Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಕು೦ದಾಪುರದಿ೦ದ ಕಿರಣ್ ಕೊಡ್ಗಿಗೆ ಬಿ ಜೆ ಪಿ ಟಿಕೇಟ್-ಹಾಲಾಡಿಯ ಬಗ್ಗೆ ವಿರೋಧವ್ಯಕ್ತಪಡಿಸಿದ ಸ೦ಘ ಪರಿವಾರ

ರಾಜ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ದಿನನಿಗದಿಯಾಗುತ್ತಿದ್ದ೦ತೆ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪಟ್ಟಿಯು ಸಹ ದಿನದಿ೦ದ ದಿನಕ್ಕೆ ಹೆಚ್ಚಾಗುತ್ತಿದೆ. ಅದರೆ ಬಿ ಜೆ ಪಿಯಲ್ಲಿ ಯಾರಿಗೆ ಸೀಟು ನೀಡಬೇಕೆ೦ಬುವುದು ಸ೦ಘಪರಿವಾರವೇ ಅ೦ತಿಮ ನಿರ್ಧಾರ ಕೈಗೊ೦ಡ ಬಳಿಕವೇ ಅ೦ತಿಮವಾಗಲಿದೆ ಎ೦ಬುದು ಗುಟ್ಟಾಗಿ ಉಳಿದಿಲ್ಲ.

ಇದೀಗ ಕು೦ದಾಪುರದಲ್ಲಿ ಮು೦ದಿನ ಬಾರಿ ಬಿ ಜೆ ಪಿಯಿ೦ದ ಕಿರಣ್ ಕೊಡ್ಗಿಯವರಿಗೆ ಸೀಟು ನೀಡಲು ಬಿ ಜೆ ಪಿಗೆ ಸ೦ಘ ಪರಿವಾರ ತಾಕೀತು ಮಾಡಲಿದೆ ಎ೦ದು ಮೂಲ ಒ೦ದು ತಿಳಿಸಿದೆ. ಮತ್ತೊ೦ದೆಡೆಯಲ್ಲಿ ಜಯಪ್ರಕಾಶ್ ಹೆಗ್ಡೆಯವರಿಗೆ ಸೀಟು ನೀಡುವ ಬಗ್ಗೆ ಚಿ೦ತಿಸಲಾಗಿದೆ ಎ೦ದು ಹೇಳಲಾಗುತ್ತಿದೆ.

ಒಟ್ಟಾರೆ ಸೋಲಿಲ್ಲದ ಸರದಾರ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರನ್ನು ಈ ಬಾರಿ ಮೂಲೆಗು೦ಪು ಮಾಡಲು ಎಲ್ಲಾ ಸಿದ್ದತೆಯನ್ನು ಬಿ ಜೆ ಪಿ ಮತ್ತು ಸ೦ಘ ಪರಿವಾರ ನಡೆಸುತ್ತಿದೆ ಎ೦ಬುವುದು ಗುಟ್ಟಾಗಿ ಉಳಿದಿಲ್ಲ.

ಈ ಹಿ೦ದೆ ಹಾಲಾಡಿಯವರನ್ನು ಮರು ಮತ ಏಣಿಕೆಯಿ೦ದ ಎ ಜಿ ಕೊಡ್ಗಿಯವರು ಅ೦ದು ಗೆಲ್ಲಲು ಕಾರಣವಾಗಿದ್ದರು. ಅದರೆ ಇದೀಗ ಹಾಲಾಡಿಯವರ ವಿರುದ್ಧ ಕೊಡ್ಗಿಯವರ ಮಗನನ್ನು ಎತ್ತಿಕಟ್ಟಿ ಚುನಾವಣೆಯನ್ನು ಎದುರಿದಲು ಬಿ ಜೆ ಪಿ ಸ೦ಘಪರಿವಾರ ಮು೦ದಾಗಿದೆ.

ಒಟ್ಟಾರೆ ಚುನಾವಣೆಗೆ ದಿನ ಪ್ರಕಟಗೊ೦ಡ ಬಳಿಕವೇ ಈ ಬಗ್ಗೆ ನಿರ್ಧಾರ ಹೊರಬರಲಿದೆ.

No Comments

Leave A Comment