Log In
BREAKING NEWS >
ಶಿರೂರು ಶ್ರೀ ಅಸಹಜ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್; ಓರ್ವ ಮಹಿಳೆ ಪೊಲೀಸ್ ವಶಕ್ಕೆ... ನಿತ್ಯ ಆಶ್ರಮಕ್ಕೆ ಆಗಮಿಸಿ ಲಕ್ಷ್ಮೀವರ ತೀರ್ಥ ಸ್ವಾಮೀಜಿಗೆ ಫಲಾಹಾರ ನೀಡುತ್ತಿದ್ದ ಮಹಿಳೆ...ಅಷ್ಟ ಮಠಗಳಲ್ಲಿ ಸೆಕ್ಸ್ ಹಿಂದೆಯೂ ಇತ್ತು, ಮುಂದೆ ಕೂಡ ಇರುತ್ತದೆ: ಶಿರೂರು ಶ್ರೀ ಆಡಿಯೋ ವೈರಲ್

ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ ಪೋಲೀಸ್ ದೂರು ನೀಡಿದ ಸ್ಯಾಂಡಲ್ ವುಡ್ ನಟಿ

ಬೆಂಗಳೂರು: ಪತಿಯ ಕಿರುಕುಳಕ್ಕೆ ಬೇಸತ್ತ ಸ್ಯಾಂಡಲ್ ವುಡ್ ನಟಿಯೊಬ್ಬರು ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ಪೋಲೀಸ್ ದೂರು ಸಲ್ಲಿಸಿದ್ದಾರೆ.

ಕನ್ನಡ ಚಿತ್ರ ನಟಿ ಚೈತ್ರಾ ಪೋತ್​ರಾಜ್​ ಬದುಕಲ್ಲಿ ಸಮಸ್ಯೆ ಎದುರಾಗಿದ್ದು ಆಕೆ ತನ್ನ ಪತಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು​ ದಾಖಲು ಮಾಡಿದ್ದಾರೆ.

ಖುಷಿ  ಚಿತ್ರದ ನಾಯಕಿ ಚೈತ್ರಾ, ಪತಿ ಪರಸ್ತ್ರೀಯೊಡನೆ ಅನೈತಿಕ ಸಂಬಂಧ ಹೊಂದಿದ್ದಾರೆ, ಅದನ್ನು ಪ್ರಶ್ನಿಸಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಎಫ್ ಐ ಆರ್ ದಾಖಲು ಮಾಡಿದ್ದಾರೆ.

2006ರಲ್ಲಿ ಚೈತ್ರಾ ಹಾಗೂ ಬಾಲಾಜಿ ಪೋತ್​ರಾಜ್​ ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಇದೀಗ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದ್ದು ನಟಿ ಚೈತ್ರಾ ಮಾರ್ಚ್​ 17 ರಂದು ಪತಿಯ ವಿರುದ್ಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

No Comments

Leave A Comment