Log In
BREAKING NEWS >
ಶಿರೂರು ಶ್ರೀ ಅಸಹಜ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್; ಓರ್ವ ಮಹಿಳೆ ಪೊಲೀಸ್ ವಶಕ್ಕೆ... ನಿತ್ಯ ಆಶ್ರಮಕ್ಕೆ ಆಗಮಿಸಿ ಲಕ್ಷ್ಮೀವರ ತೀರ್ಥ ಸ್ವಾಮೀಜಿಗೆ ಫಲಾಹಾರ ನೀಡುತ್ತಿದ್ದ ಮಹಿಳೆ...ಅಷ್ಟ ಮಠಗಳಲ್ಲಿ ಸೆಕ್ಸ್ ಹಿಂದೆಯೂ ಇತ್ತು, ಮುಂದೆ ಕೂಡ ಇರುತ್ತದೆ: ಶಿರೂರು ಶ್ರೀ ಆಡಿಯೋ ವೈರಲ್

ನಾಶಿಕ್‌ ಸೇತುವೆಯಡಿ ಅಪಾರ ಪ್ರಮಾಣದ ಮದ್ದುಗುಂಡು ಪತ್ತೆ

ನಾಶಿಕ್‌, ಮಹಾರಾಷ್ಟ್ರ : ಜಿಲ್ಲೆಯಲ್ಲಿನ ಸೇತುವೆಯೊಂದರ ಅಡಿ ಅವಿತಿರಿಸಲಾಗಿದ್ದ 212 ಸಜೀವ ಮದ್ದುಗುಂಡುಗಳು, 56 ಖಾಲಿ ಸುತ್ತಿನ ಮದ್ದುಗುಂಡುಗಳು ಸೇರಿದಂತೆ ಭಾರೀ ಪ್ರಮಾಣದ ಸ್ಫೋಟಕವನ್ನು ನಗರದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಸಾಲಿ ಗ್ರಾಮದ ಸರಪಂಚರು ಬುಧವಾರ ಸಂಜೆ ಸಾತ್‌ಪುರ ಪೊಲೀಸರಿಗೆ ಈ ಬಗ್ಗೆ ಮಾಹಿತಿನೀಡಿದರು. ತ್ರ್ಯಂಬಕೇಶ್ವರ ದೇವಸ್ಥಾನ ಪಟ್ಟಣದ ಸಮೀಪ ಇರುವ ನಸರ್ದಿ ನದಿಯ ಸೇತುವೆಯಡಿ ಈ ಮದ್ದುಗುಂಡುಗಳು ಪತ್ತೆಯಾದವು.

ಬಾಂಬ್‌ ಶೋಧಕ ಮತ್ತು ವಿಲೇವಾರಿ ಪರಿಣತರ ತಂಡವನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಒಂದು ಪ್ಲಾಸ್ಟಿಕ್‌ ಬ್ಯಾಗಿನಲ್ಲಿ ಮದ್ದುಗುಂಡುಗಳನ್ನು ಅವಿತಿರಿಸಲಾಗಿತ್ತು.

ನಾಶಿಕ್‌ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆನಡೆಸುತ್ತಿದ್ದಾರೆ.

No Comments

Leave A Comment