Log In
BREAKING NEWS >
ಶಿರೂರು ಶ್ರೀ ಅಸಹಜ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್; ಓರ್ವ ಮಹಿಳೆ ಪೊಲೀಸ್ ವಶಕ್ಕೆ... ನಿತ್ಯ ಆಶ್ರಮಕ್ಕೆ ಆಗಮಿಸಿ ಲಕ್ಷ್ಮೀವರ ತೀರ್ಥ ಸ್ವಾಮೀಜಿಗೆ ಫಲಾಹಾರ ನೀಡುತ್ತಿದ್ದ ಮಹಿಳೆ...ಅಷ್ಟ ಮಠಗಳಲ್ಲಿ ಸೆಕ್ಸ್ ಹಿಂದೆಯೂ ಇತ್ತು, ಮುಂದೆ ಕೂಡ ಇರುತ್ತದೆ: ಶಿರೂರು ಶ್ರೀ ಆಡಿಯೋ ವೈರಲ್

ಉಡುಪಿ ನಗರಸಭೆಯ ಪೌರಯುಕ್ತರಿಗೆ ದಿಢೀರ್ ವರ್ಗಾವಣೆ-ನಗರ ಸಭೆಯ ಸದಸ್ಯನಿ೦ದ ಪ೦ಚ್-ಮ೦ಗಳಮುಖಿಯರಿ೦ದ ಲ೦ಚ ಸ್ವೀಕರಿಸಿದ ಆರೋಪ

ಉಡುಪಿ ನಗರಸಭೆಯ ಪೌರಯುಕ್ತರಾದ ಮ೦ಜುನಾಥಯ್ಯರವರನ್ನು ನಿನ್ನೆ ದಿಢೀರ್ ವರ್ಗಾವಣೆ ಮಾಡಲಾಗಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ಸ್ವಲ್ಪ ದಿನಗಳ ಹಿ೦ದೆ ಪೌರಾಯುಕ್ತರು ಉಡುಪಿ ನಗರ ಸಭೆಯ ಗೋಪಾಲಪುರದ ವಾರ್ಡಿನಲ್ಲಿ ಆಟದ ಮೈದಾನವನ್ನು ತೆರವು ಗೊಳಿಸಿ ಅದನ್ನು ಇಬ್ಬರು ಮ೦ಗಳಮುಖಿಯರಿಗೆ ಸೇರಿದ೦ತೆ ಇತರ ನಾಲ್ಕುಮ೦ದಿ ನಿವೇಶನವನ್ನು ಒದಗಿಸಲು ಮು೦ದಾದಾಗ ನಗರಸಭೆಯ ಮಹಿಳಾ ಸದಸ್ಯೆಯೊಬ್ಬರು ಸೇರಿದ೦ತೆ ಇತರ ನಾಲ್ಕು ಮ೦ದಿ ನಗಗರಸಭಾ ಸದಸ್ಯರು ಅಲ್ಲಿಗೆ ಭೇಟಿ ನೀಡಿದರು. ಈ ಸ೦ದರ್ಭದಲ್ಲಿ ಆಟದ ಮೈದಾನವನ್ನು ಸ೦ಪೂರ್ಣವಾಗಿ ಕೆಡವಿ ಹಾಕಲಾಗಿತ್ತು. ಇದನ್ನು ಪ್ರಶ್ನಿಸಿದಾಗ ಪೌರಯುಕ್ತರ ಹಾಗೂ ಸದಸ್ಯರನಡುವೆ ಮಾತಿನ ಚಕಮಕಿ ನಡೆದೇ ಹೋಯಿತು.

ತದನ೦ತರ ಪೌರಯುಕ್ತರು ಈ ಸ್ಥಳವನ್ನು ಮ೦ಗಳ ಮುಖಿಯರಿಗೆ ಹಾಗೂ ಇತರ ನಾಲ್ಕುಮ೦ದಿ ನಿವೇಷವನ್ನು ನೀಡುವ೦ತೆ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ೦ದು ಹೇಳಿದರು. ಆತಕ್ಷಣವೇ ನಗರಸಭಾ ಸದಸ್ಯರೊಬ್ಬರು ಪೌರಯುಕ್ತರಿಗೆ ಎದೆಗೆ ಪ೦ಚ್ ನೀಡಿ ಬೆದರಿಸಿದರು. ಸ್ಥಳಕ್ಕೆ ಪೂಲಿಸರು ಬ೦ದಿದ್ದರೆ೦ದು ಹೇಳಲಾಗುತ್ತಿದೆ ಆದರೂ ಯಾವುದೇ ಪ್ರಕರಣವು ದಾಖಲಾಗಲಿಲ್ಲ.

ಬ೦ದ ನಗರ ಸಭಾ ಸದಸ್ಯರ ತ೦ಡದಲ್ಲಿ ಮಾಜಿ ನಗರ ಸಭಾ ಅಧ್ಯಕ್ಷರೂ ಸಹ ಉಪಸ್ಥಿತರಿದ್ದರೆ೦ದು ಮೂಲವೊ೦ದರಿ೦ದ ತಿಳಿದು ಬ೦ದಿದೆ.

ನ೦ತರ ಈ ಬಗ್ಗೆ ನಗರಸಭೆಯ ಸದಸ್ಯರನ್ನು ಪ್ರಶ್ನಿಸಿದಾಗ ಪೌರಯುಕ್ತರು ಮ೦ಗಳ ಮುಖಿಯರಿ೦ದ ಹಣಪಡೆದುಕೊ೦ಡ ಆ ಸ್ಥಳವನ್ನು ಅವರಿಗೆ ನೀಡಲು ಮು೦ದಾಗಿದ್ದರು. ಇದನ್ನು ನಾವು ಅವರಲ್ಲಿ ಕೇಳಿದಾಗ ಅವರು ಸರಿಯಾದ ಉತ್ತರವನ್ನು ನೀಡದೇ ಜಿಲ್ಲಾಧಿಕಾರಿಯವರ ಹೆಸರನ್ನು ಹೇಳಿ ತಪ್ಪು ಮಾಹಿತಿಯನ್ನು ನೀಡಿ ನಮ್ಮನ್ನು ದಾರಿ ತಪ್ಪಿಸಿದರ ಪರಿಣಾಮವಾಗಿ ಈ ಘಟನೆ ನಡೆದಿದೆ ಎ೦ದರು. ಒಟ್ಟಾರೆ ಪೌರಯುಕ್ತರು ಇದೀಗ ವರ್ಗಾವಣೆ ಗೊ೦ಡಿದ್ದಾರೆ.

ಇದುವರೆಗೆ ಇವರು ಸಚಿವರಿ೦ದಾಗಿ ಉಡುಪಿಯಲ್ಲಿ ಉಳಿಯಲು ಕಾರಣವಾಗಿತ್ತು ಇದೀಗ ದಿಢೀರ್ ವರ್ಗಾವಣೆ ಪೌರಯುಕ್ತರಿಗೆ ತಲೆತಗ್ಗಿಸುವ೦ತೆ ಮಾಡಿದೆ.

 

No Comments

Leave A Comment