Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಕಾಮನ್’ವೆಲ್ತ್ ಕ್ರೀಡಾಕೂಟ: ಭಾರತಕ್ಕೆ 7ನೇ ಚಿನ್ನ, ಮಹಿಳಾ ಟೇಬಲ್ ಟೆನಿಸ್ ತಂಡಕ್ಕೆ ಪದಕದ ಗರಿ

ಗೋಲ್ಡ್’ಕೋಸ್ಟ್: 2018ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಬೇಟೆಯನ್ನು ಮುಂದುವರೆಸಿದ್ದು, ಮಹಿಳಾ ಟೇಬಲ್ ಟೆನಿಸ್ ತಂಡ ಭಾನುವಾರ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ 7ನೇ ಸ್ವರ್ಣ ಪದಕ ತಂದುಕೊಟ್ಟಿದೆ.
ಇಂದು ನಡೆದ ಟೇಬಲ್ ಟೆನಿಸ್ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ, ಸಿಂಗಾಪುರದ ವಿರುದ್ಧ 3–1 ಅಂತರದಿಂದ ಗೆಲುವು ಸಾಧಿಸಿದೆ.
ಮೂರನೇ ಪಂದ್ಯದಲ್ಲಿ ಭಾರತದ ಮಣಿಕಾ ಬಾತ್ರಾ ಅವರು ಸಿಂಗಾಪುರದ ಯಿಹಾನ್ ಝೌ ವಿರುದ್ಧ 11–7 ಅಂತರದಿಂದ ಜಯ ಗಳಿಸಿದರು.
ಮಣಿಕಾ ಬಾತ್ರಾ ಒಂದನೇ ಪಂದ್ಯದಲ್ಲಿ 11-7 ಹಾಗೂ ಎರಡನೇ ಪಂದ್ಯದಲ್ಲು 11-4 ಅಂತರದಿಂದ ಗೆಲುವು ಸಾಧಿಸಿದ್ದರು.
ಇದಕ್ಕು ಮುನ್ನ, ಕಾಮನ್ ವೆಲ್ತ್ ಕ್ರೀಡಾಕೂಡದಲ್ಲಿ ತಮ್ಮ ಪ್ರಾಬಲ್ಯತೆ ಮೆರೆದ ವೇಟ್ ಲಿಫ್ಚರ್ ಗಳು ಭಾರತಕ್ಕೆ 6ನೇ ಚಿನ್ನದ ಪದಕ ತಂದುಕೊಟ್ಟಿದ್ದರು. ಭಾರತದ ಪೂನಮ್ ಯಾದವ್ ಒಟ್ಟು 222 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ.
69 ಕೆಜಿ ವಿಭಾಗದಲ್ಲಿ ಪೂನಮ್ಮ ಕ್ಲೀನ್ ಆ್ಯಂಡ್ ಜರ್ಕ್ ಮತ್ತು ಸ್ನ್ಯಾಚ್ ನಲ್ಲಿ ಉತ್ತಮ ಸಾಧನೆ ಮಾಡಿದರು.
ಇದರಂತೆ ಶೂಟಿಂಗ್ ವಿಭಾಗದಲ್ಲಿಯೂ ಭಾರತಕ್ಕೆ ಚಿನ್ನದ ದಕ್ಕಿದ್ದು, ಇದರೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
16 ವರ್ಷದ ಭಾರತದ ಮನು ಬಾಕೇರ್ ಅವರು 10 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಇದೇ ವಿಭಾಗದಲ್ಲಿ ಹೀನಾ ಸಿಧು ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ.
No Comments

Leave A Comment