Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಆನಂತ್‌ನಾಗ್‌ ಎನ್‌ಕೌಂಟರ್‌: ಭದ್ರತಾ ಪಡೆಗಳಿಂದ ಇಬ್ಬರು ಉಗ್ರರ ಹತ್ಯೆ

ಶ್ರೀನಗರ : ಜಮ್ಮು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಇಂದು ಶನಿವಾರ ನಡೆಸಿದ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ.

ಅನಂತನಾಗ್‌ ಜಿಲ್ಲೆಯ ಡೂರು ಎಂಬಲ್ಲಿ ನಿನ್ನೆ ಶುಕ್ರವಾರ ಎನ್‌ಕೌಂಟರ್‌ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಕೂಡ ವಶಪಡಿಸಿಕೊಳ್ಳಲಾಯಿತು.

ತಾಜಾ ವರದಿಗಳ ಪ್ರಕಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಈಗಲೂ ಗುಂಡಿನ ಕಾಳಗ ಸಾಗಿದೆ.

ಈ ತಿಂಗಳ ಆದಿಯಲ್ಲಿ ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಡೆದಿದ್ದ 48 ತಾಸುಗಳ ಗುಂಡಿನ ಕಾಳಗದಲ್ಲಿ ಐವರು ಉಗ್ರರು ಮತ್ತು ಐವರು ಭದ್ರತಾ ಸಿಬಂದಿಗಳು ಹತರಾಗಿದ್ದರು.

ಶ್ರೀನಗರದಿಂದ 110 ಕಿ.ಮೀ. ದೂರದ ಕುಪ್ವಾರಾದ ಹಲ್ಮತ್‌ಪೋರಾ ಅರಣ್ಯದಲ್ಲಿ ಮಂಗಳವಾರವೇ ಗುಂಡಿನ ಕಾಳಗ ಆರಂಭವಾಗಿತ್ತು. ಹಲ್ಮತ್‌ಪೋರಾ ಎಲ್‌ಓಸಿಯಿಂದ ಕೇವಲ 8 ಕಿ.ಮೀ. ದೂರದಲ್ಲಿದೆ.

No Comments

Leave A Comment