Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಜಿ.ಎಸ್.ಬಿ. ಮಹಿಳಾ ಮಂಡಳಿ ನೂತನ ಅಧ್ಯಕ್ಷರಾಗಿ ವೀಣಾ ಜೆ. ಶೆಣೈ ಅಧಿಕಾರ ಸ್ವೀಕಾರ

ಉಡುಪಿ ತೆಂಕಪೇಟೆಯ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ.ಎಸ್.ಬಿ. ಮಹಿಳಾ ಮಂಡಳಿಯ 2018-2020ರ ವರೆಗಿನ ನೂತನ ಅಧ್ಯಕ್ಷೀಯ ಪದಗ್ರಹಣ ಸಮಾರಂಭವು ದೇವಳದ ಭುವನೇಂದ್ರ ಮಂಟಪದಲ್ಲಿ ಭಾನುವಾರದಂದು ಜರಗಿತು.

ಜಿ.ಎಸ್.ಬಿ. ಮಹಿಳಾ ಮಂಡಳಿಯ ಆಧ್ಯಕ್ಷರಾಗಿ ಶ್ರೀಮತಿ ವೀಣಾ ಜೆ. ಶೆಣೈ ಇವರಿಗೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ನಯನಾ ಎಂ. ಶೆಣೈ ಅಧಿಕಾರ ಹಸ್ತಾಂತರಿಸಿದರು. ನೂತನ ಪದಾಧಿಕಾರಿಗಳಾದ, ಉಪಾಧ್ಯಕ್ಷರಾಗಿ ಸರಸ್ವತಿ ಶೆಣೈ, ಕಾರ್ಯದರ್ಶಿ ಅಂಜನಿ ಶೆಣೈ, ಜೊತೆ ಕಾರ್ಯದರ್ಶಿ ನರ್ಮದಾ ಶೆಣೈ, ಖಜಾಂಚಿ ಅನುಸೂಯ ಕಾಮತ್, ಜೊತೆ ಖಜಾಂಚಿ ಸುಜಾತಾ ಪೈ, ಗೌರವ ಅಧ್ಯಕ್ಷರಾಗಿ ಸುನೀತಿ ಪೈ ಮತ್ತು ಪ್ರಭಾ ವಿ. ಶೆಣೈ ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ಜಿ.ಎಸ್. ಬಿ. ಮಹಿಳಾ ಮಂಡಳಿಯ ನೂರಾರು ಸದಸ್ಯರು ಉಪಸ್ಥಿತರಿದ್ದರು

No Comments

Leave A Comment