Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಕರ್ನಾಟಕ ಕದನ : ಮೇ 12 ಚುನಾವಣೆ, 15ಕ್ಕೆ ಫ‌ಲಿತಾಂಶ

ಹೊಸದಿಲ್ಲಿ: ಅಂತೂ ಇಂತೂ ಓಟಿನ ಬೇಟೆಗೆ ದಿನ ನಿಗದಿಯಾಗಿದೆ. ಮೇ 12ಕ್ಕೆ ಮತದಾನ ನಡೆದರೆ, ಮೇ 15ಕ್ಕೆ ಫ‌ಲಿತಾಂಶ ಹೊರಬೀಳಲಿದೆ. ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಒ.ಪಿ. ರಾವತ್‌ ಅವರು ದಿನಾಂಕ ಪ್ರಕಟಿಸಿದ್ದಾರೆ. ಮಂಗಳವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಸರಕಾರಿ ಕಾರ್ಯಕ್ರಮಗಳಿಗೆ, ಭರ್ಜರಿ ಘೋಷಣೆಗಳಿಗೆ ಕಡಿವಾಣ ಬಿದ್ದಿದೆ. ಒಂದೇ ಹಂತದಲ್ಲಿ ಎಲ್ಲ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 2019ರ ಲೋಕಸಭೆ ಚುನಾವಣೆ ಫ‌ಲಿತಾಂಶಕ್ಕೆ ನಿರ್ಣಾಯಕ ಎಂದು ಹೇಳಲಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆ, ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಪ್ರಚಾರ ಕಣ ತಾರಕಕ್ಕೇರಿದೆ. ಇನ್ನು ಮೇ 10ರವರೆಗೂ ಚುನಾವಣೆಯ ಬಹಿರಂಗ ಪ್ರಚಾರದ ಕಾವು ದಿನದಿಂದ ದಿನಕ್ಕೆ ಜೋರಾಗಿರಲಿದೆ.

ಬಿಜೆಪಿ, ಕಾಂಗ್ರೆಸ್‌ ಎಡವಟ್ಟು
ಈ ಮಧ್ಯೆ ಬಿಜೆಪಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್‌ ಮಾಳವೀಯ ಹಾಗೂ  ಕರ್ನಾಟಕದ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ. ಶ್ರೀವತ್ಸ ಚುನಾವಣೆ ವಿವರಗಳನ್ನು ಬಹಿರಂಗಗೊಳಿಸಿದ್ದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಟ್ವೀಟ್‌ನಲ್ಲಿ ಮತದಾನ ಮೇ 12ರಂದು ಹಾಗೂ ಮತ ಎಣಿಕೆ ಮೇ 18ರಂದು ನಡೆಯಲಿದೆ ಎಂದು ಘೋಷಿಸಿದ್ದರು. ಆದರೆ ಇದು ಭಾಗಶಃ ಸತ್ಯವಾಗಿತ್ತು. ಈ ಮಧ್ಯೆ ವಿವಾದವಾಗುತ್ತಿದ್ದಂತೆಯೇ ಇಬ್ಬರೂ ಟ್ವೀಟ್‌ ಅಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾವತ್‌, ತನಿಖೆಗಾಗಿ ಸಮಿತಿಯೊಂದನ್ನು ನೇಮಕ ಮಾಡಿದ್ದು 7 ದಿನಗಳಲ್ಲಿ ವರದಿ ನೀಡಲಿದೆ ಎಂದಿದ್ದಾರೆ. ಈ ಮಧ್ಯೆ ಟೀವಿ ಚಾನೆಲ್‌ ನೋಡಿ ಟ್ವೀಟ್‌ ಮಾಡಿದೆ ಎಂದು ಮಾಳವೀಯ ಸ್ಪಷ್ಟಪಡಿಸಿದ್ದಾರೆ. ಇದೇ ಸುದ್ದಿಯನ್ನು ಕರ್ನಾಟಕ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ. ಶ್ರೀ ವತ್ಸ ಕೂಡ ಟ್ವೀಟ್‌ ಮಾಡಿದ್ದರು ಎಂದು ಸಾಮಾಜಿಕ ಜಾಲತಾಣಗಳು ಬಹಿರಂಗ ಮಾಡಿವೆ.

No Comments

Leave A Comment