Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಪ್ರೀತಂ ಚೌಗ್ಲೆ ಬೆಳಗಾವಿ ‘ಮಿ| ಕರ್ನಾಟಕ-2018’ ಉಡುಪಿಯಲ್ಲಿ ನಡೆದ ‘ರಾಜ್ಯ ಮಟ್ಟದ ಅಧಿಕೃತ ದೇಹದಾಢ್ರ್ಯ ಸ್ಪರ್ಧೆ’

ಇ-ಫಿಟ್ನೆಸ್ ಕ್ಲಬ್ ಟೀಮ್ ಉಡುಪಿ ಇವರ ಆಶ್ರಯದಲ್ಲಿ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ಉಡುಪಿ ಡಿಸ್ಟ್ರಿಕ್ಟ್(ರಿ.) ಇವರ ಸಹಭಾಗಿತ್ವದಲ್ಲಿ ಕರ್ನಾಟಕ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ಇವರ ನೇತೃತ್ವದಲ್ಲಿ ಇತ್ತೀಚೆಗೆ ಉಡುಪಿಯ ಪುರಭವನದಲ್ಲಿ ನಡೆದ ರಾಜ್ಯ ಮಟ್ಟದ ಅಧಿಕೃತ ದೇಹದಾಢ್ರ್ಯ ಸ್ಪರ್ಧೆಯಲ್ಲಿ ಬೆಳಗಾವಿಯ ಪ್ರೀತಂ ಚೌಗ್ಲೆ “ಮಿ| ಕರ್ನಾಟಕ-2018” ಪ್ರಶಸ್ತಿಯನ್ನು ಜಯಿಸಿದರು. ರಕ್ಷಿತ್ ಕೋಟ್ಯಾನ್ ಉಡುಪಿ ಪ್ರಥಮ ರನ್ನರ್ ಅಪ್, ಸಿದ್ದು ದೇಶ್ನೂರ್ ಬೆಳಗಾವಿ ದ್ವಿತೀಯ ರನ್ನರ್ ಅಪ್, ರಾಜ್‍ಕುಮಾರ್ ದುರ್ಗುಡೆ ಬೆಳಗಾವಿ ಬೆಸ್ಟ್ ಪೆÇೀಸರ್ ಪ್ರಶಸ್ತಿಯನ್ನು ಪಡೆದರು.

ರಾಜ್ಯದಲ್ಲೇ ಪ್ರಥಮ ಬಾರಿಗೆ ನಡೆದ ಮಹಿಳಾ ಬೆಸ್ಟ್ ಫಿಜಿಕ್ ಸ್ಪರ್ಧೆಯಲ್ಲಿ ಅಂಕಿತಾ ಸಿಂಗ್ ಬೆಂಗಳೂರು (ಪ್ರಥಮ), ಹಶಿ ರಾಯ್ ಬೆಂಗಳೂರು (ದ್ವಿತೀಯ), ಶ್ರದ್ದಾ ನಾೈಕ್ ಮಂಗಳೂರು (ತೃತೀಯ) ಬಹುಮಾನ ಪಡೆದರು. ಪುರುಷರ ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ರಾಹುಲ್ ಕೋಟ್ಯಾನ್ ಮಂಗಳೂರು (ಪ್ರಥಮ), ಶೋನ್ ಲೋಬೋ ಮಂಗಳೂರು (ದ್ವಿತೀಯ), ಕಿರಣ್ ಕುಮಾರ್ ಬೆಂಗಳೂರು (ತೃತೀಯ), ಸತೀಶ್ ಕೆ.ಎಸ್. ಬೆಂಗಳೂರು (ಚತುರ್ಥ), ಧೀರಜ್ ದೆಲ್ಲಿಯಪ್ಪ ಬೆಂಗಳೂರು (ಪಂಚಮ) ಬಹುಮಾನವನ್ನು ಪಡೆದರು. ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ವಿಭಾಗದಲ್ಲಿ ಜಗದೀಶ್ ಪೂಜಾರಿ ದ.ಕ. (ಪ್ರಥಮ), ದಿವಾಕರ್ ಬೆಂಗಳೂರು (ದ್ವಿತೀಯ), ಶಿವಾನಂದ ಗೌಡ ಉ.ಕ. (ತೃತೀಯ), ಸತೀಶ್ ಕುಲಾಲ್ ದ.ಕ. (ಚತುರ್ಥ), ಸೂರ್ಯ ಟಿ.ಡಿ. ಶಿವಮೊಗ್ಗ (ಪಂಚಮ) ಬಹುಮಾನವನ್ನು ಪಡೆದರು. ಮಾಸ್ಟರ್ಸ್ ವಿಭಾಗದಲ್ಲಿ ರಾಜು ಎಸ್. ಹಿಂಗಲಜೆ ಬೆಳಗಾವಿ ಪ್ರಶಸ್ತಿಯನ್ನು ಪಡೆದರು.

ಉಡುಪಿ ಮತ್ತು ದ.ಕ. ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಪ್ರಶಸ್ತಿ ವಿತರಿಸಿದರು. ಶೀರೂರು ಮಠಾಧೀಶರಾದ ಶ್ರೀ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಸ್ಪರ್ಧೆಯನ್ನು ಉದ್ಘಾಟಿಸಿದರು. ಮಾಜಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿಗಳಾದ ಡಾ| ಜೆರ್ರಿ ವಿನ್ಸೆಂಟ್ ಡಯಾಸ್, ಪುರುಶೋತ್ತಮ್ ಶೆಟ್ಟಿ, ಮನೋಹರ್ ಶೆಟ್ಟಿ, ಸುಧೀರ್ ಶೆಟ್ಟಿ, ಗ್ಲೆನ್ ಡಯಾಸ್, ಸಂತೋಷ್ ಮಾಬಿನ್, ರಾಜಾರಾಮ್ ಪೈ, ಶಶಿಧರ್ ಎಸ್. ಕುಂದರ್, ಸಂತೋಷ್ ಸಾಲ್ಯಾನ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಕರ್ನಾಟಕ ಅಸೋಸಿಯೇಶ್ ಆಫ್ ಬಾಡಿ ಬಿಲ್ಡರ್ಸ್‍ನ ಕಾರ್ಯಾಧ್ಯಕ್ಷ ನೀಲಕಂಠ್ ಜೆ., ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ವಿ. ಸಿದ್ದಣ್ಣವರ್, ಸ್ಥಾಪಕಾಧ್ಯಕ್ಷ ನಗರ ನಾರಾಯಣ ಶೆಣೈ, ರಾಜ್ಯ ಉಪಾಧ್ಯಕ್ಷರಾದ ಜಿ.ಡಿ. ಭಟ್, ಸುನಿಲ್ ಅಪ್ಟೇಕರ್, ಪ್ರೇಮ್‍ನಾಥ್ ಉಲ್ಲಾಳ್, ಸಿರಿಲ್ ಡಿ’ಕೋಸ್ಟಾ, ಕೋಶಾಧಿಕಾರಿ ದಿಲೀಪ್ ಕುಮಾರ್, ರಾಷ್ಟ್ರೀಯ ತೀರ್ಪುಗಾರರಾದ ಜಾನ್ ರೆಬೆಲ್ಲೋ, ನಾಗೇಶ್ ಶೆಟ್ಟಿ, ಗಂಗಾಧರ್ ಎಮ್., ಆರ್ಥರ್ ಡಿ’ಸೋಜ, ಸ್ಪರ್ಧೆಯ ಸಂಘಟಕರಾದ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ಉಡುಪಿ ಡಿಸ್ಟ್ರಿಕ್ಟ್(ರಿ.) ಅಧ್ಯಕ್ಷ ಮಿಲಿಂದ್ ಸಾಲ್ಯಾನ್, ಕಾರ್ಯಾಧ್ಯಕ್ಷ ಜೇಸನ್ ಡಯಾಸ್, ಜಿಲ್ಲಾ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಎ.ಶಿವಕುಮಾರ್, ನಿಕಟಪೂರ್ವ ಅಧ್ಯಕ್ಷ ಗೋವರ್ಧನ್ ಬಂಗೇರ, ಕಾರ್ಯಾಧ್ಯಕ್ಷ ಚಂದ್ರಹಾಸ್ ಕಾಂಚನ್, ಕೋಶಾಧಿಕಾರಿ ವಿಶ್ವನಾಥ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಅಧಿಕೃತ ದೇಹದಾಢ್ರ್ಯ ಸ್ಪರ್ಧೆ ‘ಮಿ| ಕರ್ನಾಟಕ-2018’ರ ವಿವಿಧ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತ ದೇಹದಾಢ್ರ್ಯ ಪಟುಗಳು ಮಾರ್ಚ್ 23ರಿಂದ 25ರ ತನಕ ಪುಣೆಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಅಧಿಕೃತ ದೇಹದಾಢ್ರ್ಯ ಸ್ಪರ್ಧೆ ‘ಮಿ| ಇಂಡಿಯಾ-2018’ರಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.

ಸೀನಿಯರ್ಸ್ ವಿಭಾಗದ ವಿಜೇತರು: 55 ಕೆ.ಜಿ.: ಮಣಿಕಂಠ್ ಮುರುಡೇಶ್ವರ್ ಉ.ಕ.(ಪ್ರ.), ಅಭಿಲಾಷ್ ದ.ಕ.(ದ್ವಿ.), ಬಾಬನ್ ಪೆÇಥೆ ಬೆಳಗಾವಿ(ತೃ.), ಪ್ರತಾಪ್ ಸಾಲ್ಯಾನ್ ಉಡುಪಿ(ಚ.), ಕೆದಾರ್ ಪಾಟೀಲ್ ಬೆಳಗಾವಿ(ಪಂ.); 60 ಕೆ.ಜಿ.: ಉಮೇಶ್ ಗುನ್ಗಾನೆ ಬೆಳಗಾವಿ(ಪ್ರ.), ವಿಕಾಸ್ ಶಹುಪುರ್ಕರ್ ಬೆಳಗಾವಿ(ದ್ವಿ.), ಪ್ರಜ್ವಲ್ ರಾವ್ ದ.ಕ.(ತೃ.), ಅರ್ಜುನ್ ಪೂಜಾರಿ ಉಡುಪಿ(ಚ.), ಮಿಲಿಂದ್ ಪಾಟೀಲ್ ಬೆಳಗಾವಿ(ಪಂ.); 65 ಕೆ.ಜಿ.: ರಾಮಪ್ಪ ದೊಡ್ಡನ್ನವರ್ ಬೆಳಗಾವಿ(ಪ್ರ.), ದಿನೇಶ್ ಕುಮಾರ್ ಎಮ್.ವಿ. ಬೆಂಗಳೂರು(ದ್ವಿ), ವಿವೇಕ್ ಪೆÇಥೆ ಬೆಳಗಾವಿ(ತೃ.), ಅನಿಲ್ ನಾೈಕ್ ಉ.ಕ.(ಚ.), ಉಮೆಶ್ ಸಂಬ್ರೆಕರ್ ಬೆಳಗಾವಿ(ಪಂ.); 70 ಕೆ.ಜಿ.: ರಕ್ಷಿತ್ ಕೋಟ್ಯಾನ್ ಉಡುಪಿ(ಪ್ರ.), ತಾನಾಜಿ ಚೌಗ್ಲೆ ಬೆಳಗಾವಿ(ದ್ವಿ.), ಕಿರಣ್ ಕುಮಾರ್ ಎಸ್. ಬೆಂಗಳೂರು(ತೃ.), ರಾಜು ಹಿಂಗಲಜೆ ಬೆಳಗಾವಿ(ಚ.), ಚೇತನ್ ಕೋಟ್ಯಾನ್ ಉಡುಪಿ(ಪಂ.); 75 ಕೆ.ಜಿ.: ಸೌಜನ್ಯ ಎ.ಶೆಟ್ಟಿ ಉಡುಪಿ(ಪ್ರ.), ಸ್ವರೂಪ್ ಬಂಗೇರ ಉಡುಪಿ(ದ್ವಿ.), ಪ್ರತಾಪ್ ಕಲ್ಕುಂದ್ರಿಕರ್ ಬೆಳಗಾವಿ(ತೃ.), ಎಸ್.ಅಪ್ಪುರಾಜ್ ಬೆಂಗಳೂರು(ಚ.), ರಂಜಿತ್ ಪಿ.ಆರ್. ದ.ಕ.(ಪಂ.); 80 ಕೆ.ಜಿ.: ಸಿದ್ದು ದೇಶ್ನೂರ್ ಬೆಳಗಾವಿ(ಪ್ರ.), ಪ್ರವೀಣ್ ಕನ್ಬಾನ್ಕರ್ ಬೆಳಗಾವಿ(ದ್ವಿ.), ವಿಕಾಸ್ ಸೂರ್ಯವಂಶಿ ಬೆಂಗಳೂರು(ತೃ.), ಗಜಾನನ್ ಕಲಟಿಕರ್ ಬೆಳಗಾವಿ(ಚ.), ಜಾಕೊಬ್ ಕೆ.ಜೆ. ಬೆಂಗಳೂರು(ಪಂ.); 85 ಕೆ.ಜಿ.: ಲಿಝೋ ಜಾನ್ ಬೆಂಗಳೂರು(ಪ್ರ.), ನವೀನ್ ಡಿಡಬ್ಲ್ಯುಡಿ.(ದ್ವಿ.), ಸಂದೀಪ್ ಕುಮಾರ್ ಶಿವಮೊಗ್ಗ(ತೃ.), ಎಸ್.ಮುರುಗೇಶ್ ಬೆಂಗಳೂರು(ಚ.), ದಯಾನಂದ್ ನಿಜಲ್ಕರ್ ಬೆಳಗಾವಿ(ಪಂ.); 85+ ಕೆ.ಜಿ.: ಪ್ರೀತಮ್ ಚೆ ಚೌಗ್ಲೆ ಬೆಳಗಾವಿ(ಪ್ರ.), ಲೆವಿನ್ ದ.ಕ.(ದ್ವಿ.), ಅಭಿಷೇಕ್ ಗೌಡರ್ ಡಿಡಬ್ಲ್ಯುಡಿ.(ತೃ.), ಎಮ್.ಡಿ. ಅಶ್ರಫ್ ಬೆಂಗಳೂರು(ಚ.), ಶ್ರೀಕಾಂತ್ ಕೆ.ವಿ. ಬೆಂಗಳೂರು(ಪಂ.). ಬಹುಮಾನ ಪಡೆದರು. ಮಾಸ್ಟರ್ಸ್ ವಿಭಾಗದ ವಿಜೇತರು: 40 ವರ್ಷ ಮೇಲ್ಪಟ್ಟು: ರಾಜು ಎಸ್. ಹಿಂಗಲಜೆ ಬೆಳಗಾವಿ(ಪ್ರ.), ಮುರುಗೇಶ್ ಎಸ್. ಬೆಂಗಳೂರು(ದ್ವಿ.), ಅನಿಲ್ ನಾೈಕ್ ಉ.ಕ.(ತೃ.), ಸಂತೋಷ್ ವಡ್ಕರ್ ದ.ಕ.(ಚ.), ಸ್ಟ್ಯಾನಿ ಅಂತೋನಿ ಬೆಂಗಳೂರು(ಪಂ.); 50 ವರ್ಷ ಮೇಲ್ಪಟ್ಟು: ಜಯಣ್ಣ ಸಿ.ಎ. ದ.ಕ.(ಪ್ರ.), ಗಿಲ್ಬರ್ಟ್ ಡಯಾಸ್ ಶಿವಮೊಗ್ಗ(ದ್ವಿ.), ಮಾರುತಿ ಪರಬ್ ಬೆಳಗಾವಿ(ತೃ.), ಸದಾನಂದ್ ಬದವನಚೆ ಬೆಳಗಾವಿ(ಚ.), ಗಣೇಶ್ ಪೂಜಾರಿ ದ.ಕ.(ಪಂ.); 60 ವರ್ಷ ಮೇಲ್ಪಟ್ಟು: ವಾಲ್ಟರ್ ಡಿ’ಕೋಸ್ಟ ದ.ಕ.(ಪ್ರ.), ರವಿ ಕುಮಾರ್ ದ.ಕ.(ದ್ವಿ.), ಎಸ್.ಡಿ. ನಾೈಕ್ ಉ.ಕ.(ತೃ.), ಸುರೇಶ್ ದಮ್ನೆಕರ್ ಬೆಳಗಾವಿ(ಚ.), ನಂಜುಂಡ ಗೌಡ ಶಿವಮೊಗ್ಗ(ಪಂ.) ಬಹುಮಾನ ಪಡೆದರು. ಟೀಮ್ ಚಾಂಪಿಯನ್ಶಿಪ್: ಉಡುಪಿ ಜಿಲ್ಲೆ ಪ್ರಥಮ ಹಾಗೂ ಬೆಳಗಾವಿ ಜಿಲ್ಲೆ ದ್ವಿತೀಯ ಪ್ರಶಸ್ತಿಯನ್ನು ಪಡೆಯಿತು.

No Comments

Leave A Comment