ್ಗದ ಮೂಲಕ ಸಾಮಾಜಿಕ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.

No Comments

Leave A Comment