Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ರಾಮ ಸೇತು ಒಡೆಯುವುದಿಲ್ಲ ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ

ಹೊಸದಿಲ್ಲಿ: ಸೇತು ಸಮುದ್ರ ಯೋಜನೆಗಾಗಿ ರಾಮ ಸೇತುವನ್ನು ಒಡೆಯುವುದಿಲ್ಲ ಎಂದು ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ಗೆ ಹೇಳಿದೆ. ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರಾಮ ಸೇತುಗೆ ಧಕ್ಕೆ ಉಂಟು ಮಾಡದೇ ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತನ್ನ ಪ್ರತಿಕ್ರಿಯೆಯನ್ನು ನೀಡಿದೆ.

ಈ ಸಂಬಂಧ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತೆರವುಗೊಳಿಸಬಹುದಾಗಿದೆ ಎಂದು ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಪೀಠಕ್ಕೆ ಬಂದರು ಸಚಿವಾಲಯ ಅಫಿಡವಿಟ್‌ ಸಲ್ಲಿಸಿದೆ.

ಇದೇ ವೇಳೆ, ಸೇತುಸಮುದ್ರ ಯೋಜನೆ ಜಾರಿ ಮಾಡುವುದರ ಬಗ್ಗೆ ಸರಕಾರ ಸ್ಪಷ್ಟ ನಿಲುವು ಹೊಂದಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿಂಕಿ ಆನಂದ್‌ ಹೇಳಿದ್ದಾರೆ. ರಾಮ ಸೇತು ಪೌರಾಣಿಕ ಉಲ್ಲೇಖವನ್ನು ಹೊಂದಿದ್ದು, ಇದಕ್ಕೆ ಹಾನಿ ಉಂಟು ಮಾಡಬಾರದು ಎಂದು ಆದೇಶಿಸುವಂತೆ ಕೋರಿ ಸುಬ್ರಮಣಿಯನ್‌ ಸ್ವಾಮಿ ಅರ್ಜಿ ಸಲ್ಲಿಸಿದ್ದರು.

No Comments

Leave A Comment