Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

5 ಪೈಸೆಗೆ ಲೀಟರ್ ಕುಡಿಯುವ ನೀರು: ನಿತಿನ್ ಗಡ್ಕರಿ

ಭೋಪಾಲ್: ಸಮುದ್ರ ನೀರನ್ನು ಶುದ್ಧೀಕರಿಸಿ 5 ಪೈಸೆಗೆ ಲೀಟರ್ ಕುಡಿಯುವ ನೀರನ್ನು ನೀಡಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ತಮಿಳುನಾಡಿನ ಟುಟುಕಾರ್ ಪ್ರದೇಶದಲ್ಲಿ ಈಗಾಗಲೇ ಸಮುದ್ರ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಬಂದ್ರಾಭನ್ ನಲ್ಲಿ ಎರಡು ದಿನಗಳ ನದಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ನದಿ ನೀರಿಗಾಗಿ ರಾಜ್ಯಗಳು ಕಿತ್ತಾಡುತ್ತಿವೆ. ಆದರೆ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರಿನ ಬಗ್ಗೆ ಮಾತ್ರ ಯಾರಿಗೂ ಕಾಳಜಿ ಇಲ್ಲ. ಆರು ನದಿಗಳನ್ನು ಪಾಕಿಸ್ತಾನದ ಜತೆಗೆ ಭಾರತ ಹಂಚಿಕೊಂಡಿದೆ ಇದನ್ನು ಯಾರು ಪ್ರಶ್ನಿಸುತ್ತಿಲ್ಲ ಎಂದರು.

No Comments

Leave A Comment