Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಚಾನುಗೆ ಚಿನ್ನ, ಕನ್ನಡಿಗ ಗುರು ಬೆಳ್ಳಿ ಹೆಜ್ಜೆ

ಗೋಲ್ಡ್‌ಕೋಸ್ಟ್‌ (ಆಸ್ಟ್ರೇಲಿಯಾ): 21ನೇ ಕಾಮನ್‌ವೆಲ್ತ್‌ ಕೂಟದ ಮೊದಲ ದಿನವೇ ಭಾರತ ಚಿನ್ನ, ಬೆಳ್ಳಿ ಗೆಲ್ಲುವುದರೊಂದಿಗೆ ಸಂಭ್ರಮದ ಅಲೆಯಲ್ಲಿ  ಮುಳುಗೆದ್ದಿದೆ. ಕರ್ನಾಟಕದ ವೇಟ್‌ಲಿಫ್ಟರ್‌ ಪಿ.ಗುರುರಾಜ್‌ ಮತ್ತು ಮಣಿಪುರದ ವೇಟ್‌ಲಿಫ್ಟರ್‌ ಸೈಕೋಮ್‌ ಮೀರಾಬಾಯಿ ಚಾನು ದೇಶ ಹೆಮ್ಮೆಯಿಂದ ಹೇಳಿಕೊಳ್ಳುವ ಸಾಧನೆ ಮಾಡಿದ್ದಾರೆ. 56 ಕೆಜಿ ವಿಭಾಗದಲ್ಲಿ ಗುರುರಾಜ್‌ ಬೆಳ್ಳಿ ಪದಕ ಗೆದ್ದರೆ, 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಸ್ವರ್ಣ ಪದಕ ಗೆದ್ದರು.

ಅಲ್ಲಿಗೆ ಕ್ರೀಡಾಕೂಟದ ಮೊದಲ ದಿನವೇ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಹೆಗ್ಗಳಿಕೆ ಗುರುರಾಜ್‌ ಪಾಲಾದರೆ, ಮೊದಲ ಚಿನ್ನ ಗೆದ್ದ ಖ್ಯಾತಿ ಮೀರಾಬಾಯಿಗೆ ಸಂದಿತು.

ಮೀರಾಬಾಯಿ ದಾಖಲೆ: ಮಣಿಪುರದ ಸೈಕೋಮ್‌ ಮೀರಾಬಾಯಿ ಚಾನು 48 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಅತ್ಯಂತ ಸಲೀಸಾಗಿ ತೂಕ ಎತ್ತುವುದರ ಜೊತೆಗೆ ಕಾಮನ್‌ವೆಲ್ತ್‌ ಕೂಟ ದಾಖಲೆಯನ್ನೂ ನಿರ್ಮಿಸಿದರು. ಸ್ನ್ಯಾಚ್‌ನಲ್ಲಿ ಅವರು ಮೂರು ಬಾರಿಯೂ ಯಾವುದೇ ತೊಂದರೆ ಇಲ್ಲದೇ 80, 84, 86 ಕೆಜಿ ಭಾರ ಎತ್ತಿದರು. ಇದು ಕಾಮನ್‌ವೆಲ್ತ್‌ ಕೂಟ ದಾಖಲೆ ಎನಿಸಿಕೊಂಡಿತು. ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ 103, 107,110 ಕೆಜಿ ಭಾರ ಎತ್ತಿದ್ದು, ಎಲ್ಲಿಯೂ ಅವರು ಎಡವಲಿಲ್ಲ. ಇದು ಈ ಬಾರಿಯ ಕೂಟದ ವಿಶೇಷವೂ ಹೌದು.

ಗೆಲುವು ಕಸಿದ ಗುರುರಾಜ್‌
ಕನ್ನಡಿಗ ಪಿ.ಗುರುರಾಜ್‌ ಕಾಮನ್ವೆಲ್ತ್‌ ಗೇಮ್ಸ್‌ ವೇಟ್‌ಲಿಫ್ಟಿಂಗ್‌ನ 56 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಬಾರಿಯ ಪದಕ ಪಟ್ಟಿಯಲ್ಲಿ ಭಾರತಕ್ಕಿದು ಮೊದಲ ಪದಕ. 25 ವರ್ಷದ ಗುರುರಾಜ್‌ಗೆ ಇದು ಮೊದಲ ಕಾಮನ್‌ವೆಲ್ತ್‌ ಕೂಟವಾಗಿತ್ತು. ಒಟ್ಟಾರೆ ಅವರು 249 ಕೆ.ಜಿ ಎತ್ತಿದರು. ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಸಮಗೊಳಿಸಿದರು.

ಆರಂಭದ ಕ್ಲೀನ್‌ ಹಾಗೂ ಜರ್ಕ್‌ನ ಮೊದಲ ಎರಡು ಅವಕಾಶದಲ್ಲಿ ಗುರುರಾಜ್‌ ಅನರ್ಹರಾಗಿದ್ದರು. ಮೂರನೇ ಸುತ್ತಿನಲ್ಲಿ ಅನರ್ಹಗೊಂಡಿದ್ದರೆ ಅವರು ಸ್ಪರ್ಧೆಯಿಂದಲೇ ಹೊರಬೀಳುವ ಸಾಧ್ಯತೆ ಇತ್ತು. ಆದರೆ 3ನೇ ಸುತ್ತಿನಲ್ಲಿ ಗುರುರಾಜ್‌ ದೇಶ, ಜನ, ತನ್ನೂರು, ಹೆತ್ತವರನ್ನು ನೆನೆದು ಹೋರಾಟ ನಡೆಸಿದರು. ಮೊದಲ ಪ್ರಯತ್ನದಲ್ಲಿ 111 ಕೆ.ಜಿ ಹಾಗೂ ಮತ್ತೂಂದರಲ್ಲಿ 138 ಕೆ.ಜಿ ಭಾರವನ್ನು ಎತ್ತಿಹಿಡಿದರು. ಅಂತಿಮವಾಗಿ ಬೆಳ್ಳಿಯ ನಗು ಬೀರಿದರು. ಸ್ವಲ್ಪದರಲ್ಲೇ ಚಿನ್ನದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ಮಲೇಷ್ಯಾದ ಮುಹಮ್ಮದ್‌ ಇಝಾರ್‌ ಅಹ್ಮದ್‌ ಚಿನ್ನದ ಪದಕ, ಶ್ರೀಲಂಕಾದ ಲಕ್ಮಲ್‌ ಚತುರಂಗಾ ಕಂಚಿನ ಪದಕ ಪಡೆದುಕೊಂಡರು.

No Comments

Leave A Comment