Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಹಸಿನ್ ಜಹಾನ್ ತನ್ನ ಮೊದಲ ಮದುವೆ ವಿಷಯ ನನ್ನಿಂದ ಮುಚ್ಚಿಟ್ಟಿದ್ದಳು: ಮೊಹಮ್ಮದ್ ಶಮಿ

ನವದೆಹಲಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾನ್ ನಡುವಿನ ಜಗಳದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಬೆಳವಣಿಗೆಗಳು ಆಗುತ್ತಿವೆ.
ಇದೀಗ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಹಸಿನ್ ತನ್ನ ಮೊದಲ ಮದುವೆ ವಿಷಯವನ್ನು ನನ್ನಿಂದ ಮುಚ್ಚಿಟ್ಟಿದ್ದಳು ಎಂದು ಹೇಳಿದ್ದಾರೆ.
ನನ್ನ ಜತೆ ಆಕೆಯದ್ದು ಎರಡನೇ ಮದುವೆ ಎನ್ನುವುದು ನನಗೆ ತಿಳಿದಿರಲಿಲ್ಲ. ಮದುವೆಯ ಬಳಿಕ ಆಕೆಗೆ ಇಬ್ಬರು ಹೆಣ್ಣು ಮಕ್ಕಳಿರುವುದು ತಿಳಿಯಿತು. ಈ ಕುರಿತು ಹಸಿನ್ ಜಹಾನ್ ಗೆ ಪ್ರಶ್ನಿಸಿದಾಗ ಆಕೆ ಇದು ನನ್ನ ಮಕ್ಕಳಲ್ಲ. ಸಹೋದರಿಯ ಮಕ್ಕಳು ಎಂದು ಹೇಳಿದ್ದಳು ಎಂದು ಶಮಿ ತಿಳಿಸಿದ್ದಾರೆ.
ಇನ್ನು ಅನಾಮಿಕ ನಂಬರ್ ನಿಂದ ಶಮಿ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹಸಿನ್ ಜಹಾನ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು ಸಂಧಾನಕ್ಕಾಗಿ ನಾನು ಸಾಕಷ್ಟು ಪ್ರಯತ್ನಪಡುತ್ತಿದ್ದೇನೆ. ದೂರವಾಣಿ ಕರೆ ಮಾಡಿ ಎಲ್ಲವನ್ನುೂ ಇಲ್ಲಿಗೆ ಅಂತ್ಯಗೊಳಿಸೊಣ ಎಂದು ಆಕೆಗೆ ಹೇಳುತ್ತಿದ್ದೇನೆ. ಜೀವಬೆದರಿಕೆ ಒಡ್ಡಿಲ್ಲ. ನನಗೆ ಮಗಳ ಭವಿಷ್ಯದ ಕುರಿತಾಗಿ ಚಿಂತೆ ಇದೆ ಎಂದು ಹೇಳಿದ್ದಾರೆ.
No Comments

Leave A Comment