Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ನಾಮಪತ್ರಸಲ್ಲಿಸಲಾಗದ ಶಿರೂರು ಶ್ರೀ-ತಲೆತಿರುಗಿತು-ಎದೆನೋವು- ನಾಮಪತ್ರ ತೆಗೆದುಕೊಳ್ಳಲು ಚುನಾವಣಾಧಿಕಾರಿ ಕೆಳಗೆ ಬರುವ೦ತೆ ಒತ್ತಾಯಿಸಿಸ ಶ್ರೀಗಳು

ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಇ೦ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸುವುದಾಗಿ ಹೇಳಿ ನಾಮಪತ್ರವನ್ನು ಸಲ್ಲಿಸುವ ಮೊದಲು ದೇವರ ಪ್ರಾರ್ಥನೆಯನ್ನು ಸಲ್ಲಿಸುವಾಗ ಶ್ರೀಗಳಿಗೆ ತಲೆ ತಿರುಗಿದ ಘಟನೆಯು ನಡೆದಿದ್ದು ನ೦ತರ ಚುನಾವಣಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಲೆ೦ದು ಉಡುಪಿಯ ಬನ್ನ೦ಜೆಯಲ್ಲಿರುವ ಚುನಾವಣಾಧಿಕಾರಿ ಕಛೇರಿಗೆ ತೆರಳಿದಾಗ ತನಗೆ ಎದೆನೋವು ಆಗುತ್ತಿದೆ ಎ೦ದು ಹೇಳಿ ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತುಕೊ೦ಡ ಘಟನೆಯು ನಡೆದಿದೆ.

ನ೦ತರ ಶ್ರೀಗಳು ತನಗೆ ಮೆಟ್ಟಿಲು ಹತ್ತಲು ಆಗುತ್ತಿಲ್ಲ ಅಧಿಕಾರಿಯವರು ಕೆಳಗೆ ಬರುವ೦ತೆ ಒತ್ತಾಯಿಸಿದ್ದಾರೆ೦ದು ತಿಳಿದು ಬ೦ದಿದೆ. ಒಟ್ಟಾರೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಇದ್ದ ಕಾರಣ ಶಿರೂರು ಶ್ರೀಗಳ ನಾಮಪತ್ರ ಮಧ್ಯಾಹ್ನದ ವರೆಗೆ ಸಲ್ಲಿಕೆ ಯಾಗಿಲ್ಲ.

ಇದೀಗ ನಾಮಪತ್ರದ ಅರ್ಜಿಯನ್ನು ಪೂರ್ಣಗೊಳಿಸುವ ಪ್ರಕ್ರಿಯೆಯು ಮು೦ದುವರಿಸಲಾಗಿದೆ. ಮಧ್ಯಾಹ್ನ 3ಗ೦ಟೆಯ ಬಳಿಕ ನಾಮಪತ್ರವನ್ನು ಸಲ್ಲಿಸಲಾಗಿದೆ ಎ೦ದು ಹೇಳಲಾಗಿದೆ.

No Comments

Leave A Comment