Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಕಾಂಗ್ರೆಸ್‌ -ಜೆಡಿಎಸ್‌ ಕಾರ್ಯಕರ್ತರ ಘರ್ಷಣೆ ;ಹೊಳೆನರಸೀಪುರ ಉದ್ವಿಗ್ನ

ಚೆನ್ನರಾಯಪಟ್ಟಣ : ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಮತ್ತು ಸಿಎಂ ಸಿದ್ದರಾಮಯ್ಯ ಆಪ್ತ ಬಾಗೂರು ಮಂಜೇಗೌಡ ಅವರ ಜಿದ್ದಾಜಿದ್ದಿನ ಸ್ಪರ್ಧಾ ಕಣವಾಗಿರುವ ಹೊಳೆನರಸೀಪುರ ದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ಘರ್ಷಣೆ ಆರಂಭವಾಗಿದೆ.

ಎ.ಕಾಳೇನ ಹಳ್ಳಿಯಲ್ಲಿ  ಉಭಯ ಪಕ್ಷಗಳ ಕಾರ್ಯಕರ್ತರ ನಡೆವೆ ಭಾನುವಾರ ರಾತ್ರಿ ಮಾರಾಮಾರಿ ನಡೆದಿದ್ದು, ಕಲ್ಲು ತೂರಾಟ ನಡೆದಿದೆ.

ಉಮೇಶ್‌ ಎನ್ನುವ ಕಾಂಗ್ರೆಸ್‌ ಮುಖಂಡರ  ಮನೆ ಮೇಲೆ ಕಲ್ಲು ತೂರಾಟ ನಡೆದಿರುವ ಬಗ್ಗೆ ವರದಿಯಾಗಿದೆ.

ಗ್ರಾಮದಲ್ಲಿ ಇದೀಗ ಉದ್ವಿಗ್ನ ವಾತಾವರಣವಿದ್ದು, ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಚೆನ್ನರಾಯಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿ ಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment