Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಅಫ್ಘಾನಿಸ್ತಾನದಲ್ಲಿ ಅಮೆರಿಕಾ ಬಾಂಬ್ ದಾಳಿಗೆ ಒಂದು ಮಗು, ನಾಲ್ವರು ಮಲಯಾಳಿ ಇಸಿಸ್ ಉಗ್ರರ ಸಾವು

ಕೋಝಿಕೋಡು : ಅಫ್ಘಾನಿಸ್ತಾನದಲ್ಲಿ  ಇಸಿಸ್ ಉಗ್ರರು ಪ್ರಾಬಲ್ಯ ಹೊಂದಿರುವ  ಪ್ರದೇಶದಲ್ಲಿ ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಒಬ್ಬ ಬಾಲಕ ಸೇರಿದಂತೆ ಕೇರಳದ ನಾಲ್ವರು ಐಸಿಸ್ ಉಗ್ರರು ಸಾವನ್ನಪ್ಪಿದ್ದಾರೆ.

ನಾಲ್ವರು ಮಲಯಾಳಿಗಳ ಸಾವಿನ ಬಗ್ಗೆ ಅನಧಿಕೃತ ಮೂಲಗಳಿಂದ ಮಾಹಿತಿ ಪಡೆಯಲಾಗಿದೆ. ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇರಳ ಪೊಲೀಸ್ ವರಿಷ್ಠಾಧಿಕಾರಿ ಲೋಕನಾಥ್ ಬೆಹೆರಾ ತಿಳಿಸಿದ್ದಾರೆ. 

ವರದಿ ಪ್ರಕಾರ  ಪದ್ನಾ ನಿವಾಸಿಗಳಾದ ಶಿಹಾಸ್, ಆತನ ಪತ್ನಿ ಅಜ್ಮಲಾ,  ಅವರ ಮಗು ಮತ್ತು ತ್ರಿಕಾರಿಪುರ್ ನಿವಾಸಿ ಮೊಹಮ್ಮದ್ ಮಾಂಸದ್  ಮೃತಪಟ್ಟಿದ್ದಾರೆ. ಅಜ್ಮಲ್ ಗರ್ಭಿಣಿಯಾಗಿದ್ದು, ಕೇರಳದಿಂದ ಇವರೆಲ್ಲಾ ನಾಪತ್ತೆಯಾಗಿದ್ದರು ಎಂಬುದು ತಿಳಿದುಬಂದಿದೆ. 

ಅಬ್ದುಲ್ಲಾ ರಶೀದ್ ನೇತೃತ್ವದಲ್ಲಿನ ಮಲಯಾಳಿ ಗುಂಪು 2016ರಲ್ಲಿ ಐಸಿಸ್ ಸೇರಲು ಕಾಸರಗೋಡುವಿನಿಂದ ಸಿರಿಯಾಕ್ಕೆ ತೆರಳಿತ್ತು. ಈ ಗುಂಪಿನಲ್ಲಿ ಮೃತರು ಸೇರಿದ್ದರು ಎನ್ನಲಾಗಿದೆ.

No Comments

Leave A Comment