Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಯೂ ಟ್ಯೂಬ್‌ ಕಚೇರಿಯಲ್ಲಿ ಗುಂಡಿನ ದಾಳಿ ನಡೆಸಿದ ಮಹಿಳೆ ಆತ್ಮಹತ್ಯೆ

ವಾಷಿಂಗ್ಟನ್‌ : ವಿಶ್ವದ ಅತೀ ದೊಡ್ಡ ಆನ್‌ಲೈನ್‌ ವಿಡಿಯೋ ಜಾಲತಾಣವಾಗಿರುವ ಯೂ ಟ್ಯೂಬ್‌ನ ಕೇಂದ್ರ ಕಚೇರಿಯಲ್ಲಿ ಮಹಿಳೆಯೊಬ್ಬಳು ನಡೆಸಿದ ಗುಂಡಿನ ಹಾರಾಟದಲ್ಲಿ ಹಲವರು ಗಾಯಗೊಂಡರು. ಬಳಿಕ ಮಹಿಳೆಯು ತನಗೇ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡಳೆಂದು ವರದಿಯಾಗಿದೆ.

ಅಮೆರಿಕದ ಸಿಲಿಕಾನ್‌ ವ್ಯಾಲಿ ಬಳಿಯ ಸ್ಯಾನ್‌ ಬ್ರೂನೋದಲ್ಲಿನ ಯೂ ಟ್ಯೂಬ್‌ ಕೇಂದ್ರ ಕಾರ್ಯಾಲಯದಲ್ಲಿ ನಡೆದ ಈ ಗುಂಡೆಸೆತದಲ್ಲಿ ಗಾಯಗೊಂಡವರ  ಐವರ ಪೈಕಿ ಓರ್ವನ ಸ್ಥಿತಿ ಗಂಭೀರವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯು ನಿನ್ನೆ ರಾತ್ರಿ 12.46ರ ಹೊತ್ತಿಗೆ ನಡೆದಾಗ ತುರ್ತು ಕರೆಗಳು ಬಂದುದನ್ನು ಅನುಸರಿಸಿ ಪೊಲೀಸರು ಸ್ಥಳಕ್ಕೆ ಧಾವಿಸಿದರು.

ಮಹಿಳೆಯಿಂದ ಗುಂಡಿನ ದಾಳಿ ನಡೆಯುತ್ತಿದ್ದಂತೆಯೇ ಕಾರ್ಯಾಲಯದಲ್ಲಿನ ಹಲವರು ಭಯಭೀತರಾಗಿ ಹೊರಗೋಡಿದರು. ಹಾಗಾಗಿ ಅನೇಕರ ಜೀವ ಉಳಿಯಿತು ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಘಟನೆ ಬಗ್ಗೆ ಆತಂಕ, ಆಘಾತ ವ್ಯಕ್ತಪಡಿಸಿದ್ದಾರೆ.

No Comments

Leave A Comment