Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಏಕಾಎಕಿ ತಡೆದು ನಿಲ್ಲಿಸಿ ಮುಖಕ್ಕೆ  ಕಣ್ಣಿಗೆ  ಪಂಚ್  ಮಾಡಿ, ಹಲ್ಲೆ

  • ಉಡುಪಿ: ಪಿರ್ಯಾದಿದಾರರಾದ ಪುಷ್ಪರಾಜ್ ಶೆಟ್ಟಿ (38) ತಂದೆ: ನಾರಾಯಣ ಶೆಟ್ಟಿ ವಾಸ: ಹರಿಗುರು ನಿಲಯ, ದೊಡ್ಡಣಗುಡ್ಡೆ, ಉಡುಪಿ ಇವರು ಪುತ್ತೂರು ಗ್ರಾಮದ ಕೊಡಂಕೂರಿನಲ್ಲಿ ಮೆಡಿಕಲ್ ಶಾಪ್ ಮಾಡಿಕೊಂಡಿದ್ದು ದಿನಾಂಕ 04/04/2018 ರಂದು ಬೆಳಿಗ್ಗೆ 10.00 ಗಂಟೆಗೆ ಇವರ ಅಂಗಡಿಯ ಬಳಿ POP ಅಂಗಡಿ ಮಾಡಿಕೊಂಡಿದ್ದ ಪ್ರವೀಣ್ ಎಂಬಾತನು ಮೆಡಿಕಲ್ ಶಾಪ್ ಬಳಿ ಬಂದು ಪುಷ್ಪರಾಜ್ ಶೆಟ್ಟಿ ರವರು ವಾಹನದಲ್ಲಿ ಹೊರಟಿರುವಾಗ ಏಕಾಎಕಿ ತಡೆದು ನಿಲ್ಲಿಸಿ ಮುಖಕ್ಕೆ  ಕಣ್ಣಿಗೆ  ಪಂಚ್  ಮಾಡಿ, ಹಲ್ಲೆ ನಡೆಸಿ ನಂತರ ಶಾಪ್‌ನ ಎದುರು ಬೀಳಿಸಿ ಹಲ್ಲೆ ನಡೆಸಿರುತ್ತಾನೆ. ಇದರಿಂದ ಪುಷ್ಪರಾಜ್ ಶೆಟ್ಟಿ ರವರ ಎಡಗಣ್ಣಿಗೆ, ತುಟಿ , ಬಾಯಿ, ಹಣೆಗೆ ಗುದ್ದಿದ ಗಾಯವಾಗಿರುತ್ತದೆ. ಅ ಸಮಯ ಪುಷ್ಪರಾಜ್ ಶೆಟ್ಟಿ ರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ತುಂಡಾಗಿ ಬಿದ್ದು ಹೋಗಿರುತ್ತದೆ. ಪ್ರವೀಣಾನು ಅತನ ಅಂಗಡಿಗೆ ಬಂದ ಗಿರಾಕಿಯನ್ನು ಬೇರೆ ಕಡೆ ಕಳುಹಿಸಿರುತ್ತಾರೆ. ಎಂದು ತಪ್ಪು ತಿಳಿದು ಪ್ರವೀಣನು ಹಲ್ಲೆಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 54/2018 ಕಲಂ:341,323,427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No Comments

Leave A Comment