Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮರಣ ದಂಡನೆಗೆ ಅರ್ಹ:ರೈಲಿನಲ್ಲಿ ಬಿಜೆಪಿ ನಾಯಕನಿಂದ 10ರ ಬಾಲೆಯ ರೇಪ್‌

ತಿರುವನಂತಪುರ : ತಿರುವನಂತಪುರ – ಚೆನ್ನೈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣದ ವೇಳೆ ನಿದ್ರಿಸಿಕೊಂಡಿದ್ದ 10 ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ ನಾಯಕ ಕೆ ಪಿ ಪ್ರೇಮ್‌ ಅನಂತ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೇಮ್‌ ಅನಂತ್‌  2006ರಲ್ಲಿ ತಮಿಳು ನಾಡಿನ ಆರ್‌ ಕೆ ನಗರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದ.

ತನ್ನ ಮನೆಯವರ ಜತೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯು ನಿದ್ರಿಸಿಕೊಂಡಿದ್ದಾಗ ಪ್ರೇಮ್‌ ಅನಂತ್‌ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ. ತನ್ನ ಮೇಲಾದ ಲೈಂಗಿಕ ದಾಳಿಯಿಂದ ಎಚ್ಚರಗೊಂಡ ಬಾಲಕಿಯು ಸಹಾಯಕ್ಕಾಗಿ ಕೂಗಿಕೊಂಡಾಗ ಆಕೆಯ ಮನೆಯವರು ಒಡನೆಯೇ ಎಚ್ಚರವಾಗಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

12 ವರ್ಷದೊಳಗಿನ ಹುಡುಗಿಯರ ಮೇಲೆ ಲೈಂಗಿಕ ಅತ್ಯಾಚಾರ, ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಮರಣ ದಂಡನೆಯನ್ನು ವಿಧಿಸುವ ಸುಗ್ರಿವಾಜ್ಞೆಗೆ ರಾಷ್ಟ್ರಪತಿವರು ಸಹಿ ಹಾಕಿದ ದಿನವೇ ಬಿಜೆಪಿ ನಾಯಕನಿಂದ ಈ ನಾಚಿಕೆಗೇಡಿನ ಅತ್ಯಾಚಾರ ಕೃತ್ಯ ನಡೆದಿದೆ. ಅಂತೆಯೇ ಆತನ ಈ ಕೃತ್ಯ ಮರಣ ದಂಡನೆ ಶಿಕ್ಷೆಗೆ ಅರ್ಹವಾದುದೆಂದು ಜನರು ಆಡಿಕೊಂಡಿದ್ದಾರೆ.

ಈರೋಡ್‌ ರೈಲ್ವೆ ಪೊಲೀಸರು ಆರೋಪಿ ಪ್ರೇಮ್‌ ಅನಂತ್‌ ವಿರುದ್ಧ ಪೋಕ್‌ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡು ಆತನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದಾರೆ.

No Comments

Leave A Comment