Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ರಾಜಸ್ಥಾನದ ಪೋಖರಣ್‌ನಲ್ಲಿ ಬ್ರಹ್ಮೋಸ್‌ ಯಶಸ್ವೀ ಪರೀಕ್ಷೆ

ಪೋಖರಣ್‌ : ಭಾರತ ಇಂದು ಗುರುವಾರ ತನ್ನ ಸೂಪರ್‌ ಸಾನಿಕ್‌ ಕ್ರೂಯಿಸ್‌ ಮಿಸೈಲ್‌ ಬ್ರಹ್ಮೋಸ್‌ ನ ಪರೀಕ್ಷೆಯನ್ನು ರಾಜಸ್ಥಾನದ ಪೋಖರಣ್‌ ಪರೀಕ್ಷಾ ವಲಯಲ್ಲಿ ಯಶಸ್ವಿಯಾಗಿ ನಡೆಸಿತು.

ಸೂಪರ್‌ ಸಾನಿಕ್‌ ಕ್ರೂಯಿಸ್‌ ಮಿಸೈಲನ್ನು ಈ ಹಿಂದೆ ಭಾರತ 2017ರಲ್ಲಿ ಭಾರತೀಯ ವಾಯು ಪಡೆಯ ಸುಖೋಯಿ 30ಎಂಕೆಐ ಯುದ್ಧ ವಿಮಾನದ ಮೂಲಕ ಯಶಸ್ವಿಯಾಗಿ ಉಡಾಯಿಸಿತ್ತು.

ಕಳೆದ ವರ್ಷ ದುಬೈ ಏರ್‌ ಶೋನಲ್ಲಿ ಭಾರತ ತನ್ನ ಹೆಮ್ಮೆಯ ಬ್ರಹ್ಮೋಸ್‌ ಪ್ರದರ್ಶನ ನಡೆಸಿತ್ತು. ಇದು ಅನೇಕ ದೇಶಗಳ ಆಸಕ್ತಿಯನ್ನು ಬಹುವಾಗಿ ಕೆರಳಿಸಿತ್ತು.

ಬ್ರಹ್ಮೋಸ್‌ ಒಂದು ಮಧ್ಯಮ ವ್ಯಾಪ್ತಿಯ ರಾಮ್‌ಜೆಟ್‌ ಸೂಪರ್‌ಸಾನಿಕ್‌ ಕ್ರೂಯಿಸ್‌ ಮಿಸೈಲ್‌ ಆಗಿದೆ. ಇದನ್ನು  ನೆಲ, ಆಗಸ ಮತ್ತು ಸಮುದ್ರದಿಂದ ಉಡಾಯಿಸಬಹುದಾಗಿದೆ. ಬ್ರಹ್ಮೋಸ್‌ ಎಂಬ ಪದವನ್ನು ಭಾರತದ ಬ್ರಹ್ಮಪುತ್ರಾ ನದಿ ಮತ್ತು ರಶ್ಯದ ಮೋಸ್‌ಕ್ವಾ ನದಿಯ ಹೆಸರನ್ನು ಜತೆಗೂಡಿಸಿ ರಚಿಸಲಾಗಿದೆ.

No Comments

Leave A Comment