Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ನಿರ್ದೇಶಕ ಮಹೇಶ್ ಭಟ್ ಹತ್ಯೆಗೆ ಸಂಚು: ರವಿ ಪೂಜಾರಿ ಗ್ಯಾಂಗ್ ನ 10 ಮಂದಿಗೆ 5 ವರ್ಷ ಜೈಲು ಶಿಕ್ಷೆ

ಮುಂಬೈ: ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಮಹೇಶ್ ಭಟ್ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್ ನ 10 ಮಂದಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ವಿಶೇಷ ಕೋರ್ಟ್ ನ್ಯಾಯಾಧೀಶ ಶ್ರೀಧರ್ ಭೋಸ್ಲೆ ಅವರು, 10 ಮಂದಿಗೆ ಐದು ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಇತರೆ ಇಬ್ಬರನ್ನು ಖುಲಾಸೆಗೊಳಿಸಿದ್ದಾರೆ ಎಂದು ಸರ್ಕಾರಿ ಅಭಿಯೋಜಕ ಪ್ರದೀಪ್ ಘರತ್ ಅವರು ತಿಳಿಸಿದ್ದಾರೆ.
2014ರಲ್ಲಿ ಮಹೇಶ್ ಭಟ್ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ರವಿ ಪೂಜಾರಿ ಗ್ಯಾಂಗ್ ನ 12 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು.
ಇಶ್ರತ್ ಶೇಖ್. ಮೊಹಮ್ಮದ್ ಖಾನ್, ಅಜಿಮ್ ಖಾನ್, ಅಶ್‌ಫಾಕ್ ಸಯ್ಯದ್, ಅಸಿಫ್ ಖಾನ್, ಶಹ್‌ನವಾಜ್ ಶೇಖ್, ಫಿರೋಜ್ ಖಾದರ್, ಶಬ್ಬೀಕ್ ಶೇಖ್, ಫಾಹಿಂ ಖಾನ್, ಮೊಹಮ್ಮದ್ ಅನಿಸ್ ಮರ್ಚೆಂಟ್ ಶಿಕ್ಷೆ ಗುರಿಯಾದ ಅಪರಾಧಿಗಳಾಗಿದ್ದಾರೆ.
ಅಲ್ಲದೆ ಈ ಗ್ಯಾಂಗ್ 2014 ರಲ್ಲಿ ನಿರ್ಮಾಪಕ-ಸಹೋದರರಾದ ಕರೀಮ್ ಮತ್ತು ಅಲಿ ಮೊರಾನಿ ನಿವಾಸದ ಹೊರಗೆ ನಡೆದ ಶೂಟ್-ಔಟ್ ನಲ್ಲೂ ಭಾಗಿಯಾಗಿತ್ತು.
No Comments

Leave A Comment