Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಕುಂದಾಪುರ ತಾ.ಪಂ.ಕಿರಿಯ ಎಂಜಿನಿಯರ್‌ ಮನೆ, ಕಚೇರಿಗೆ ಎಸಿಬಿ ದಾಳಿ

ಕುಂದಾಪುರ: ಆದಾಯ ಮೀರಿ ಆಸ್ತಿ, ಹಣ ಸಂಪಾದಿಸಿದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕುಂದಾಪುರ ತಾ.ಪಂ.ಕಿರಿಯ ಎಂಜಿನಿಯರ್‌ (ಎಡಬ್ಲೂಇ) ರವಿಶಂಕರ್‌ ಅವರ ಕುಂದಾಪುರದ ನಾನಾ ಸಾಹೇಬ್‌ ರಸ್ತೆಯಲ್ಲಿರುವ ಮನೆ, ತಾ.ಪಂ.ನಲ್ಲಿರುವ ಅವರ ಕಚೇರಿ ಹಾಗೂ ಹೊನ್ನಾವರದ ಮಾವನ ಮನೆಗೆ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಏಕಕಾಲದಲ್ಲಿ ದಾಳಿ ನಡೆಸಿದೆ.

ಪಶ್ಚಿಮ ವಲಯದ ಭ್ರಷ್ಟಚಾರ ನಿಗ್ರಹ ದಳದ ಎಸ್‌ಪಿ ಶ್ರುತಿ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ಮಂಗಳವಾರ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದು, ದಾಳಿ ವೇಳೆ ರವಿಶಂಕರ್‌ ಹಾಗೂ ಅವರ ಮನೆಯವರ ಹೆಸರಲ್ಲಿರುವ ಆಸ್ತಿ ದಾಖಲೆಗಳು, ನಗದು, ಚಿನ್ನಾಭರಣಗಳ ಕುರಿತ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ರವಿಶಂಕರ್‌ ಮೂಲತಃ ಕುಂದಾಪುರ ದವರೇ ಆಗಿದ್ದು, ವೃತ್ತಿಜೀವನ ಆರಂಭ ವಾದ 1989ರಿಂದಲೂ ಕುಂದಾಪುರ ತಾ.ಪಂ. ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೆಳಗ್ಗಿನಿಂದ ಸಂಜೆಯವರೆಗೂ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದ್ದು, ಈ ವೇಳೆ ಸ್ವಲ್ಪ ನಗದು ಹಾಗೂ ಚಿನ್ನಾಭರಣಗಳು ಸಿಕ್ಕಿವೆ. ಅವರ ಹೆಸರಲ್ಲಿರುವ ಸೈಟು ಗಳು ಹಾಗೂ ಮನೆಯ ಕುರಿತು ದಾಖಲೆಗಳನ್ನು ಪರಿಶೀಲನೆ ನಡೆಸಲಾಗು ವುದು. ಒಂದು ಲಾಕರ್‌ ತಪಾಸಣೆ ಬಾಕಿಯಿದ್ದು, ಅದನ್ನು ಬುಧವಾರ ತೆರೆಯುವುದಾಗಿ ಎಸಿಬಿ ಎಸ್ಪಿ ಶ್ರುತಿ  ತಿಳಿಸಿದ್ದಾರೆ.

ಎಸಿಬಿ ಡಿವೈಎಸ್‌ಪಿಗಳಾದ ಉಡುಪಿಯ ದಿನಕರ್‌ ಶೆಟ್ಟಿ, ಮಂಗಳೂರಿನ ಸುಧೀರ್‌ ಹೆಗ್ಡೆ, ಇನ್ಸ್‌ ಪೆಕ್ಟರ್‌ಗಳಾದ ಜಯರಾಮ ಡಿ. ಗೌಡ, ಸತೀಶ್‌ ಕುಮಾರ್‌ ಹಾಗೂ ಸಿಬಂದಿ ದಾಳಿ ನಡೆಸಿದ ಎಸಿಬಿ ತಂಡದಲ್ಲಿದ್ದರು.

No Comments

Leave A Comment