Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಅಲ್ಗೇರಿಯಾ ಸೇನಾ ವಿಮಾನ ಪತನ: 257 ಮಂದಿ ದುರ್ಮರಣ

ಅಲ್ಜಿರಿಯಾ: ಅಲ್ಗೇರಿಯಾದ ಸೇನಾ ವಿಮಾನ ಪತನವಾಗಿದ್ದು ಇದರಲ್ಲಿ 257 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸೇನಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಲ್ಜಿರಿಯಾದ ಬೌಫರಿಕ್ ಸೇನಾ ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ನಡೆಸಿದೆ. ಈ ವಿಮಾನ ಅಲ್ಗೇರಿಯಾದ ವಾಯುಸೇನೆಯದಾಗಿತ್ತು. ವಿಮಾನ ಟೇಕ್ ಆಫ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆಸಿದ್ದು ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು.
ಘಟನಾ ಸ್ಥಳದಲ್ಲಿ 300ಕ್ಕೂ ಹೆಚ್ಚು ಮಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ನಾಗರಿಕ ರಕ್ಷಣೆ ಸಂಸ್ಥೆ ವಕ್ತಾರ ಫಾರೂಕ್ ಆಚೋರ್ ಹೇಳಿದ್ದಾರೆ.
No Comments

Leave A Comment