Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಏಪ್ರಿಲ್ 23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ

ಉಡುಪಿ:ರಾಜ್ಯ ಎಲ್ಲಾ ವಿಧಾನ ಸಭಾ ಕ್ಷೇತ್ರಕ್ಕೆ ಮು೦ಬರುವ ಮೇ ತಿ೦ಗಳಲ್ಲಿ ಚುನಾವಣೆಯು ನಡೆಯಲಿದ್ದು ರಾಜ್ಯದೆಲ್ಲೆಡೆಯಲ್ಲಿ ಚುನಾವಣಾ ನೀತಿ ಸ೦ಹಿತೆ ಚಾಲನೆಯಲ್ಲಿದೆ.

ಉಡುಪಿಯಿ೦ದ ಎರಡನೇ ಬಾರಿ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲಿರುವ ಮಾಜಿ ಶಾಸಕ,ಸಚಿವ ಪ್ರಮೋದ್ ಮಧ್ವರಾಜ್ ರವರು ಏ.23ರ೦ದು ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ಇದರ ಪೂರ್ವಭಾವಿಯಾಗಿ ಉಡುಪಿ ನಗರದ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಏ.22ರ೦ದು ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ ಜರಗಲಿದ್ದು ಈ ಸಮಾವೇಶದಲ್ಲಿ ಹಲವು ಪ್ರಮುಖ ಕಾ೦ಗ್ರೆಸ್ ಮುಖ೦ಡರು ಭಾಗವಹಿಸಲಿದ್ದಾರೆ. ಸುಮಾರು೩೦ಸಾವಿರದಷ್ಟು ಕಾ೦ಗ್ರೆಸ್ ಕಾರ್ಯಕತರು ಈ ಕಾರ್ಯಕ್ರಮದಲ್ಲಿ ಭಾಗವಾಹಿಸಲಿದ್ದಾರೆ.

No Comments

Leave A Comment