Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಉಪ ಮೇಯರ್ ಜಯಲಕ್ಷ್ಮಿ ವೆಂಕಟೇಶಗೌಡ ತುಮಕೂರು ಮಹಾನಗರ ಪಾಲಿಕೆ: ನೂತನ ಮೇಯರ್ ಆಗಿ ಸುಧೀಶ್ವರ್ ಆಯ್ಕೆ

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಸುಧೀಶ್ವರ್, ಉಪಮೇಯರ್ ಆಗಿ ಜೆಡಿಎಸ್‌ನ ಜಯಲಕ್ಷ್ಮಿ ವೆಂಕಟೇಶ್ ಗೌಡ ಆಯ್ಕೆಯಾದರು.

ಮೇಯರ್, ಉಪಮೇಯರ್ ಹುದ್ದೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಈ ಬಾರಿ ಮೇಯರ್ ಸ್ಥಾನ ಕಾಂಗ್ರೆಸ್ ಮತ್ತು ಉಪಮೇಯರ್ ಸ್ಥಾನ ಜೆಡಿಎಸ್ ಪಡೆಯುವ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಹೊಂದಾಣಿಕೆ ಮುಂದುವರಿಯಿತು.

ಮೇಯರ್ ಸ್ಥಾನ ಪರಿಶಿಷ್ಟ ಜಾತಿ(ಎಸ್ಸಿ), ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಒಟ್ಟು 35 ಸದಸ್ಯ ಬಲದ ಪಾಲಿಕೆಯಲ್ಲಿ ಯಾವು ಪಕ್ಷವೂ ಬಹುಮತ ಹೊಂದಿಲ್ಲ.

ಕಾಂಗ್ರೆಸ್, ಜೆಡಿಎಸ್ ,ಬಿಜೆಪಿ ಮೂರು ಪಕ್ಷಗಳು ಹೊಂದಾಣಿಕೆಯ ಮೇಲೆ ಕಳೆದ ನಾಲ್ಕು ವರ್ಷಗಳಿಂದ ಆಡಳಿತ ನಡೆಸಿಕೊಂಡು ಬಂದಿವೆ.

No Comments

Leave A Comment