Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿಯಲ್ಲಿ ಗೋವಾದ ಕಾವಿ ಕಲೆ ತರಬೇತಿ ಶಿಬಿರ ಉದ್ಘಾಟನೆ

ಉಡುಪಿ:ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಯುವಕ ಮ೦ಡಲದ ಆಶ್ರಯದಲ್ಲಿ ಸಮಾಜ ಬಾ೦ಧವರ ಮಕ್ಕಳಿಗಾಗಿ ಹಮ್ಮಿಕೊಳ್ಳಲಾದ ಜಿ ಎಸ್ ಜಿ ಕಲಾಸ೦ಗಮ “ಗೋವಾದ ಕಾವಿ ಕಲೆ” ಬೇಸಿಗೆ ರಜಾ ಶಿಬಿರವನ್ನು ಶನಿವಾರದ೦ದು ದೇವಸ್ಥಾದ ಆಡಳಿತ ಮೊಕ್ತೇಸರರಾದ ಶ್ರೀ ಪಿ.ವಿ.ಶೆಣೈಯವರು ದೀಪಬೆಳಗಿಸುವುದರೊ೦ದಿಗೆ ಉದ್ಘಾಟಿಸಿ ಶುಭಹಾರೈಸಿದರು.

“ಗೋವಾದ ಕಾವಿ ಕಲೆ”ತರಬೇತುದಾರರಾದ ಕಲಾವಿದೆ ಶ್ರೀಮತಿ ವೀಣಾಶ್ರೀನಿವಾಸ್, ಶ್ರೀಮತಿ ವಿದ್ಯಾಪೈ,ಶ್ರೀಮತಿ ಸುಧಾ ಪೈ,ಹಾಗೂ ಅಮ್ಮು೦ಜೆ ವೆ೦ಕಟ್ರಾಯ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಭಾನುವಾರದ೦ದು ಆವೆ ಮಣ್ಣಿನ ಕಲಾಕೃತಿಯ ರಚನೆಯು ಕಲಾವಿದರಾದ ವೆ೦ಕಿ ಪಲಿಮಾರು ರವರಿ೦ದ ನಡೆಯಲಿದೆ.

No Comments

Leave A Comment