Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಪಿಒಕೆಯನ್ನು ಭಾರತ ಆಕ್ರಮಿತ ಕಾಶ್ಮೀರ ಎಂದಿದ್ದ ಅಫ್ರಿದಿಗೆ ಭಾರತ ಕ್ರಿಕೆಟ್ ದಿಗ್ಗಜರಿಂದ ಖಡಕ್ ಉತ್ತರ

ನವದೆಹಲಿ: ಜಮ್ಮು ಕಾಶ್ಮೀರ ವಿಚಾರದಲ್ಲಿ ಶಾಹೀದ್ ಅಫ್ರಿದಿ ಮಾಡಿದ್ದ ವಿವಾದಾತ್ಮಕ ಟ್ವೀಟ್ ಸಂಬಂಧ ಭಾರತೀಯ ಕ್ರಿಕೆಟಿಗರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
“ಭಾರತ ಆಕ್ರಮಿತ ಕಾಶ್ಮೀರದಲ್ಲಿ ಅಮಾಯಕರ ಹತ್ಯೆ ನಡೆಯುತ್ತಿದೆ” ಎಂದು ಟ್ವೀಟ್ ಮಾಡಿದ್ದ ಅಫ್ರಿದಿ ಹೇಳಿಕೆಗೆ ಭಾರತದ ಗೌತಮ್ ಗಂಭೀರ್ ತಿರುಗೇಟು ನೀಡಿದ್ದರು.

ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ,  ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್, ಸುರೇಶ್ ರೈನಾ  ಸಹ ಖಾರವಾಗಿ ಪ್ರತಿಕ್ರಯಿಸಿದ್ದಾರೆ.
“ಅಫ್ರಿದಿ ಜತೆ ನನಗೆ ಉತ್ತಮ ಸ್ನೇಹವಿದೆ, ಆದರೆ ಭಾರತಕ್ಕೆ ಅವಹೇಳನ ಮಾಡುವ ಯಾವ ಹೇಳಿಕೆಯನ್ನೂ ನಾನು ಬೆಂಬಲಿಸುವುದಿಲ್ಲ” ಎಂದು ಕೊಹ್ಲಿ ಹೇಳಿದ್ದಾರೆ.
ಬಾರತೀಯನಾಗಿ ದೇಶಕ್ಕೆ ಉತ್ತಮ ಸೇವೆ  ಸಲ್ಲಿಸಲು ಬಯಸುವೆ. ರಾಷ್ಟ್ರದ ಪರವಾಗಿಯೇ ನನ್ನ ವಿಚಾರಗಳು ಎಂದಿಗೂ ಇರಲಿದೆ. ಇದರ ವಿರುದ್ಧ ನಡೆಯುವವರಿಗೆ ಎಂದಿಗೂ ನನ್ನ ಬೆಂಬಲವಿಲ್ಲ “ಎಂದು ಅವರು ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ “ಅಫ್ರಿದಿ ಯಾರು? ಅಂತಹಾ ವ್ಯಕ್ತಿಗಳಿಗೇಕೆ ಮಹತ್ವ ನೀಡುತ್ತೀರಿ? ಇವರಿಗೆಲ್ಲಾ ಪ್ರಾಮುಖ್ಯತೆ ನೀಡಬಾರದು” ಎಂದಿದ್ದಾರೆ.
No Comments

Leave A Comment