Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಮರ್ಕ್ ಫೌಂಡೇಷನ್ ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆಫ್ರಿಕಾ ಮತ್ತು ಏಷ್ಯಾದಲ್ಲಿ ಎಂಬ್ರಿಯಾಲಜಿಸ್ಟ್‍ಗಳ ತರಬೇತಿಗೆ ಒಡಂಬಡಿಕೆ

• ಮರ್ಕ್ ಫೌಂಡೇಷನ್‍ನಿಂದ ಆಫ್ರಿಕಾಗೆ ಭಾರತ ಸಂಪರ್ಕ, ಆಫ್ರಿಕಾ ಮತ್ತು ಏಷ್ಯಾ ಖಂಡಗಳ ಫರ್ಟಿಲಿಟಿ ಆರೈಕೆ ಸಾಮಥ್ರ್ಯ ನಿರ್ಮಾಣ
• ಮರ್ಕ್ ಫರ್ಟಿಲಿಟಿ ಅಂಡ್ ಎಂಬ್ರಿಯಾಲಜಿ ತರಬೇತಿ ಕಾರ್ಯಕ್ರಮವು ಮರ್ಕ್ ಮೋರ್ ದ್ಯಾನ್ ಎ ಮದರ್ ಪ್ರೋಗ್ರಾಮ್‍ನ ಭಾಗವಾಗಿದೆ.
ಏಪ್ರಿಲ್ 18, 2018, ಮಣಿಪಾಲ, ಭಾರತ: ಜರ್ಮನಿಯ ಮರ್ಕ್ ಕೆಜಿಎಎ ಸೇವಾ ಅಂಗ ಮರ್ಕ್ ಫೌಂಡೇಷನ್ ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಾಹೆ ಆಫ್ರಿಕಾ ಮತ್ತು ಏಷ್ಯಾಗಳಲ್ಲಿ ಎಂಬ್ರಿಯಾಲಜಿ ತರಬೇತಿ ನೀಡಲು ಪಾಲುದಾರಿಕೆಗೆ ಸಹಿ ಹಾಕಿವೆ.
ಈ ಕಾರ್ಯಕ್ರಮದಲ್ಲಿ ಡಾ.ರಶಾ ಕೆಲೆಜ್, `ಭಾರತದಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅನ್ನು ಆಫ್ರಿಕಾ ಮತ್ತು ಏಷ್ಯಾಗಳಲ್ಲಿನ ಎಂಬ್ರಿಯಾಲಜಿಸ್ಟ್‍ಗಳ ಪ್ಲಾಟ್‍ಫಾರಂಗೆ ಅತ್ಯಾಧುನಿಕ ತರಬೇತಿ ನೀಡಲು ಸಹಯೋಗ ಹೊಂದಿರುವುದು ಮತ್ತು ಆಫ್ರಿಕಾ ಮತ್ತು ಏಷ್ಯಾಗಳಲ್ಲಿ ಪ್ರಮುಖ ಸವಾಲಾಗಿರುವ ತರಬೇತಿ ಮತ್ತು ಕುಶಲಿ ವೃತ್ತಿಪರರ ಕೊರತೆ ನಿವಾರಿಸಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಡಿಮೆ ವೆಚ್ಚದ ಗರ್ಭಧಾರಣೆಯ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ನಮಗೆ ಬಹಳ ಸಂತೋಷ ತಂದಿದೆ’ ಎಂದರು.
ಮರ್ಕ್ ಫೌಂಡೇಷನ್ ಮಾಹೆ ಸಹಯೋಗದಲ್ಲಿ ಮರ್ಕ್ ಎಂಬ್ರಿಯಾಲಜಿ ಟ್ರೈನಿಂಗ್ ಪ್ರೋಗ್ರಾಮ್ ಎಂಬ ಅಸಿಸ್ಟಿವ್ ರೀಪ್ರೊಡಕ್ಷನ್ ಮತ್ತು ಎಂಬ್ರಿಯಾಲಜಿ ಸರ್ಟಿಫಿಕೇಟ್ ಕೋರ್ಸ್ ಅನ್ನು ತನ್ನ `ಮರ್ಕ್ ಮೋರ್ ದ್ಯಾನ್ ಎ ಮದರ್’ ಅಭಿಯಾನದ ಮೂಲಕ ಪ್ರಾರಂಭಿಸಿದೆ.
ಈ ಕಾರ್ಯಕ್ರಮದಲ್ಲಿ ಮಾಹೆಯ ಸಮ ಕುಲಪತಿ ಪ್ರೊ.ಪೂರ್ಣಿಮಾ ಬಾಳಿಗಾ, `ಮರ್ಕ್ ಫೌಂಡೇಷನ್ ಮಹತ್ತರ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ, ಮತ್ತು ನಾವು ಈ ಪಾಲುದಾರಿಕೆ ಕುರಿತು ಅತ್ಯಂತ ಉತ್ಸುಕರಾಗಿದ್ದೇವೆ ಮತ್ತು ಫೌಂಡೇಷನ್‍ನೊಂದಿಗೆ ದೀರ್ಘಾವಧಿ ಪಾಲುದಾರಿಕೆಯ ಭರವಸೆ ಹೊಂದಿದ್ದೇವೆ’ ಎಂದರು.
ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನ ಡೀನ್ ಪ್ರೊ.ಪ್ರಜ್ಞಾ ರಾವ್, ಮರ್ಕ್ ಫೌಂಡೇಷನ್‍ನ ಪ್ರಯತ್ನಗಳನ್ನು ಶ್ಲಾಘಿಸಿದರು, `ಮರ್ಕ್ ಫೌಂಡೇಷನ್‍ನ ಈ ಅದ್ಭುತ ಉಪಕ್ರಮಕ್ಕೆ ನಮಗೆ ಬಹಳ ಸಂತೋಷವಾಗಿದೆ. ಮರ್ಕ್ ಫೌಂಡೇಷನ್ ಬಂಜೆತನದ ಕಳಂಕ ನಿವಾರಿಸಲು ನಡೆಸುತ್ತಿರುವ ಪ್ರಯತ್ನಗಳು ಮತ್ತು ಆಫ್ರಿಕಾ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗರ್ಭಧಾರಣೆಯ ಆರೈಕೆ ಸಾಮಥ್ರ್ಯ ವೃದ್ಧಿಸುವ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ’ ಎಂದರು.
ಈ ಕಾರ್ಯಕ್ರಮ ಆಫ್ರಿಕಾ ಮತ್ತು ಏಷ್ಯಾದ ಭಾಗಗಳಲ್ಲಿ ಅತ್ಯಂತ ಕೌಶಲ್ಯಪೂರ್ಣ ಎಂಬ್ರಿಯಾಲಜಿಸ್ಟ್‍ಗಳ ಕೊರತೆಯನ್ನು ಈ ದೇಶದಲ್ಲಿ ಹೆಚ್ಚುತ್ತಿರುವ ಫರ್ಟಿಲಿಟಿ ಆರೈಕೆಯ ಬೇಡಿಕೆಯನ್ನು ಪೂರೈಸಲಿದೆ. `ಈ ತರಬೇತಿ ಕಾರ್ಯಕ್ರಮ ಐವಿಎಫ್ ಕೇಂದ್ರಗಳಲ್ಲಿ ಎಂಬ್ರಿಯಾಲಜಿಸ್ಟ್‍ಗಳ ಸೂಕ್ಷ್ಮ ಕೌಶಲ್ಯಗಳನ್ನು ಉತ್ತಮಪಡಿಸುವ ಜವಾಬ್ದಾರಿ ಹೊಂದಿದೆ ಮತ್ತು ಮಾನವ ವೀರ್ಯಾಣು, ಅಂಡಾಣು ಮತ್ತು ಭ್ರೂಣಗಳನ್ನು ನಿರ್ವಹಿಸುವಾಗ ನೈತಿಕತೆಯ ಪ್ರಾಮುಖ್ಯತೆಗೆ ಒತ್ತು ನೀಡಲಿದೆ’ ಎಂದು ಈ ತರಬೇತಿ ಕಾರ್ಯಕ್ರಮದ ನೇತೃತ್ವ ವಹಿಸಿದ ಪ್ರೊ.ಸತೀಶ್ ಅಡಿಗ ಹೇಳಿದರು.
ಮರ್ಕ್ ಫೌಂಡೇಷನ್ ಹೆಚ್ಚು ಆಫ್ರಿಕಾ ಮತು ಏಷ್ಯಾದ ದೇಶಗಳನ್ನು ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ಆರೋಗ್ಯಸೇವಾ ಸಾಮಥ್ರ್ಯಗಳ ಸಾಮಥ್ರ್ಯಗಳ ಸುಧಾರಣೆಯ ಸ್ಪಷ್ಟ ಅನುಕೂಲಗಳ ಮೂಲಕ ಬಂಜೆತನವನ್ನು ಕಳಂಕರಹಿತವಾಗಿರುವ ಸಾಂಸ್ಕøತಿಕ ಬದಲಾವಣೆಯನ್ನು ತರುವ ಉದ್ದೇಶ ಹೊಂದಿದ್ದು ಮರ್ಕ್ ತಾಯಿಗಿಂತಲೂ ಹೆಚ್ಚು ಸುಸ್ಥಿರ ಸಕ್ರಿಯ ಭಾಗವಹಿಸುವಿಕೆಯನ್ನು 2015ರಿಂದಲೂ ವಿವಿಧ ದೇಶಗಳಲ್ಲಿ ಹೊಂದಿದೆ.
`ಮರ್ಕ್ ಮೋರ್ ದ್ಯಾನ್ ಎ ಮದರ್’ ಅಭಿಯಾನ; ಹಲವು ಸಂಸ್ಕøತಿಗಳಲ್ಲಿ ಮಕ್ಕಳಿಲ್ಲದ ಮಹಿಳೆ ತಾರತಮ್ಯ, ಕಳಂಕ ಮತ್ತು ಬಹಿಷ್ಕಾರ ಎದುರಿಸುತ್ತಾರೆ. ಮಕ್ಕಳನ್ನು ಹೆರಲಾಗದ ಅಸಾಮಥ್ರ್ಯ ಅವರನ್ನು ಪ್ರತ್ಯೇಕತೆ ಮತ್ತು ಹಲ್ಲೆಗಳಿಗೆ ಕಾರಣವಾಗುತ್ತದೆ. `ಮರ್ಕ್ ಮೋರ್ ದ್ಯಾನ್ ಎ ಮದರ್’ ಅಂತಹ ಮಹಿಳೆಯರಿಗೆ ಮಾಹಿತಿಯ ಲಭ್ಯತೆ, ಆರೋಗ್ಯ, ಮನಸ್ಥಿತಿ ಬದಲಾವಣೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಅವಕಾಶ ಕಲ್ಪಿಸುತ್ತದೆ.
ಮರ್ಕ್ ಫೌಂಡೇಷನ್ 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಮೂರು ತಿಂಗಳಿಂದ ಆರು ತಿಂಗಳವರೆಗೆ ಕ್ಲಿನಿಕಲ್ ಮತ್ತು ಪ್ರಾಯೋಗಿಕ ತರಬೇತಿಯನ್ನು ಫರ್ಟಿಲಿಟಿ ಸ್ಪೆಷಲಿಸ್ಟ್‍ಗಳು ಮತ್ತು ಎಂಬ್ರಿಯಾಲಜಿಸ್ಟ್‍ಗಲಿಗೆ ಆಫ್ರಿಕಾ ಮತ್ತು ಏಷ್ಯಾಗಳ 17ಕ್ಕೂ ಹೆಚ್ಚು ದೇಶಗಳಲ್ಲಿ ನೀಡುತ್ತಿದೆ.
ಮರ್ಕ್ ಫೌಂಡೇಷನ್ ಹಲವು ಫರ್ಟಿಲಿಟಿ ತಜ್ಞರು ಅಥವಾ ವಿಶೇಷ ಫರ್ಟಿಲಿಟಿ ಕ್ಲಿನಿಕ್‍ಗಳೇ ಇಲ್ಲದ ಆಫ್ರಿಕಾ ರಾಷ್ಟ್ರಗಳಲ್ಲಿ `ಮರ್ಕ್ ಮೋರ್ ದ್ಯಾನ್ ಎ ಮದರ್’ ಮಧ್ಯಪ್ರವೇಶದ ಮೂಲಕ ಸಿಯೆರ್ರಾ ಲಿಯೋನ್, ಲೈಬೀರಿಯಾ, ಜಾಂಬಿಯಾ, ನೈಗರ್, ಚಾಡ್ ಮತ್ತು ಗಿನಿಯಾಗಳಲ್ಲಿ ತರಬೇತಿ ನೀಡಿದೆ.
ಮರ್ಕ್ ಫೌಂಡೇಷನ್ ಇಥಿಯೋಪಿಯಾ ಮತ್ತು ಉಗಾಂಡಗಳಲ್ಲಿ ಮೊದಲ ಸಾರ್ವಜನಿಕ ಐವಿಎಫ್ ಕೇಂದ್ರಗಳ ಪ್ರಾರಂಭಕ್ಕೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವ ಮೂಲಕ ಬೆಂಬಲಿಸಿದೆ. ಮರ್ಕ್ ಫೌಂಡೇಷನ್ ಸದ್ಯದಲ್ಲೇ ತಾಂಜಾóನಿಯಾದಲ್ಲಿ ಮೊದಲ ಸಾರ್ವಜನಿಕ ಐವಿಎಫ್ ಪ್ರಾರಂಭಿಸಲು ಬೆಂಬಲಿಸಲಿದೆ.

No Comments

Leave A Comment