Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಮಣಿಪಾಲ:ಕಟ್ಟಡದಲ್ಲಿ ಅಗ್ನಿ ಅವಘಡ ;ಅಪಾರ ನಷ್ಟ

ಉಡುಪಿ:  ಮಣಿಪಾಲದ ಈಶ್ವರನಗರದಲ್ಲಿರುವ ನಾಲ್ಕು ಮಹಡಿಯ ಕಟ್ಟಡವೊಂದರಲ್ಲಿ ಮಂಗಳವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಅಪಾರ ಹಾನಿ ಸಂಭವಿಸಿದೆ.

ಪೈಂಟ್‌ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧಲ್ಲಿ ಅಗ್ನಿಯ ಜ್ವಾಲೆ ಹರಡಿಕೊಂಡಿದ್ದು ಅಪಾರ ಪ್ರಮಾಣದ ಪೈಂಟ್‌ ಡಬ್ಬಗಳು ಸುಟ್ಟು ಹೋಗಿವೆ. ಇಡೀ ಕಟ್ಟಡದ ತುಂಬ ದಟ್ಟ ಹೊಗೆ ಆವರಿಸಿಕೊಂಡಿದೆ.

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬಂದಿಗಳು ದೌಡಾಯಿಸಿದ್ದು ಬೆಂಕಿಯನ್ನು ತಹಬದಿಗೆ ತರಲು ಹರಸಾಹಸ ಪಡುತ್ತಿದ್ದಾರೆ.

ಯಾರೊಬ್ಬರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ಪೈಂಟ್‌ ಅಂಗಡಿಯಲ್ಲಿ ದೇವರಿಗೆ ಇಟ್ಟ ದೀಪ ಬಿದ್ದು ಬೆಂಕಿ ವ್ಯಾಪಿಸಿದೆ ಎನ್ನಾಲಾಗಿದೆ.

No Comments

Leave A Comment