Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಯಡಿಯೂರಪ್ಪ, ಶ್ರೀರಾಮುಲು, ಈಶ್ವರಪ್ಪ ಸೇರಿ 72 ಜನರಿಗೆ ಟಿಕೆಟ್‌ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

ನವದೆಹಲಿ‌‌/ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಿರುವ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಭಾನುವಾರ ತಡರಾತ್ರಿ ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿವರೆಗೆ ನಿರಂತರವಾಗಿ ಸಭೆ ನಡೆಯಿತು. ಅಂತಿಮವಾಗಿ ರಾತ್ರಿ 11ರ ಸುಮಾರಿಗೆ ಮಾಧ್ಯಮಗೋಷ್ಠಿ ನಡೆಸಿದ ಪಕ್ಷದ ರಾಷ್ಟ್ರೀಯ ಚುನಾವಣಾ ಸಮಿತಿ ಕಾರ್ಯದರ್ಶಿ ಜೆ.ಪಿ. ನಡ್ಡಾ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಸಂಸದರಾದ ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ಪರಿಷತ್‌ ಸದಸ್ಯರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ ಯತ್ನಾಳ ಅವರು ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಜಿ ಸಚಿವ ಬಿ.ಎನ್‌. ಬಚ್ಚೇಗೌಡ ಪುತ್ರ ಶರತ್‌ಗೆ ಹೊಸಕೋಟೆಯಲ್ಲಿ ಹಾಗೂ ಮಾಜಿ ಸಚಿವ ಕೃಷ್ಣಪ್ಪ ಪುತ್ರಿ ಪೂರ್ಣಿಮಾಗೆ ಹಿರಿಯೂರಿನಲ್ಲಿ ಟಿಕೆಟ್‌ ನೀಡಲಾಗಿದೆ. ರಾಜರಾಜೇಶ್ವರಿನಗರ ಕ್ಷೇತ್ರದ ಟಿಕೆಟ್‌ಗೆ ಹಗ್ಗಜಗ್ಗಾಟ ನಡೆದಿತ್ತು. ಇಲ್ಲಿ ಶಿಲ್ಪಾ ಗಣೇಶ್‌ ಬದಲಿಗೆ ಯುವಮೋರ್ಚಾ ಮುಖಂಡ ಪಿ.ಎಂ. ಮುನಿರಾಜುಗೌಡಗೆ ಪಕ್ಷ ಮಣೆ ಹಾಕಿದೆ. ಚಿಕ್ಕಪೇಟೆಯಲ್ಲಿ ಈ ಬಾರಿಯೂ ಉದ್ಯಮಿ ಉದಯ ಗರುಡಾಚಾರ್‌ ಪಕ್ಷದ ಅಭ್ಯರ್ಥಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರು ಹುರಿಯಾಳು: ನಿಪ್ಪಾಣಿ– ಶಶಿಕಲಾ ಜೊಲ್ಲೆ, ಅಥಣಿ– ಲಕ್ಷ್ಮಣ ಸವದಿ, ಕಾಗವಾಡ- ಭರಮಗೌಡ ಕಾಗೆ, ಕುಡಚಿ- ಪಿ.ರಾಜೀವ್, ರಾಯಭಾಗ- ದುರ್ಯೋಧನ ಐಹೊಳೆ,ಹುಕ್ಕೇರಿ- ಉಮೇಶ್ ಕತ್ತಿ, ಅರಬಾವಿ- ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಗ್ರಾಮಾಂತರ– ಸಂಜಯ ಪಾಟೀಲ,  ಬೈಲಹೊಂಗಲ- ವಿಶ್ವನಾಥ ಪಾಟೀಲ, ಸವದತ್ತಿ- ಆನಂದ ಮಾಮನಿ,  ಮುಧೋಳ- ಗೋವಿಂದ ಕಾರಜೋಳ, ಮುದ್ದೇಬಿಹಾಳ – ಎ.ಎಸ್.ಪಾಟೀಲ ನಡಹಳ್ಳಿ, ಬಬಲೇಶ್ವರ– ವಿಜುಗೌಡ ಪಾಟೀಲ್.

ವಿಜಯಪುರ ನಗರ– ಬಸನಗೌಡ ಪಾಟೀಲ ಯತ್ನಾಳ, ಸಿಂದಗಿ- ರಮೇಶ್ ಭೂಸನೂರು, ಅಫಜಲ್‌ಪುರ– ಮಾಲೀಕಯ್ಯ ಗುತ್ತೇದಾರ, ಸುರಪುರ–ನರಸಿಂಹ ನಾಯಕ (ರಾಜೂ ಗೌಡ), ಶಹಾಪುರ– ಗುರು ಪಾಟೀಲ ಶಿರವಾಳ, ಕಲಬುರ್ಗಿ ದಕ್ಷಿಣ– ದತ್ತಾತ್ರೇಯ ಪಾಟೀಲ ರೇವೂರ, ಆಳಂದ– ಸುಭಾಷ್‌ ಗುತ್ತೇದಾರ, ಬಸವಕಲ್ಯಾಣ– ಮಲ್ಲಿಕಾರ್ಜುನ ಖೂಬಾ, ಔರಾದ– ಪ್ರಭು ಚವ್ಹಾಣ, ರಾಯಚೂರು ಗ್ರಾಮಾಂತರ– ತಿಪ್ಪರಾಜು, ರಾಯಚೂರು– ಡಾ.ಶಿವರಾಜ ಪಾಟೀಲ.

ದೇವದುರ್ಗ– ಶಿವನಗೌಡ ನಾಯಕ್‌, ಲಿಂಗಸುಗೂರು– ಮಾನಪ್ಪ ವಜ್ಜಲ್‌, ಕುಷ್ಠಗಿ– ದೊಡ್ಡನಗೌಡ ಪಾಟೀಲ, ಧಾರವಾಡ– ಅಮೃತ್‌ ದೇಸಾಯಿ, ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌– ಜಗದೀಶ ಶೆಟ್ಟರ್‌, ಹುಬ್ಬಳ್ಳಿ– ಧಾರವಾಡ ಪಶ್ಚಿಮ– ಅರವಿಂದ ಬೆಲ್ಲದ, ಕಾರವಾರ– ರೂಪಾಲಿ ನಾಯ್ಕ್‌, ಶಿರಸಿ– ವಿಶ್ವೇಶ್ವರ ಹೆಗಡೆ ಕಾಗೇರಿ, ಹಾನಗಲ್‌– ಸಿ.ಎಂ. ಉದಾಸಿ, ಶಿಗ್ಗಾವಿ–ಬಸವರಾಜ ಬೊಮ್ಮಾಯಿ, ಹಿರೇಕೆರೂರ–ಯು.ಬಿ.ಬಣಕಾರ, ವಿಜಯನಗರ–ಗವಿಯಪ್ಪ.

ಕಂಪ್ಲಿ–ಟಿ.ಎಚ್‌. ಸುರೇಶಬಾಬು, ಸಂಡೂರು– ಬಿ.ರಾಘವೇಂದ್ರ, ಮೊಳಕಾಲ್ಮುರು–ಬಿ.ಶ್ರೀರಾಮುಲು, ಚಿತ್ರದುರ್ಗ–ಜಿ.ಎಚ್‌.ತಿಪ್ಪಾರೆಡ್ಡಿ, ಹಿರಿ
ಯೂರು–ಪೂರ್ಣಿಮಾ ಶ್ರೀನಿವಾಸ, ಹೊಸದುರ್ಗ–ಗೂಳಿಹಟ್ಟಿ ಶೇಖರ, ದಾವಣಗೆರೆ ಉತ್ತರ–ಎಸ್‌.ಎ.ರವೀಂದ್ರನಾಥ್‌.

ಶಿವಮೊಗ್ಗ–ಕೆ.ಎಸ್‌.ಈಶ್ವರಪ್ಪ, ಶಿಕಾರಿಪುರ–ಬಿ.ಎಸ್‌.ಯಡಿಯೂರಪ್ಪ, ಕುಂದಾಪುರ–ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳ–ವಿ.ಸುನೀಲ್‌ ಕುಮಾರ್‌, ಶೃಂಗೇರಿ–ಡಿ.ಎನ್‌.ಜೀವರಾಜ, ಚಿಕ್ಕಮಗಳೂರು–ಸಿ.ಟಿ.ರವಿ, ತುಮಕೂರು ಗ್ರಾಮಾಂತರ– ಬಿ.ಸುರೇಶಗೌಡ, ಕೋಲಾರ (ಕೆಜಿಎಫ್‌)–ವೈ.ಸಂಪಂಗಿ

ಯಲಹಂಕ–ಎಸ್‌.ಆರ್‌.ವಿಶ್ವನಾಥ್‌, ರಾಜರಾಜೇಶ್ವರಿನಗರ–ಪಿ.ಎಂ.ಮುನಿರಾಜುಗೌಡ, ದಾಸರಹಳ್ಳಿ–ಎಸ್‌.ಮುನಿರಾಜು, ಮಲ್ಲೇಶ್ವರ–ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಹೆಬ್ಬಾಳ–ವೈ.ಎ.ನಾರಾಯಣಸ್ವಾಮಿ, ಸಿ.ವಿ.ರಾಮನ್‌ ನಗರ–ಎಸ್‌.ರಘು, ರಾಜಾಜಿನಗರ–ಎಸ್‌.ಸುರೇಶಕುಮಾರ್‌, ಗೋವಿಂದರಾಜನಗರ–ವಿ.ಸೋಮಣ್ಣ, ಚಿಕ್ಕಪೇಟೆ–ಉದಯ ಗರುಡಾಚಾರ್‌, ಬಸವನಗುಡಿ– ಎಲ್‌.ಎ.ರವಿಸುಬ್ರಹ್ಮಣ್ಯ, ಪದ್ಮನಾಭನಗರ–ಆರ್‌.ಅಶೋಕ, ಜಯನಗರ–ಬಿ.ಎನ್‌.ವಿಜಯಕುಮಾರ್‌, ಮಹದೇವಪುರ–ಅರವಿಂದ ಲಿಂಬಾವಳಿ, ಬೊಮ್ಮನಹಳ್ಳಿ–ಸತೀಶ ರೆಡ್ಡಿ, ಬೆಂಗಳೂರು ದಕ್ಷಿಣ–ಎಂ.ಕೃಷ್ಣಪ್ಪ, ಆನೇಕಲ್‌–ಎ.ನಾರಾಯಣಸ್ವಾಮಿ, ಹೊಸಕೋಟೆ–ಶರತ್‌ ಬಚ್ಚೇಗೌಡ

ಚನ್ನಪಟ್ಟಣ–ಸಿ.ಪಿ.ಯೋಗೀಶ್ವರ್, ಶ್ರೀರಂಗಪಟ್ಟಣ–ನಂಜುಂಡೇಗೌಡ, ಸುಳ್ಯ–ಎಸ್‌.ಅಂಗಾರ, ಮಡಿಕೇರಿ–ಅಪ್ಪಚ್ಚು ರಂಜನ್‌.

ಪಕ್ಷಾಂತರಿಗಳಿಗೆ ಮಣೆ

ಜೆಡಿಎಸ್‌ನಿಂದ ವಲಸೆ ಬಂದಿರುವ ಡಾ.ಶಿವರಾಜ ‍ಪಾಟೀಲ, ಮಾನಪ್ಪ ವಜ್ಜಲ್‌, ಮಲ್ಲಿಕಾರ್ಜುನ ಖೂಬಾ, ಸುಭಾಷ್‌ ಗುತ್ತೇದಾರ ಮತ್ತು ಕಾಂಗ್ರೆಸ್‌ ತೊರೆದು ಭಾನುವಾರವಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿರುವ ಮಾಲೀಕಯ್ಯ ಗುತ್ತೇದಾರಗೆ ಸ್ಥಾನ ಸಿಕ್ಕಿದೆ. ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದಿದ್ದ ಸಿ.ಪಿ. ಯೋಗೀಶ್ವರ್‌, ಬಿಎಸ್‌ಆರ್‌ ಪಕ್ಷದಿಂದ ಗೆದ್ದಿದ್ದ ಪಿ.ರಾಜೀವ, ಟಿ.ಎಚ್.ಸುರೇಶಬಾಬುಗೆ ಟಿಕೆಟ್‌ ಸಿಕ್ಕಿದೆ. ಪಕ್ಷೇತರರಾಗಿ ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಬಿಜೆಪಿ ಅಭ್ಯರ್ಥಿ.

No Comments

Leave A Comment