Log In
BREAKING NEWS >
ಜಮ್ಮು: ವೇಗವಾಗಿ ಸಾಗುತ್ತಿದ್ದ ಎಸ್‌ಯುವಿ ವಾಹನವೊಂದು ಆಯ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ನಾಲ್ವರು ಮಹಿಳೆಯರು, ಐವರು ಮಕ್ಕಳು ಸೇರಿ 11 ಮಂದಿ ಸಾವಿಗೀಡಾಗಿದ್ದಾರೆ.... 48 ಗಂಟೆಗೆ ಮುನ್ನ ಪ್ರಣಾಳಿಕೆ ಬೇಡ: ಆಯೋಗ...

ವಿಶ್ವಸಂಸ್ಥೆ ಉಗ್ರರ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಸೇರಿ 139 ಪಾಕಿಸ್ತಾನಿ ವ್ಯಕ್ತಿಗಳ ಹೆಸರು

ನ್ಯೂಯಾರ್ಕ್: ವಿಶ್ವಸಂಸ್ಥೆ ಭದ್ರತಾ ಮಂಡಳಿಯು ‘ಘೋಷಿತ ಭಯೋತ್ಪಾದಕರ ಪಟ್ಟಿ’ಯನ್ನು ಪರಿಷ್ಕರಣೆ ಮಾಡಿದೆ. ಪಟ್ಟಿಯಲ್ಲಿ ಪಾಕಿಸ್ತಾನದ 139 ಉಗ್ರರ ಹೆಸರುಗಳಿದೆ.
ಇಷ್ಟೇ ಅಲ್ಲದೆ ಭಾರತೀಯ ಮೂಲದ ಪಾತಕಿ ದಾವೂದ್ ಇಬ್ರಾಹಿಂ ಹೆಸರನ್ನು ಸಹ ಪಟ್ಟಿಯಲ್ಲಿ ಸೇರಿಸಿರುವ ವಿಶ್ವಸಂಥೆ ಆತನು ತನ್ನ ಹೆಸರಿನಲ್ಲಿ ರಾವಲ್ಪಿಂಡಿ ಹಾಗೂ ಕರಾಚಿಯಿಂದ ಹಲವು ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡಿದ್ದಾನೆ ಎಂದಿದೆ.
ದಾವೂದ್ ಕರಾಚಿಯ ನೂರಾಬಾದ್‌ ಗುಡ್ಡಗಾಡು ಪ್ರದೇಶದಲ್ಲಿ ಭವ್ಯ ಬಂಗಲೆಯನ್ನು ಹೊಂದಿದ್ದಾನೆ.ಎಂದು ವಿಶ್ವಸಂಥೆ ಹೇಳಿದೆ.
ಎಲ್‌ಇಟಿ ಸ್ಥಾಪಕ ಸಯೀದ್‌, ಎಲ್‌ಇಟಿಯ ‘ಮಾಧ್ಯಮ ಸಂಪರ್ಕ’ ಹಾಜಿ ಮೊಹಮ್ಮದ್‌ ಯಾಹ್ಯಾ ಮುಜಾಹಿದ್‌ ಮತ್ತು ಈತನ ಸಹಾಯಕರಾದ ಅಬ್ದುಲ್‌ ಸಲಾಮ್‌ ಹಾಗೂ ಝಫರ್‌ ಇಕ್ಬಾಲ್‌ ಮತ್ತು ಜಮಾತ್-ಉದ್-ದವಾವಾದ ಹಫಿಜ್ ಮೊಹಮ್ಮದ್ ಸಯೀದ್  ಅವರುಗಳ ಹೆಸರನ್ನು ಪಟ್ಟಿಯಲ್ಲಿ ಸೇರ್ಪಡಿಸಲಾಗಿದೆ. ಇವರೆಲ್ಲರೂ ಇಂಟರ್‌ಪೋಲ್‌ಗೆ ಬೇಕಾದ ಅಪರಾಧಿಗಳಾಗಿದ್ದಾರೆ.
ಅಲ್‌- ಮನ್ಸೂರಿಯನ್‌, ಪಾಸ್ಬಾನ್‌-ಇ-ಕಾಶ್ಮೀರ್, ಪಾಸ್ಬಾನ್‌-ಇ-ಅಹ್ಲೆ ಹಾದಿತ್‌, ಜಮಾತ್‌ ಉದ್‌ದಾವ, ಫಲಾಹ್‌-ಇ-ಇನ್ಸಾನಿಯತ್‌ ಫೌಂಡೇಶನ್‌ ಗಳೊಡನೆ ಎಲ್‌ಇಟಿಯನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರ್ಪಡಿಸಲಾಗಿದೆ.
ಇಲ್ಲಿ ಪಟ್ಟಿಮಾಡಲಾದ ಕೆಲವು ಪಾಕಿಸ್ತಾನಿ ಭಯೋತ್ಪಾದಕ ಘಟಕಗಳು ಪಾಕಿಸ್ತಾನದಲ್ಲಿ ನೆಲೆಯಾಗಿ ಭಯೋತ್ಪಾದನಾ ಕಾರ್ಯದಲ್ಲಿ ತೊಡಗಿದ್ದರೆ ಇನ್ನೂ ಕೆಲವು ಸಂಗಟನೆಗಳು ಪಾಕಿಸ್ತಾನಿ ವ್ಯಕ್ತಿಗಳೊಡನೆ ಸಂಪರ್ಕ ಹೊಂದಿವೆ. ಅಲ್ ರಶೀದ್ ಟ್ರಸ್ಟ್, ಹರ್ಕತುಲ್ ಮುಜಾಹಿದೀನ್, ಇಸ್ಲಾಮಿಕ್ ಮೂವ್ಮೆಂಟ್ ಆಫ್ ಉಜ್ಬೇಕಿಸ್ತಾನ್, ವಫಾ ಹ್ಯುಮಾನಿಟೇರಿಯನ್ ಆರ್ಗನೈಸೇಶನ್, ಜೈಶ್-ಎ-ಮೊಹಮ್ಮದ್, ರಬಿತಾ ಟ್ರಸ್ಟ್, ಉಮ್ಮಾ ತಮೀರ್-ಐ-ನೌ, ಅಫಘಾನ್ ಸಪೋರ್ಟ್ ಕಮಿಟಿ, ಇಸ್ಲಾಮಿಕ್ ಹೆರಿಟೇಜ್ ಸೊಸೈಟಿಯ ಪುನರುಜ್ಜೀವನ, ಲಷ್ಕರ್-ಇ-ಝಾಂಗ್ವಿ, ಅಲ್- ಹರ್ಮೈನ್ ಫೌಂಡೇಶನ್, ಇಸ್ಲಾಮಿಕ್ ಜಿಹಾದ್ ಗ್ರೂಪ್, ಅಲ್ ಅಖ್ತರ್ ಟ್ರಸ್ಟ್ ಇಂಟರ್ನ್ಯಾಷನಲ್, ಹರ್ಕಾತುಲ್ ಜಿಹಾದ್ ಇಸ್ಲಾಮಿ, ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್, ಜಮಾತುಲ್ ಅಹ್ರಾರ್ ಮತ್ತು ಖಾಟಿಬಾ ಇಮಾಮ್ ಅಲ್ ಬುಖಾರಿ.- ಇವು ಪಟ್ಟಿಯಲ್ಲಿರುವ ಕೆಲ ಸಂಘಟನೆ, ವ್ಯ್ಕತಿಗಳ ಹೆಸರಾಗಿದೆ.
ಅವುಗಳಲ್ಲಿ ಕೆಲವು ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ತಮ್ಮ ಶಿಬಿರಗಳನ್ನು ಹೊಂದಿದೆ.
No Comments

Leave A Comment