Log In
BREAKING NEWS >
ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಮಾನವ ಕಳ್ಳಸಾಗಾಣಿಕೆ: ದಲೇರ್ ಮೆಹಂದಿ ದೋಷಿ, 2 ವರ್ಷ ಜೈಲುಶಿಕ್ಷೆ

ಪಟಿಯಾಲಾ: ಮಾನವ ಕಳ್ಳಸಾಗಾಣಿಕೆ ಆರೋಪದಡಿಯಲ್ಲಿ ಪಂಜಾಬಿ ಪಾಪ್ ಸ್ಟಾರ್ ಸಿಂಗರ್ ದಲೇರ್ ಮೆಹಂದಿ ದೋಷಿ ಎಂದು ಪಂಜಾಬ್ ನ ಪಟಿಯಾಲಾ ಕೋರ್ಟ್ ಶುಕ್ರವಾರ ತೀರ್ಪು ನೀಡಿ, ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

ದೋಷಿ ಎಂಬ ತೀರ್ಪು ಹೊರಬೀಳುತ್ತಿದ್ದಂತೆಯೇ ಪಂಜಾಬ್ ಪೊಲೀಸರು ದಲೇರ್ ಮೆಹಂದಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ನ್ಯಾಯಾಲಯದಿಂದ ಜಾಮೀನು ಲಭಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಏನಿದು ಪ್ರಕರಣ:

2003ರಲ್ಲಿ ಪಂಜಾಬ್ ನ ಬಲ್ ಬೆಹ್ರಾ ಗ್ರಾಮದ ಬಕ್ಷೀಷ್ ಸಿಂಗ್ ಎಂಬವರು ದಲೇರ್ ಮೆಹಂದಿ, ಸಹೋದರ ಶಂಶೇರ್ ಹಾಗೂ ತಂಡದ ಕೆಲವು ಸದಸ್ಯರ ವಿರುದ್ಧ ಮಾನವ ಕಳ್ಳಸಾಗಾಣಿಕೆ ಮಾಡಿರುವುದಾಗಿ  ಪಟಿಯಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಆರೋಪಿಯಾಗಿದ್ದ ದಲೇರ್ ಸಹೋದರ ಶಂಶೇರ್ 2017ರಲ್ಲಿ ಜಾಂಡೀಸ್ ಖಾಯಿಲೆಯಿಂದ ಸಾವನ್ನಪ್ಪಿದ್ದ.

No Comments

Leave A Comment