Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಸಚಿವ ಪ್ರಮೋದ್‌ ಅವ್ಯವಹಾರದ ದಾಖಲೆ ಇದೆ:ಅಬ್ರಾಹಂ ತಿರುಗೇಟು

ಉಡುಪಿ: ‘ಸಚಿವ ಪ್ರಮೋದ್ ಮಧ್ವರಾಜ್‌ ಕಡಿಮೆ ಮೌಲ್ಯದ ಆಸ್ತಿಗೆ ಹೆಚ್ಚು ಸಾಲ ಪಡೆದಿರುವುದಕ್ಕೆ ನನ್ನ ಬಳಿ ದಾಖಲೆ ಇದೆ.ನಾನು ಕ್ಷಮೆ ಯಾಚಿಸುವುದಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಾಹಂ ‘ ನನ್ನ ಮೇಲೆ ಪ್ರಮೋದ್‌ ಮಾನನಷ್ಟ ಮೊಕದ್ದಮೆ ದಾಖಲಿಸಲಿ.‌ ಇಲ್ಲದಿದ್ದರೆ ನಾನೇ ದಾಖಲಿಸುತ್ತೇನೆ’ ಎಂದರು.

‘ಟಿ.ಜೆ. ಅಬ್ರಹಾಂ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ 10 ಕೋ.ರೂ. ಮಾನನಷ್ಟ ಪ್ರಕರಣ ಹೂಡಲಾಗುವುದು’ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉಡುಪಿಯಲ್ಲಿ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದರು.

ವಕೀಲ ಎಂ. ಶಾಂತಾರಾಮ್‌ ಶೆಟ್ಟಿ ಅವರ ಮೂಲಕ ಮಾ. 21ರಂದು ನೋಟಿಸು ಕಳುಹಿಸಲಾಗಿದ್ದು, 3 ದಿನಗಳ ಒಳಗೆ ಅವರು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದಿದ್ದರು.

No Comments

Leave A Comment