Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಐಪಿಎಲ್ 2018: ಬೆಂಗಳೂರನ್ನು ಮಣಿಸಿದ ಕೋಲ್ಕತ್ತಾಗೆ ನಾಲ್ಕು ವಿಕೆಟ್ ಜಯ

ಕೋಲ್ಕತ್ತಾ: ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆದ ರಾಯಲ್​ ಛಾಲೆಂಜರ್ಸ್​ ಬೆಂಗಳೂರು ಹಾಗೂ ಕೊಲ್ಕತ್ತ ನೈಟ್​ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ವಿರುದ್ಧ ಕೋಲ್ಕತ್ತಾ 4 ವಿಕೆಟ್ ಗಳಿಂದ ಜಯ ಸಾಧಿಸಿದೆ.
ಮೊದಲಿಗೆ ಬ್ಯಾಟ್ ಮಾಡಿದ್ದ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 176 ರನ್​ ಕಲೆ ಹಾಕಿತ್ತು. ಬೆಂಗಳೂರಿನ ಪರವಾಗಿ ಬ್ರೆಂಡನ್​ ಮೆಕಲಮ್​(43), ವಿರಾಟ್​ ಕೊಹ್ಲಿ(31), ಎಬಿ ಡಿವಿಲಿಯರ್ಸ್​(44) ಹಾಗೂ ಮಂದೀಪ್​ ಸಿಂಗ್​ (37) ಉತ್ತಮ ರನ್ ಪೇರಿಸಿದ್ದರು.
ಕೋಲ್ಕತ್ತಾದ ಬೌಲರ್ ಗಳಾದ ವಿನಯ್​ ಕುಮಾರ್​, ನಿತೀಶ್​​ ರಾಣ ತಲಾ ಎರಡು ವಿಕೆಟ್ ಕಬಳಿಸಿದರೆ ಪಿಯೂಷ್​ ಚಾವ್ಲ, ಮಿಚೆಲ್​ ಜಾನ್ಸನ್​ ಹಾಗೂ ಸುನೀಲ್​ ನರೇನ್​ ತಾವು ಒಂದೊಂದು ವಿಕೆಟ್ ಪಡೆದರು.
ಬೆಂಗಳೂರು ತಂಡ ನೀಡಿದ್ದ 177 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ 18.5 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. ಸುನೀಲ್​ ನರೇನ್​ (50), ನಿತೀಶ್​ ರಾಣ(34) ಹಾಗೂ ದಿನೇಶ್​ ಕಾರ್ತಿಕ್​(35*)  ಅವರುಗಳು ಕೋಲ್ಕಾತ್ತಾ ತಂಡದ ಪರವಾಗಿ ಉತ್ತಮ ಪ್ರದರ್ಶ್ನ ನಿಡಿದ್ದಾರೆ.
ಆರ್​ಸಿಬಿ ಬೌಲರ್ ಕ್ರಿಸ್​ ವೋಕ್ಸ್​ 3 ವಿಕೆಟ್ ಪಡೆದು ಮಿಂಚಿದರೆ ಉಮೇಶ್​ ಯಾದವ್​ 2 ವಿಕೆಟ್​ ಉರುಳಿಸಲು ಸಮರ್ಥರಾದರು. ವಾಷಿಂಗ್ಟ್​ನ್​ ಸುಂದರ್​ 1 ವಿಕೆಟ್​ ಪಡೆದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 176/7 (20.0 ಓವರ್)
ಕೋಲ್ಕತ್ತಾ ನೈಟ್ ರಈಡರ್ಸ್ 177/6 (18.5 ಓವರ್)
No Comments

Leave A Comment