Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಮಂಗಳೂರು ಬಂದರಿನ ಗುಜರಿ ಅಂಗಡಿಯಲ್ಲಿ ಭಾರಿ ಬೆಂಕಿ

ಮಂಗಳೂರು: ಇಲ್ಲಿನ ಬಂದರು ಪ್ರದೇಶದ ಬಿಬಿ ಅಲಾಬಿ ರಸ್ತೆಯಲ್ಲಿ ಗುಜರಿ ಅಂಗಡಿಯೊಂದರಲ್ಲಿ  ಶುಕ್ರವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ತಹಬದಿಗೆ ತರಲು ಹರಸಾಹಸ ಪಟ್ಟರು.

ಅಂಗಡಿಯ ಸುತ್ತಲಿನ ಕಟ್ಟಡದಲ್ಲಿ  ವಸತಿ ಪ್ರದೇಶವಾಗಿದ್ದು ಅಲ್ಲಿನ ನಿವಾಸಿಗಳು ಬೆಂಕಿ ತಗಲುವ ಭೀತಿಯಲ್ಲಿದ್ದರು. ಬೆಂಕಿಯನ್ನು ವ್ಯಾಪಿಸಲು ಅಗ್ನಿಶಾಮಕ ದಳದ ಸಿಬಂದಿಗಳು ಅವಕಾಶ ನೀಡಲಿಲ್ಲ.

ಕೆಲ ವಾಹನಗಳೂ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ. ಬಂದರು ಠಾಣೆ ಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಯಾರಿಗೂ ಗಾಯಗಳಾದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.

No Comments

Leave A Comment